ಸೋಮವಾರ, ಜೂನ್ 21, 2021
23 °C

‘ಧರ್ಮಗಳಲ್ಲಿನ ಉತ್ತಮ ಗುಣ ಅಳವಡಿಸಿಕೊಳ್ಳಿ-’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಗತ್ತಿನಲ್ಲಿ ಅನೇಕ ಧರ್ಮಗಳಿದ್ದು, ಎಲ್ಲ ಧರ್ಮಗಳ ಸಾರ ಒಂದೇ. ವಿವಿಧ ಧರ್ಮಗಳಲ್ಲಿರುವ ಉತ್ತಮ ಅಂಶಗಳನ್ನು ತೆಗೆದುಕೊಂಡು ಶಾಂತಿ, ಸಹೋದರತೆಯಿಂದ ಬಾಳಿ­ದಾಗ ಮಾತ್ರ ಅನೇಕತೆಯಲ್ಲಿ ಏಕತೆ­ಯನ್ನು ಕಾಣಬಹುದು ಎಂದು ಶಾಸಕ ಡಾ.ಎ.ಬಿ.ಮಾಲಕರಡ್ಡಿ ಹೇಳಿದರು.ಶಹಾಪುರ ತಾಲ್ಲೂಕಿನ ಹಬಸಿಹಾಳ ಗ್ರಾಮದಲ್ಲಿ ಜನಾಬ್‌ ಚಾಂದ್‌ ಪಟೇಲ್ ರಿಲೀಜಿಯಸ್ ಟ್ರಸ್ಟ್‌ ಭಾನು­ವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬೆಂಗಳೂರಿನ ಎಂಬಿಸಿ ಗ್ರೂಪ್‌ನ ಅನುದಾನದಲ್ಲಿ ನಿರ್ಮಿಸಿದ ಜಾಮಿಯಾ ಮಸ್ಜೀದ್‌ -ಎ -ಬಿಲಾಲ್ ಉದ್ಘಾಟನೆ ಹಾಗೂ ಮುಸ್ಲಿಂ ಬಾಂಧವರ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.ಪ್ರೀತಿ, ಪ್ರೇಮ, ಸಹನೆ ಎಂಬ ಮೂರು ಅಮೂಲ್ಯ ರತ್ನಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿ­ಕೊಳ್ಳಬೇಕು. ಆಗ ಮಾತ್ರ ಸಮಾಜ­ದಲ್ಲಿ ಭಾವೈಕ್ಯ ಹಾಗೂ ದೇಶದ ಪ್ರಗತಿಗೆ ಸಹಕಾರಿ ಆಗಲಿದೆ ಎಂದರು.ಈ ಮಸೀದಿ ಎಲ್ಲರ ಆಸ್ತಿ. ಇದನ್ನು ಪ್ರತಿಯೊಬ್ಬರು ತನ್ನದೆಂದು ತಿಳಿಯ­ಬೇಕು. ಈ ಮಸೀದಿಗೆ ಸುಮಾರು ₨50 ಲಕ್ಷ ದೇಣಿಗೆಯಾಗಿ ಕೊಟ್ಟ ಎಂಬಿಸಿ ಗ್ರೂಪ್‌ ಅಧ್ಯಕ್ಷರ ಕಾರ್ಯ ಶ್ಲಾಘ­ನೀಯ. ಇಂಥವರಿಗೆ ನಾವೆಲ್ಲರೂ ಪ್ರೋತ್ಸಾಹ ನೀಡಿದರೆ, ಇನ್ನೂ ಹೆಚ್ಚಿನ ಸಮಾಜ ಕಾರ್ಯಗಳನ್ನು ನಿರೀಕ್ಷಿಸ­ಬಹುದು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.