ಭಾನುವಾರ, ಜೂನ್ 20, 2021
23 °C

‘ನನ್ನ ಪಾತ್ರ ಅಭಿಮಾನಿಗಳಿಗೆ ಅಚ್ಚರಿ ತರಲಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಯಾ ಅಖ್ತರ್ ಜೊತೆ ಕೆಲಸ ಮಾಡುತ್ತಿರುವ ಬಗ್ಗೆ ತುಂಬಾ ಉತ್ಸುಕರಾಗಿರುವ ನಟ ರಣವೀರ್ ಸಿಂಗ್, ಈ ಹೊಸ ಸಿನಿಮಾದಲ್ಲಿನ ತಮ್ಮ ಪಾತ್ರ ಅಭಿಮಾನಿಗಳಿಗೆ ತುಂಬಾ ಅಚ್ಚರಿ ತರಲಿದೆ ಎಂದು ಹೇಳಿಕೊಂಡಿದ್ದಾರೆ.‘ಅತಿ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ ಜೋಯಾ. ಅಂಥವರ ಬಳಿ ಕೆಲಸ ಮಾಡಲು ತುಂಬಾ ಖುಷಿ ಎನಿಸುತ್ತಿದೆ. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿನ ನನ್ನ ಪಾತ್ರ, ನನ್ನನ್ನು ಒಬ್ಬ ನಟನನ್ನಾಗಿ ರೂಪಿಸುವಲ್ಲಿ ಸಹಾಯ ಮಾಡಿದೆ ಹಾಗೂ ನನ್ನ ಅಭಿನಯದಿಂದ ಪ್ರೇಕ್ಷಕರು ಅಚ್ಚರಿಗೊಳ್ಳುವುದಕ್ಕೂ ಒಂದು ಅವಕಾಶ ದೊರೆತಿದೆ’ ಎಂದು ಖುಷಿಯಿಂದ ನುಡಿದರು ರಣವೀರ್.ಈ ಚಿತ್ರದಲ್ಲಿ ರಣವೀರ್ ಮುಖ್ಯ ಪಾತ್ರದಲ್ಲಿದ್ದು, ಈ ಸಿನಿಮಾ ಹೆಸರು ‘ದಿಲ್ ಧಡಕ್‌ನೆ ದೋ’ ಇರಬಹುದು ಎಂಬ ಮಾತು ಕೇಳಿಬರುತ್ತಿದೆ.

ಜೋಯಾ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಫರ್‍ಹಾನ್ ಅಖ್ತರ್ ಕೂಡ ನಟಿಸಲಿದ್ದಾರೆ.ಈ ಚಿತ್ರದಲ್ಲಿ ರಣವೀರ್ ಲುಕ್‌ ಹೇಗಿದೆ ಎಂಬ ವಿಷಯವನ್ನು ಜೋಯಾ ಗುಟ್ಟಾಗಿ ಇಟ್ಟಿದ್ದಾರಂತೆ. ಅಷ್ಟೇ ಅಲ್ಲದೆ ರಣವೀರ್ ಕೂಡ ಜೋಯಾ ಅವರ ಈ ಚಿತ್ರ ಮುಗಿಯುವವರೆಗೆ ಯಾವುದೇ ಚಿತ್ರಕ್ಕೂ ಸಹಿ ಹಾಕುವುದಿಲ್ಲ ಎಂಬ ಒಪ್ಪಂದಕ್ಕೂ ಬಂದಿದ್ದಾರೆ.

ರಣವೀರ್ ಈ ಚಿತ್ರದಲ್ಲಿ ತೊಂಬತ್ತು ದಿನಗಳ ಕಾಲ ಕೆಲಸ ಮಾಡಲಿದ್ದು, ಯುರೋಪ್, ಟರ್ಕಿ, ಸ್ಪೇನ್, ಇಟಲಿ ಮತ್ತು ಫ್ರಾನ್ಸ್‌ನಲ್ಲಿ ಚಿತ್ರೀಕರಣ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.