ಶನಿವಾರ, ಫೆಬ್ರವರಿ 27, 2021
19 °C
ಮಹಿಳಾ ಧೂಮಪಾನಿಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ

‘ಧೂಮಪಾನ ಜೀವಕ್ಕೆ ಕುತ್ತು ತರಬಹುದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಧೂಮಪಾನ ಜೀವಕ್ಕೆ ಕುತ್ತು ತರಬಹುದು’

ನವದೆಹಲಿ(ಐಎಎನ್ಎಸ್‌): ಜಗತ್ತಿನಾ­ದ್ಯಂತ ಪ್ರತಿ­ವರ್ಷ ಸುಮಾರು 50ರಿಂದ 60 ಲಕ್ಷ ಜನರ ಸಾವಿಗೆ ತಂಬಾಕು ಸೇವನೆಯೇ ಪ್ರಮುಖ ಕಾರಣ. ಇವೆಲ್ಲ ತಡೆಗಟ್ಟಬಹುದಾದ ಸಾವಿನ ಪ್ರಕರಣಗಳು  ಎಂದು ಆರೋಗ್ಯ  ತಜ್ಞರು ಅಭಿಪ್ರಾಯಪಟ್ಟಿದ್ದಾರೆ.‘ಕಳೆದ ಶತಮಾನದಲ್ಲಿ ತಂಬಾಕು ಸೇವನೆಯಿಂದ ಸುಮಾರು 10 ಕೋಟಿ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾ­ಜಿ­ಸಲಾಗಿದೆ. ಇದು ಹೀಗೇ ಮುಂದು­ವ­ರಿ­ದರೆ 21ನೇ ಶತಮಾನ­ದಲ್ಲಿ ತಂಬಾಕು ಸೇವನೆ­ಯಿಂದ ಸಾಯುವವರ ಸಂಖ್ಯೆ 100 ಕೋಟಿಗೆ ತಲು­ಪ­ಬಹುದು’ ಎಂದು  ಕ್ಲೀಯರ್‌ ಮೆಡಿ ಹೆಲ್ತ್‌­ಕೇರ್‌ ಲಿಮಿಟೆ­ಡ್‌ನ ವ್ಯವಸ್ಥಾಪಕ ನಿರ್ದೇಶಕ ಶಶಿಕಾಂತ್‌ ಬಲಿಯಾನ್‌ ಹೇಳಿದ್ದಾರೆ.ನೇರ ಧೂಮಪಾನ ಸೇವನೆಯಿಂದ ಪ್ರತಿವರ್ಷ 50 ಲಕ್ಷ ಜನರು ಸಾಯುತ್ತಾರೆ. ಆರು ಲಕ್ಷ ಜನರು ಪರೋಕ್ಷ ಧೂಮಪಾನದಿಂದ ಸಾಯುತ್ತಿ­ದ್ದಾರೆ. ಇವರಲ್ಲಿ ಅನೇಕರು ಅಪ್ರಾಪ್ತ ವಯಸ್ಕರಾಗಿ­ರುತ್ತಾರೆ’ ಎಂದು ಬಲಿಯಾನ್‌ ವಿವರಿಸಿದ್ದಾರೆ.ದೆಹಲಿಯ ಸರ್‌ ಗಂಗಾರಾಮ್‌ ಆಸ್ಪತ್ರೆಯ ಹೃದ್ರೋಗ ತಜ್ಞರಾದ ರಜನೀಶ್‌ ಅವರ ಪ್ರಕಾರ ತಂಬಾಕು ಸೇವನೆ ಇದೇ ರೀತಿ ಮುಂದುವರಿದದ್ದೇ ಆದರೆ  2030ರ ಹೊತ್ತಿಗೆ ಸುಮಾರು 80 ಲಕ್ಷ ಜನರು ತಂಬಾಕಿನ ದುಶ್ಚಟಕ್ಕೆ ಜೀವ ತೆರಬೇಕಾಗಬಹುದು.‘ನಮ್ಮ ಆಸ್ಪತ್ರೆಯ ಕ್ಯಾನ್ಸರ್‌ ರೋಗಿಗಳನ್ನು ಸಂದರ್ಶಿ­ಸಿದಾಗ ಕತ್ತು, ತಲೆ, ಮತ್ತು ಗಂಟಲ ಕ್ಯಾನ್ಸರ್‌­ನಿಂದ ಬಳಲುತ್ತಿರುವ  ಶೇ 80ರಿಂದ 90 ರೋಗಿ­ಗಳು ತಂಬಾಕು ಸೇವನೆಯಿಂದ ರೋಗಕ್ಕೆ ತುತ್ತಾದವರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಭಾರತದಲ್ಲಿ ಪ್ರತಿವರ್ಷ 10 ಲಕ್ಷಕ್ಕೂ ಅಧಿಕ ಜನರು ತಂಬಾಕು ಸಂಬಂಧೀ ರೋಗದಿಂದ ಅಕಾಲಿಕವಾಗಿ ಮರಣ ಹೊಂದುತ್ತಿದ್ದಾರೆ’ ಎಂದು ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯ ಕ್ಯಾನ್ಸರ್‌ ತಜ್ಞ ಪಂಕಜ್‌ ಚತುರ್ವೇದಿ ಹೇಳಿದ್ದಾರೆ.ತಂಬಾಕು ಸೇವನೆಯಿಂದ ಪುಪ್ಪುಸ ಕ್ಯಾನ್ಸರ್‌ಗೆ ತುತ್ತಾ­ದವರಲ್ಲಿ ಶೇ 10ರಷ್ಟು ರೋಗಿಗಳು ಯುವಕ­ರಾಗಿ­­ದ್ದಾರೆ. 2020ರ ಹೊತ್ತಿಗೆ ಪ್ರತಿ 10 ಪುಪ್ಪುಸ ಕ್ಯಾನ್ಸರ್‌ ರೋಗಿಗಳಲ್ಲಿ 5 ಜನರು ತಂಬಾಕು ಸೇವನೆಯಿಂದ ರೋಗಕ್ಕೆ ತುತ್ತಾದವರಾಗಿರುತ್ತಾರೆ ಎಂದು ನೀರಜ್‌ ಗುಪ್ತಾ ಹೇಳುತ್ತಾರೆ.ಮಹಿಳೆಯರ ಸಂಖ್ಯೆ ಹೆಚ್ಚಿದೆಯೇ?: ’ಹೌದು’ ಎನ್ನುತ್ತಾರೆ ತಜ್ಞರು.

ಕಳೆದ ಎರಡು ದಶಕದಲ್ಲಿ ತಂಬಾಕು ಉತ್ಪನ್ನ­ಗಳನ್ನು ಸೇವಿಸುವ ಮಹಿಳೆಯರ ಸಂಖ್ಯೆ­ಯಲ್ಲಿ ಗಮನಾರ್ಹ ಹೆಚ್ಚಳವಾಗಿದೆಯಂತೆ.

‘ಒತ್ತಡ, ನಗರೀಕರಣ ಮತ್ತು ಆಧುನೀಕರಣದ ಪರಿ­­ಣಾಮವಾಗಿ ಮಹಿ­ಳೆ­ಯರು ಕೂಡ ವ್ಯಾಪಕ­ವಾಗಿ ತಂಬಾಕು ಉತ್ಪನ್ನಗಳ ಸೇವನೆಯಲ್ಲಿ ತೊಡಗಿ­ಕೊಂಡಿ­­­­ದ್ದಾರೆ. ಈ ಹಿಂದೆ ಸಾಮಾಜಿಕ ಕಟ್ಟಳೆಯ ಕಾರ­ಣ­­­ದಿಂದ ಮಹಿಳೆ ತಂಬಾಕು ಸೇವನೆಯಿಂದ ದೂರ­­­ವಿದ್ದಳು.  ಇಂದು ಪ್ರತಿ 10 ಮಹಿಳೆಯರಲ್ಲಿ ಮೂವರು ನೇರ ಅಥವಾ ಪರೋಕ್ಷ ಧೂಮಪಾನ ಸೇವನೆ­-­ಯಲ್ಲಿ ತೊಡಗಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.ತಂಬಾಕು ಸೇವನೆಯಿಂದ ರೋಗಕ್ಕೆ ತುತ್ತಾ­ಗುವ ಸಾಧ್ಯತೆ ಪುರುಷರಿಗಿಂತ ಮಹಿಳೆ­ಯರಲ್ಲಿ ಹೆಚ್ಚು ಎಂದೂ ತಜ್ಞರು ಒಪ್ಪಿಕೊಳ್ಳುತ್ತಾರೆ. ‘ಅವರ ದೇಹ ಮತ್ತು ಜೈವಿಕ ಕ್ರಿಯೆಗಳು ತುಂಬ ದುರ್ಬಲ­ವಾಗಿ­ರು­ತ್ತದೆ. ಯಾವುದೇ ರೀತಿಯ ಅಸಹಜತೆ ಅವರ ಮೇಲೆ ಪ್ರತಿಕೂಲ ಪರಿಣಾಮ­ವನ್ನು ಬೀರುತ್ತದೆ. ಈ ವಾಸ್ತ­ವ­ವನ್ನು ಮಹಿಳೆಯರು ಒಪ್ಪಿಕೊಳ್ಳ­ಬೇಕು’ ಎಂದು ಕ್ಯಾನ್ಸರ್‌  ತಜ್ಞ ಜೈನ್‌ ಹೇಳುತ್ತಾರೆ.ಧೂಮಪಾನ ಗರ್ಭದಲ್ಲಿನ ಶಿಶುಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಅವಧಿಗೂ ಮುನ್ನ ಹೆರಿಗೆಯಾಗುವ ಸಂಭವವೂ ಹೆಚ್ಚಾ­ಗಿರು­ತ್ತದೆ. ಆದ್ದರಿಂದ ಗರ್ಭಿಣಿ ಸ್ತ್ರೀಯರು ಧೂಮಪಾನ ಮಾಡುವುದು ಅತ್ಯಂತ ಹಾನಿಕರ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.ಫಲವಂತಿಕೆ ಕುಂಠಿತ

ಧೂಮಪಾನ 4,000 ರಾಸಾಯನಿಕ ಪದಾ­ರ್ಥ­ಗಳನ್ನು ಒಳಗೊಂಡಿ­ರುತ್ತದೆ. ಇವುಗಳಲ್ಲಿ 69 ನೇರವಾಗಿ ಕ್ಯಾನ್ಸರ್‌ ಜನಕ ರಾಸಾಯನಿಕ­ಗಳಾ­ಗಿವೆ. ಧೂಮಪಾನದಿಂದ ಗರ್ಭಧಾರಣೆಗೆ ಅಡ್ಡಯಾಗುತ್ತದೆ. ಗಂಡಾಗಲಿ ಹೆಣ್ಣಾ­ಗಲಿ ಧೂಮ­ಪಾನ­ದಿಂದ  ಫಲವಂತಿಕೆ ಕುಂಠಿ­ತವಾಗು­ತ್ತದೆ. ಗಂಡಸ­ರಲ್ಲಿ ಧೂಮ­ಪಾನದಿಂದ ವೀರ್‍ಯಾಣು­ಗಳ ಪ್ರಮಾಣ ಕಡೆಮೆ­ಯಾಗುತ್ತದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ’ ಎಂದು ಗುಡಗಾಂವ್‌ ಕೊಲಂಬಿಯಾ ಏಷ್ಯಾ ಆಸ್ಪ­ತ್ರೆಯ ಸಲಹೆಗಾರ ಕೈಲಾಶ್‌ ನಾಥ್‌ ಗುಪ್ತಾ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.