ಚಿತ್ರದುರ್ಗ: ಗೊಬ್ಬರ, ಬೀಜ ಖರೀದಿಸಿದರೆ ಅಂಗಡಿಯವರು ಬಿಲ್ ಕೊಡುವುದಿಲ್ಲ. ಬಿಲ್ ಕೇಳಿದರೆ ಗೊಬ್ಬರವನ್ನೇ ಕೊಡೋದಿಲ್ಲ. ಅಂಗಡಿ ಎದುರು ದರ ಪಟ್ಟಿ ಹಾಕೋದಿಲ್ಲ. ಎಂಆರ್ಪಿ ಬೆಲೆಗೆ ಯಾವ ವಸ್ತುಗಳು ಸಿಗುವುದಿಲ್ಲ, ಎಲ್ಲ ಸೆಕೆಂಡ್ಸ್ ರೀತಿ ಮಾರ್ತಾರೆ, ಅವರು ಗೊಬ್ಬರ ಕೊಡುವುದರೊಳಗೆ ಭೂಮಿ ಹದ ಹಾರಿಹೋಗಿರುತ್ತದೆ...!

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಕೃಷಿ ಅಧಿಕಾರಿಗಳು, ರೈತರು, ಬೀಜ, ಗೊಬ್ಬರ ಕಂಪೆನಿಗಳ ಮಾಲೀಕರು ಮತ್ತು ಡೀಲರ್ಗಳ ಸಭೆಯಲ್ಲಿ ಬೀಜ, ಗೊಬ್ಬರ ಖರೀದಿಯಲ್ಲಾಗುವ ಅವ್ಯವಹಾರಗಳ ಕುರಿತು ರೈತರು ದೂರಿನ ಸುರಿಮಳೆ ಸುರಿಸಿದರು.

ರೈತರ ದೂರುಗಳಿಗೆ ಪ್ರತಿಕ್ರಿಯಿಸದೇ ಮೌನವಹಿಸಿದ್ದ ಡೀಲರ್ಗಳನ್ನು ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ‘ರೈತರ ದೂರಿಗೆ ನೀವು ಮೌನವಹಿಸಿರುವುದನ್ನು ನೋಡಿದರೆ, ಬೇರೆಯೇ ಅರ್ಥ ವ್ಯಕ್ತವಾಗುತ್ತಿದೆ. ನೀವು ಬಿಲ್ ಕೊಡುತ್ತಿಲ್ಲ ಎಂದರೆ, ಚೀಲಗಳಲ್ಲಿ ಗೊಬ್ಬರ, ಬೀಜವಲ್ಲದೇ ಬೇರೆ ಏನನ್ನು ತುಂಬಿರುತ್ತೀರಿ’ ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂಪೆನಿ ಪ್ರತಿನಿಧಿಗಳು, ‘ಗೊಬ್ಬರವನ್ನು ಉತ್ಪಾದಕ ಕಂಪೆನಿಯವರು ರೈಲ್ವೆ ವ್ಯಾಗನ್ ಮೂಲಕ ಕಳುಹಿಸುತ್ತಾರೆ. ಅಲ್ಲಿ ಹಮಾಲರು ಗೊಬ್ಬರದ ಮೂಟೆಗೆ ಕೊಕ್ಕೆ ಹಾಕಿ ಗೊಬ್ಬರ ಸೋರುವಂತೆ ಮಾಡುತ್ತಾರೆ. ಅಲ್ಲಿ ಹಮಾಲರದೇ ಏಕಸ್ವಾಮ್ಯ. ಇಲ್ಲಿ ಕಾನೂನು ನಿಯಂತ್ರಣವನ್ನು ರಕ್ಷಣಾ ಇಲಾಖೆಯಿಂದ ಕೈಗೊಳ್ಳಬೇಕು ಎಂದು’ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ‘ರೈಲ್ವೆ ವ್ಯಾಗನ್ನಿಂದ ಲಾರಿಗಳಿಗೆ ಲೋಡ್ ಮಾಡುವಾಗ ಹಮಾಲರು ಕೊಕ್ಕೆ ಹಾಕದಂತೆ ಕ್ರಮ ಕೈಗೊಳ್ಳಬೇಕು. ಎಲ್ಲಾ ಮಾರಾಟಗಾರರು ಅಂಗಡಿಗಳ ಮುಂದೆ ಸೂಚನಾ ಫಲಕದಲ್ಲಿ ದರಗಳ ವಿವರ ಮತ್ತು ದಾಸ್ತಾನು ಮಾಹಿತಿ ಪ್ರಕಟಿಸುವುದು, ರೈತರಿಗೆ ಬಿಲ್ ಅನ್ನು ನೀಡುವುದು ಕಡ್ಡಾಯ. ಯಾರು ಬಿಲ್ ನೀಡುವುದಿಲ್ಲ, ಅಂಥ ಅಂಗಡಿಯ ಪರವಾನಗಿ ರದ್ದು ಮಾಡಲು ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಂತಹ ದೂರುಗಳ ಸ್ವೀಕಾರಕ್ಕಾಗಿ ಕೃಷಿ ಇಲಾಖೆಯಲ್ಲಿ ಸಹಾಯವಾಣಿಯನ್ನು ಸ್ಥಾಪಿಸಿ ದೂರು ಸ್ವೀಕರಿಸಿ ಅಂತಹ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಡೀಲರ್ ಸಂಘದ ಅಧ್ಯಕ್ಷರು ‘ಎಲ್ಲರೂ ಬಿಲ್ ಕೊಡುತ್ತಾರೆ. ಆದರೆ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದ್ದಾಗ ವ್ಯತ್ಯಾಸವಾಗಬಹುದು’ ಎಂದು ವಿವರಿಸಿದರು. ‘ಎಲ್ಲ ವ್ಯಾಪಾರಸ್ಥರಿಗೂ ನಿಗದಿತ ದರದಲ್ಲೇ ಮಾರಾಟ ಮಾಡಬೇಕು. ಬಿಲ್ ಕಡ್ಡಾಯವಾಗಿ ಕೊಡುವಂತೆ ಹೇಳಿದ್ದೇವೆ’ ಎಂದರು.

ಹೊಸದುರ್ಗ ತಾಲ್ಲೂಕಿನಲ್ಲಿ ದಾಳಿಂಬೆ ಕೃಷಿ ವ್ಯಾಪಕವಾಗುತ್ತಿದೆ. ಅಂಗಡಿಗಳಲ್ಲಿ ಪೊಟಾಷ್ ಕಡಿಮೆ ಇದೆ. ಪೊಟಾಷ್ ಬೇಡಿಕೆ ಹೆಚ್ಚಿರುವುದರಿಂದ ಅಂಗಡಿಗಳಿಗೆ ಹೆಚ್ಚು ಪೊಟಾಷ್ ಪೂರೈಸುವಂತೆ ಕಂಪೆನಿಗಳಿಗೆ ಸೂಚಿಸಬೇಕೆಂದು ಡೀಲರ್ಗಳು ಸಭೆಗೆ ಮನವಿ ಮಾಡಿದರು.

ರೈತರಿಗೆ ಪೂರೈಸುತ್ತಿರುವ ಎರೆಹುಳು ಗೊಬ್ಬರದಲ್ಲಿ ಯಾವುದೇ ಸತ್ವವಿರುವುದಿಲ್ಲ. ಗೊಬ್ಬರ ಪೂರೈಕೆಗೆ ಮುನ್ನ ಅದರಲ್ಲಿರುವ ಪೋಷಕಾಂಶಗಳನ್ನು ಪರೀಕ್ಷಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಹೊಸದುರ್ಗದ ರೈತರೊಬ್ಬರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಗೊಬ್ಬರ ಖರೀದಿ, ಬಿಲ್ ಹಾಗೂ ದರಪಟ್ಟಿ ಹಾಕಿಸುವ ವಿಚಾರಕ್ಕೆ ಸಂಬಂಧಿಸದಿಂತೆ ಚಳ್ಳಕೆರೆ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಸ್ಫೂರ್ತಿ ಪ್ರತಿಕ್ರಿಯಿಸಿ, ‘ದರಪಟ್ಟಿಹಾಕಲು ಅಂಗಡಿಗಳಲ್ಲಿ ಜಾಗದ ಕೊರತೆ ಇದೆ. ಅದಕ್ಕೆ ಏಕರೂಪದ ಫ್ಲೆಕ್ಸ್ ಮಾಡಿಸಿದರೆ ಅನುಕೂಲ’ ಎಂದರು. ಅಂಗಡಿಯವರು ಬೀಜ, ಗೊಬ್ಬರ ಖರೀದಿಗೆ ಬಿಲ್ ಕೊಡುತ್ತಾರೆ. ಆದರೆ ಕೆಲವು ರೈತರು ಸಾಲದ ರೂಪದಲ್ಲಿ ವ್ಯವಹಾರ ಮಾಡುವುದರಿಂದ ಕೆಲವೊಮ್ಮೆ ಸಮಸ್ಯೆ ಉಂಟಾಗುತ್ತಿದೆೆ’ಎಂದರು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ೪೦,೮೦೦ ಮೆಟ್ರಿಕ್ ಟನ್ ರಸಗೊಬ್ಬರ ಹಂಚಿಕೆ ಮಾಡಲಾಗಿದೆ. ಹಂಚಿಕೆಯಾದ ಗೊಬ್ಬರವನ್ನು ತಾಲ್ಲೂಕುವಾರು ಬೇಡಿಕೆಗೆ ಅನುಗುಣವಾಗಿ ಕೃಷಿ ಇಲಾಖೆಯಿಂದ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ತಿಳಿಸಿದರು.

ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ತೆಂಬದ್, ರೈತ ಮುಖಂಡರಾದ ಸೋಮಗುದ್ದು ರಂಗಸ್ವಾಮಿ, ಕೆ.ಜಿ.ಭೀಮಾರೆಡ್ಡಿ, ಬಸ್ತಿಹಳ್ಳಿ ಸುರೇಶ್ಬಾಬು, ಸಿದ್ದವೀರಪ್ಪ, ಕೊಂಚೆ ಶಿವರುದ್ರಪ್ಪ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ತಿಮ್ಮಪ್ಪ, ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ರೈತರೇ ಬೀಜ ನಿಷೇಧಿಸಿ !
‘ಕನಕ ಹತ್ತಿ ಬೀಜ ನಿಷೇಧಿಸಲಾಗಿದ್ದರೂ, ಅದನ್ನು ಬೇರೆ ರೀತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರು ಅದನ್ನೇ ಖರೀದಿಸುತ್ತಿದ್ದಾರೆ. ಕಳೆದ ವರ್ಷ ಈ ಬೀಜದಿಂದ ಸಾಕಷ್ಟು ನಷ್ಟ ಅನುಭವಿಸಿದ್ದೆವು’ ಎಂದು ರೈತರು ಕಂಪೆನಿಗಳ ವಿರುದ್ಧ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಇಕ್ಕೇರಿ, ‘ಈ ಬೀಜದಿಂದಾಗಿರುವ ಅನಾಹುತ ಅರಿತಿರುವ ರೈತರೇ ಕನಕ ತಳಿ ಹತ್ತಿ ಬೀಜವನ್ನು ತಿರಸ್ಕರಿಸಿದರೆ (ಖರೀದಿಸದಿದ್ದರೆ) ಸಮಸ್ಯೆಯೇ ಉದ್ಭವಿಸುವುದಿಲ್ಲವಲ್ಲ’ ಎಂದು ಹೇಳಿದರು.

ಬೆಳೆ ವಿಮೆಗೆ ಜೂನ್ 30 ಕೊನೆ ದಿನ
‘ಈ ಬಾರಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆ ದಿನವಾಗಿದ್ದು, ಅಷ್ಟೊರಳಗಾಗಿ ರೈತರು ಅರ್ಜಿ ಸಲ್ಲಿಸಬೇಕು. ಬೆಳೆ ವಿಮೆ ವಿಚಾರವನ್ನು ಆಕಾಶವಾಣಿ ಹಾಗೂ ಪತ್ರಿಕೆಗಳ ಮೂಲಕ ಈಗಾಗಲೇ ಪ್ರಕಟಿಸಲಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ ಮಾಹಿತಿ ನೀಡಿದರು.

‘ರೇಡಿಯೊದಲ್ಲಿ ಬರುವಾಗ ನಾವು ಜಮೀನಿನಲ್ಲಿ ಇರುತ್ತೇವೆ. ನಮಗೆಲ್ಲ ಹೇಗೆ ಮಾಹಿತಿ ಸಿಗಬೇಕು. ಎಲ್ಲರೂ ಚಿತ್ರದುರ್ಗದ ಕಚೇರಿಗೆ ಬರೋಕಾಗುತ್ತ. ನಮ್ಮ ಹಳ್ಳಿಗಳಲ್ಲಿ ಗ್ರಾಮ ಪಂಚಾಯ್ತಿ ಮೂಲಕ ಫ್ಲೆಕ್ಸ್ಗಳನ್ನು ಹಾಕಿಸಿ ಮಾಹಿತಿ ನೀಡಿ’ ಎಂದು ರೈತರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.