ಸಿಡ್ನಿ (ಪಿಟಿಐ): ‘ ನಾಲ್ಕನೇ ಕ್ರಮಾಂಕ ದಲ್ಲಿ ಬ್ಯಾಟಿಂಗ್ ಮಾಡುವುದು ಇಷ್ಟ. ಈ ಕ್ರಮಾಂಕ ನನ್ನ ಆಟದ ಶೈಲಿಗೆ ಹೊಂದಿಕೆ ಯಾಗುತ್ತದೆ’ ಎಂದು ಮನೀಷ್ ಪಾಂಡೆ ಹೇಳಿದ್ದಾರೆ. ಶನಿವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಐದನೇ ಪಂದ್ಯದಲ್ಲಿ ಮನೀಷ್ 81 ಎಸೆತಗಳಲ್ಲಿ ಅಜೇಯ 104ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

‘ಕ್ರೀಸ್ಗೆ ಬಂದು ನಾಲ್ಕು ಎಸೆತ ಗಳನ್ನು ಎದುರಿಸಿದರೆ ಪಿಚ್ನ ಗುಣ ಎಂತಹದ್ದು ಎಂಬುದರ ಅರಿವಾಗುತ್ತದೆ. ಬಳಿಕ ಪಿಚ್ಗೆ ಅನುಗುಣವಾಗಿ ಆಟದ ಶೈಲಿ ಯಲ್ಲಿ ಬದಲಾವಣೆ ಮಾಡಿಕೊಳ್ಳು ತ್ತೇನೆ. ಪ್ರತಿ ಎಸೆತದಲ್ಲೂ ಬೌಂಡರಿ ಗಳಿಸುವುದು ಕಷ್ಟ. ಹೀಗಾಗಿ ಒಂದು ಇಲ್ಲವೇ ಎರಡು ರನ್ ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸುವ ಕೆಲಸ ಮಾಡಬೇಕು. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದಲ್ಲಿ ನಾನು ಇದನ್ನೆ ಮಾಡಿದೆ’ ಎಂದು ಅವರು ಹೇಳಿದ್ದಾರೆ.

‘ಶತಕ ಗಳಿಸಿದ ಬಳಿಕ ಬ್ಯಾಟ್ ಮೇಲಕ್ಕೆ ಎತ್ತಿ ಹೆಲ್ಮೆಟ್ಗೆ ಮುತ್ತಿಕ್ಕು ತ್ತಿರುವ ಚಿತ್ರಣ ನನ್ನ ಮನದಲ್ಲಿ ಗಾಢ ವಾಗಿ ಬೇರೂರಿತ್ತು. ಹೀಗಾಗಿ ಶತಕದ ಅಂಚಿನಲ್ಲಿದ್ದಾಗ ಎದೆ ಬಡಿತ ಹೆಚ್ಚಾಗು ತ್ತಿತ್ತು. ಮಾರ್ಷ್ ಬೌಲ್ ಮಾಡಿದ ಮೂರನೇ ಎಸೆತದಲ್ಲಿ ಬೌಂಡರಿ ಗಳಿಸುತ್ತಿ ದ್ದಂತೆ ನನ್ನ ಸಂಭ್ರಮಕ್ಕೆ ಪಾರವೇ ಇರಲಿಲ್ಲ’ ಎಂದು ಮನೀಷ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.