ಕೃಷ್ಣರಾಜಪುರ:  ‘ಪ್ರಾಥಮಿಕ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸಬೇಕು. ಕೃಷಿಯಲ್ಲಿರುವ ಅವಕಾಶಗಳನ್ನು ಪರಿಚಯಿಸುವ ಪಠ್ಯಗಳನ್ನು ಅಳವಡಿಸಿ ಅವರಿಗೆ ಮಾರ್ಗದರ್ಶಕರಾ ಗಬೇಕು’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಮಹಾದೇವಪ್ಪ ಸಲಹೆ ನೀಡಿದರು.

ವಿಭೂತಿಪುರ ಮಠದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಸುವರ್ಣ ಶ್ರೀ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.
‘ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳಿಂದ ಮಾತ್ರ ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ. ವೈಜ್ಞಾನಿಕ ತಳಹದಿಯ ಮೇಲೆ ಕೃಷಿ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಮಣ್ಣು ಪರೀಕ್ಷೆಯಿಂದ ಫಸಲು ಬೆಳೆಯು ವವರೆಗೂ ರೈತರು ಕೃಷಿ ತಜ್ಞರ ನೆರವು ಪಡೆಯಬೇಕು’ ಎಂದು ಅವರು ಸಲಹೆ ನೀಡಿದರು.

‘ಸಾಮಾಜಿಕವಾಗಿ, ಆರ್ಥಿಕವಾಗಿ ಸಾಧನೆ ಮಾಡಲು ಕೃಷಿ ವಿಶ್ವವಿದ್ಯಾಲಯಗಳು ಅಲ್ಲಲ್ಲಿ ರೈತರಿಗೆ ಅರಿವು ಮೂಡಿಸಿ ಜಾಗೃತಗೊಳಿಸಲು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿ ದರು. ಗೌರವ ರಕ್ಷೆ ಸ್ವೀಕರಿಸಿದ ಮಾಜಿ ಸಚಿವೆ ರಾಣಿ ಸತೀಶ್, ‘ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರ ಗಳಲ್ಲಿ ಮಠಗಳು ತೊಡಗಿಸಿಕೊಂಡು ಸರ್ಕಾರದ ಹೊರೆ ಇಳಿಸಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.