ನೆಲಮಂಗಲ: ‘ವಿದ್ಯೆಯು ತಾಯಿಯಂತೆ ಪಾಲಿಸಿ, ತಂದೆಯಂತೆ ಪೋಷಿಸಿ, ಮಡದಿಯಂತೆ ಆನಂದ ಪಸರಿಸಿ ಕೀರ್ತಿ ತಂದು ಕೊಡುತ್ತದೆ’ ಎಂದು ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸೂಡಿ ಸುರೇಶ್ ತಿಳಿಸಿದರು.

ಪಟ್ಟಣದ ವಿಶಾಲ್ ಆಂಗ್ಲ ಶಾಲೆ ಏರ್ಪಡಿಸಿದ್ದ ‘ವಿಶಾಲ್ ವೈಭವ್’ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ಮಕ್ಕಳ ಅಭಿರುಚಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಹೊಣೆ ಪೋಷಕರದ್ದು ಹಾಗೂ ಶಿಕ್ಷಕರದ್ದು’ ಎಂದರು.

ಶಾಲೆಯ ಸಂಸ್ಥಾಪಕ ಟಿ.ಕೆ.ನರಸೇಗೌಡ, ‘ಇಬ್ಬರು ಅನಾಥ ಮಕ್ಕಳನ್ನು ಶಾಲೆ ವತಿಯಿಂದ ದತ್ತು ತೆಗೆದುಕೊಂಡು ಎಸ್ಸೆಸ್ಸೆಲ್ಸಿ ವರೆಗೆ ಉಚಿತ ಶಿಕ್ಷಣ ನೀಡಲಾಗುವುದು’ ಎಂದರು.

ಸಬ್ಇನ್ಸ್ಪೆಕ್ಟರ್ ಎ.ವಿ.ಕುಮಾರ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಪುರಸಭೆ ಸದಸ್ಯ ಸೀತಾರಾಮು, ಪ್ರಾಂಶುಪಾಲ ಎ.ಟಿ.ರಾಜು, ಮುಖ್ಯಶಿಕ್ಷಕಿ ಹಸ್ಮತ್ ಉನ್ನಿಸ್ಸಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.