ಶನಿವಾರ, ಜನವರಿ 18, 2020
21 °C

‘ಜಿಡಿಪಿ‘ ಶೇ 4.7ಕ್ಕೆ ‘ಎಡಿಬಿ’ ಅಂದಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ‘ಜಿಡಿಪಿ’ ಶೇ 4.7ರಷ್ಟು ಪ್ರಗತಿ ಕಾಣಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಅಂದಾಜು ಮಾಡಿದೆ.

ರಫ್ತು ಚೇತರಿಕೆ ಕಂಡರೆ, ಕೈಗಾರಿಕೆ ಮತ್ತು ಕೃಷಿ ವಲಯಗಳು ಉತ್ತಮ ಸಾಧನೆ ತೋರಿದರೆ, 2014–15ನೇ ಸಾಲಿನಲ್ಲಿ ಭಾರತದ ಆರ್ಥಿಕತೆ ಶೇ 5.7ರವರೆಗೆ  ಬೆಳವಣಿಗೆ ಕಾಣುವ ಸಾಮರ್ಥ್ಯ ಹೊಂದಿದೆ ಎಂದು ‘ಎಡಿಬಿ’ ನ  ಆರ್ಥಿಕ ಮುನ್ನೋಟ ವರದಿ ಹೇಳಿದೆ.ಹಣಕಾಸು ಮಾರುಕಟ್ಟೆ ಚೇತರಿಕೆ ಕಂಡಿರುವುದರಿಂದ ಮೊದಲ ತ್ರೈಮಾಸಿ­ಕದಲ್ಲಿ ಶೇ 4.4ಕ್ಕೆ ಕುಸಿದಿದ್ದ ‘ಜಿಡಿಪಿ’ ದ್ವಿತಿಯಾರ್ಧದಲ್ಲಿ ಶೇ 4.8ಕ್ಕೆ ಏರಿಕೆ ಕಾಣಲಿದೆ ಎಂದೂ ಅಧ್ಯಯನ ಹೇಳಿದೆ.

ಪ್ರತಿಕ್ರಿಯಿಸಿ (+)