ಸೋಮವಾರ, ಜನವರಿ 20, 2020
19 °C

‘ಬಾಹುಬಲಿ’ಗೆ ತಮನ್ನಾ ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಾಹುಬಲಿ’ಗೆ ತಮನ್ನಾ ಆಗಮನ

ದಕ್ಷಿಣ ಭಾರತದಲ್ಲಿ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿರುವ ರಾಜ್‌ಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ ತಂಡಕ್ಕೆ ನಟಿ ತಮನ್ನಾ ಭಾಟಿಯಾ ಸೇರಿಕೊಂಡಿದ್ದಾರೆ.ಪ್ರಭಾಸ್‌, ಅನೂಷ್ಕಾ ಶೆಟ್ಟಿ, ರಮ್ಯಕೃಷ್ಣ ಹಾಗೂ ಸತ್ಯರಾಜ್‌ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಈಗ ಹೊಸದಾಗಿ ತಮನ್ನಾ ಸೇರ್ಪಡೆಯಾಗಿದ್ದಾರೆ. ತಮನ್ನಾ ಹುಟ್ಟುಹಬ್ಬದಂದೇ ಇಂಥದ್ದೊಂದು ವಿಶೇಷ ಉಡುಗೊರೆ ನೀಡಿದೆ ‘ಬಾಹುಬಲಿ’ ಚಿತ್ರ ತಂಡ. ಅಂದಹಾಗೆ, ತಮನ್ನಾ ‘ಬಾಹುಬಲಿ’ ಚಿತ್ರದಲ್ಲಿ ಪ್ರಭಾಸ್‌ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.‘ನಮ್ಮ ತಂಡವನ್ನು ಕೂಡಿಕೊಳ್ಳುತ್ತಿರುವ ತಮನ್ನಾ ಅವರನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇವೆ. ಈ ಚಿತ್ರದಲ್ಲಿ ತಮನ್ನಾ ‘ಅವಂತಿಕಾ’ ಎನ್ನುವ ಪಾತ್ರ ನಿರ್ವಹಿಸಲಿದ್ದಾರೆ. ಬಾಹುಬಲಿ–ಅವಂತಿಕಾ ಸನ್ನಿವೇಶಗಳು ಇರುವ ದೃಶ್ಯಗಳನ್ನು ಸದ್ಯದಲ್ಲೇ ಚಿತ್ರೀಕರಿಸುವ ಯೋಜನೆ ಇದೆ’ ಎಂದಿದೆ ಚಿತ್ರ ನಿರ್ಮಾಣ ಮಾಡುತ್ತಿರುವ ಅಕ್ರಾ ಮೀಡಿಯಾ ವರ್ಕ್ಸ್‌.ನೂರು ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರ ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತೆರೆ ಕಾಣಲಿದೆ. 2015ಕ್ಕೆ ತೆರೆಗೆ ಬರಲಿರುವ ‘ಬಾಹುಬಲಿ’ ಚಿತ್ರದ ಯುದ್ಧದ ಸನ್ನಿವೇಶಗಳ ಚಿತ್ರೀಕರಣ ಈಗ ನಡೆಯುತ್ತಿದೆ. ಅಂದಹಾಗೆ, ತಮಿಳಿನಲ್ಲಿ ಈ ಚಿತ್ರ ‘ಮಹಾಬಲಿ’ ಹೆಸರಿನಲ್ಲಿ ತೆರೆಕಾಣಲಿದೆ.  

ಪ್ರತಿಕ್ರಿಯಿಸಿ (+)