ಮಂಗಳೂರು: ಬರಹಗಾರರೆಲ್ಲರೂ ಪ್ರಗತಿಪರರಾಗಿಯೇ ಇರುತ್ತಾರೆ. ಆದರೆ ಹಿಂದೂ ಧರ್ಮದಲ್ಲಿ ಪ್ರಗತಿಪರ ಲೇಖಕರಿಗೆ ಇರುವಷ್ಟು ಪೂರಕ ವಾತಾವರಣ (ಸ್ಪೇಸ್) ಮುಸ್ಲಿಂ ಲೇಖಕರಿಗೆ ಅವರ ಸಮುದಾಯದಲ್ಲಿ ಇಲ್ಲ. ಅವರನ್ನು ಬೆಂಬಲಿಸಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು.

ಅವರು ಶುಕ್ರವಾರ ಮಂಗಳೂರಿನ ಪುರಭವನದಲ್ಲಿ ಮುಸ್ಲಿಂ ಲೇಖಕರ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತ, ಮುಸ್ಲಿಂ ಸಮುದಾಯದಲ್ಲಿದ್ದ ಪ್ರಗತಿಪರ ಲೇಖಕರಿಗೆ ಒಳಗಿನ ಸಂಕಟಗಳನ್ನು ಹೇಳಿಕೊಳ್ಳಬೇಕು ಅನಿಸುತ್ತಿರುತ್ತದೆ. ಆದರೆ ಅದಕ್ಕೆ ಸಿಗಬೇಕಾದ ಬೆಂಬಲ ಅವರ ಸಮುದಾಯದಿಂದ ಸಾಕಷ್ಟು ಪ್ರಮಾಣದಲ್ಲಿ ಸಿಗುವುದಿಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವದ ನಾಡಿನಲ್ಲಿ ಎಲ್ಲ ಸಮುದಾಯ, ಭಾಷೆ, ಜಾತಿಗಳಿಗೆ ಸಮಾನವಾದ ಪ್ರಾತಿನಿಧ್ಯ ಸಿಗಬೇಕು. ಆದರೆ ಭಾರತದಲ್ಲಿ ಈ ಸಮಾನತೆ ಇನ್ನೂ ಸಾಧ್ಯವಾಗಿಲ್ಲ. ಅದೇ ರೀತಿ ಸಾಹಿತ್ಯ ಲೋಕದಲ್ಲಿಯೂ ಬೂಸಾ ಚಳವಳಿ ಆಗುವವರೆಗೆ ಎಲ್ಲ ವರ್ಗದವರ ಸಾಹಿತ್ಯ ಹೊರಬಂದಿರಲಿಲ್ಲ. ಬೂಸಾ ಚಳವಳಿಯ ಬಳಿಕ ದಲಿತರು ಹಿಂದುಳಿದವರೂ ಬರೆಯಲು ಶುರು ಮಾಡಿದ್ದರಿಂದ ಕನ್ನಡ ಸಾಹಿತ್ಯ ಪರಿಪೂರ್ಣತೆಯತ್ತ ಹೊರಳಿದೆ. ಮುಸ್ಲಿಂ ಲೇಖಕರೂ ಕೂಡ ತಮ್ಮ ಒಳದನಿಯನ್ನು ಪ್ರಕಟಪಡಿಸಲು ಮುಂದಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್. ಅಬ್ದುಲ್ ಕರೀಮ್ ದಾವಣಗೆರೆ ಅವರನ್ನು ದಿನೇಶ್ ಅಮೀನ್ ಮಟ್ಟು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಕರೀಮ್ ಅವರು, ಯುವಜನತೆಯಲ್ಲಿ ಓದುವ ಮನೋಭಾವ ಹೆಚ್ಚಬೇಕು ಎಂದರು.
ಮದುವೆ ಮಾರ್ಕೆಟ್ ಎಂಬ ಕೃತಿಯ ಲೇಖಕಿ ಮರಿಯಮ್ ಇಸ್ಮಾಈಲ್ ಅವರಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ಬರಹಗಾರರಿಗೆ ಪ್ರಶಸ್ತಿಯೇ ಪ್ರಧಾನ ಅಲ್ಲದೇ ಇದ್ದರೂ ಅದು ಬರವಣಿಗೆ ಮುಂದುವರೆಸುವುದಕ್ಕೆ ಪ್ರೋತ್ಸಾಹ ಆಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಅತಿಥಿಗಳನ್ನು ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಎ. ಸ ಈದ್ ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್. ಸ್ವಾಗತಿಸಿದರು.

ಕಾರ್ಯಕ್ರಮದ ಬಳಿಕ ಬಹುಭಾಷಾ ಕವಿಗೋಷ್ಠಿ ನಡೆಯಿತು. ತುಳುವಿನಲ್ಲಿ ಮುಹಮ್ಮದ್ ಬಡ್ಡೂರು ಮತ್ತು ಭಾಸ್ಕರ ರೈ ಕುಕ್ಕುವಳ್ಳಿ, ಕನ್ನಡದಲ್ಲಿ ಜ್ಯೋತಿ ಗುರುಪ್ರಸಾದ್, ಅಹ್ಮದ್ ಅನ್ವರ್, ಶಂಶಾದ್ ಜೆ. ಮುಕ್ರಿ, ಬ್ಯಾರಿ ಭಾಷೆಯಲ್ಲಿ ಮುಹಮ್ಮದ್ ಶರೀಫ್ ನಿರ್ಮುಂಜೆ, ಉರ್ದುವಿನಲ್ಲಿ ಸಾಲಿಕ್ ನದ್ವಿ ಕವನ ವಾಚನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.