ಬುಧವಾರ, ಜೂನ್ 23, 2021
22 °C

‘ತೃತೀಯ ರಂಗವೇ ನಿರ್ಣಾಯಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಗಟಿ(ಕಡೂರು): ಹಲವು ವೈರುಧ್ಯಗಳ ನಡುವೆ ತೃತೀಯ ರಂಗವು ಪ್ರಬಲವಾಗುತ್ತಾ ಸಾಗುತ್ತಿದ್ದು ಮುಂಬ ರುವ ಲೋಕಸಭಾ ಚುನಾವಣೆಗಳಲ್ಲಿ ಎನ್‌ಡಿಎ ಮತ್ತು ಯುಪಿಎ ನಿಗದಿತ ಸಂಖ್ಯೆ 272 ಸ್ಥಾನ ತಲುಪಲು ವಿಫಲ ವಾಗಲಿದ್ದು  ತೃತೀಯ ರಂಗವೇ ಸರ್ಕಾರ ರಚಿಸುವ ಮತ್ತು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಗಳು ನಿಚ್ಚಳ ವಾಗಿವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಿಶ್ಲೇಷಿಸಿದರು.ಯಗಟಿ ಗ್ರಾಮದ ಶಾಸಕ ವೈ.ಎಸ್‌. ವಿ.ದತ್ತ ಅವರ ನಿವಾಸದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದರು.

ತೃತೀಯ ರಂಗ ಹಲವು ಬಾರಿ ವಿಫಲವಾಗಿದೆಯಲ್ಲವೇ? ಎಂಬ ಪತ್ರಕರ್ತರ ಪ್ರಶ್ನೆಗೆ, ಕಳೆದ 10 ವರ್ಷ ಗಳಿಂದ ಅಧಿಕಾರದಲ್ಲಿರುವ ಯುಪಿಎ ಅದಕ್ಕೂ ಮುನ್ನ ಆಡಳಿತ ನಡೆಸಿದ ಎನ್‌ಡಿಎ ಸಫಲವಾಗಿವೆಯೇ? ಎಂದು ಮರುಪ್ರಶ್ನಿಸಿದ ಅವರು, ತೀರ್ಪು ಕೊಡುವವರು ಜನ, ಅವರು ಎಲ್ಲವನ್ನೂ ಗಮನಿಸುತ್ತಿದ್ದು ಇಂದಿರಾ ಗಾಂಧಿಯವರ ಆಡಳಿತ ವೈಖರಿ, ಎನ್‌ಡಿಎ ಮತ್ತು ಯುಪಿಎ ಆಡಳಿತ ಸೇರಿದಂತೆ ನನ್ನ 10 ತಿಂಗಳ ಅಧಿಕಾರಾ ವಧಿಯನ್ನೂ ನೋಡಿದ್ದಾರೆ.ಚಂದ್ರ ಶೇಖರ್‌ ಮತ್ತು ನನ್ನ ಸರ್ಕಾರ ವನ್ನು ಕೆಡವಲು ಕಾಂಗ್ರೆಸ್‌ ನಡೆಸಿದ ಕುತಂತ್ರದ ಬಗ್ಗೆಯೂ ಅರಿತಿದ್ದಾರೆ. ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಬೇಕಾದಾಗ ಮಾತ್ರ ಬಳಸಿಕೊಳ್ಳುತ್ತವೆ ಎಂದು ಬಿಸಿ ಉತ್ತರ ನೀಡಿದರು.ತೃತೀಯ ರಂಗ ಬಲಿಷ್ಠವಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತೃತೀಯ ರಂಗದ 11 ಪಕ್ಷಗಳು ಆಯಾ ರಾಜ್ಯಗಳಲ್ಲಿ  ಸಮರ್ಥವಾಗಿದ್ದು ಎಲ್ಲರೂ ಒಗ್ಗೂಡಿ ಚುನಾವಣಾ ಸೂತ್ರ ರಚಿಸುತ್ತೇವೆ. ನಾಯಕತ್ವ ಪ್ರಶ್ನೆ ಬಳಿಕ ತೀರ್ಮಾನವಾಗಲಿದೆ ಎಂದರು.

ನರೇಂದ್ರಮೋದಿ ಕುರಿತ ಪ್ರಶ್ನೆಗೆ ಮೀನು ಹಿಡಿಯುವ ಪೋಸು ಕೊಟ್ಟ ತಕ್ಷಣ ಅಥವಾ ನರೇಂದ್ರ ಮೋದಿ ಟೀಸ್ಟಾಲ್‌ ಹಾಕಿದ ತಕ್ಷಣ ಚುನಾವಣೆ ಅಥವಾ ಮತದಾರನ ಮನದ ಮೇಲಿನ ಗೆಲುವು ಸಾಧ್ಯವಿಲ್ಲ.ಮೋದಿಯವರಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಉತ್ತಮ ಆಡಳಿತ ನೀಡಿದ್ದಾರೆ. ಗುಜರಾತ್‌ ಮುಖ್ಯಮಂತ್ರಿ ಆದ ತಕ್ಷಣ ಮೋದಿ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ. ಮಾಧ್ಯಮಗಳು ಏಕೆ ಮೊದಿಯವರಿಗೆ ಪ್ರಾಮುಖ್ಯತೆ ನೀಡುತ್ತಿವೆಯೋ ತಿಳಿದಿಲ್ಲ ಎಂದು ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ವೈ.ಎಸ್‌. ವಿ.ದತ್ತ, ಜೆಡಿಎಸ್‌ ಮುಖಂಡ ರಾದ ಮಂಜಪ್ಪ, ಎಚ್‌.ಎಚ್‌. ದೇವ ರಾಜ್‌, ಕೋಡಿಹಳ್ಳಿ ಮಹೇಶ್‌, ನಿಂಗಪ್ಪ, ನೀಲಕಂಠಪ್ಪ ಮುಂತಾದವರು ಇದ್ದರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.