ಭಾನುವಾರ, ಫೆಬ್ರವರಿ 28, 2021
30 °C
ಗ್ರಾಮಸ್ಥರ ನೆರವು, ಪೋಷಕರ ಆಸಕ್ತಿ, ಭವಿಷ್ಯದಲ್ಲಿ ಸಂಖ್ಯೆ ಹೆಚ್ಚುವ ಭರವಸೆ

‘ಮಕ್ಕಳ ಮನೆ’ಯಲ್ಲಿ ಚಿಣ್ಣರ ಚಿಲಿಪಿಲಿ

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

‘ಮಕ್ಕಳ ಮನೆ’ಯಲ್ಲಿ ಚಿಣ್ಣರ ಚಿಲಿಪಿಲಿ

ಚಿತ್ರದುರ್ಗ:  ಸರ್ಕಾರಿ ಶಾಲೆಯ ಶಿಕ್ಷಕರೇ ಹಣ ವ್ಯಯಿಸಿ ಎಲ್‌ಕೆಜಿ, ಯುಕೆಜಿ ಆರಂಭಿಸಿ, ತಮ್ಮ ಶಾಲೆಯ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸರ್ಕಾರಿ ಶಾಲೆ ಉಳಿಸಿ ಕೊಳ್ಳಲು ಸಂಕಲ್ಪ ಮಾಡಿರುವ ಘಟನೆ ಭರಮಸಾಗರದಲ್ಲಿ ನಡೆಯುತ್ತಿದೆ.ಭರಮಸಾಗರ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು, ಶಾಲೆಯ 1ನೇ ತರಗತಿಯ ಮಕ್ಕಳ ಸಂಖ್ಯೆ ಹೆಚ್ಚಿಸುವುದಕ್ಕಾಗಿ, ಶಾಲಾ ಅಂಗಳದಲ್ಲೇ ಎಲ್‌ಕೆಜಿ, ಯುಕೆಜಿ ತರಗತಿಗಳ ‘ಮಕ್ಕಳ ಮನೆ’ ಆರಂಭಿಸಿದ್ದಾರೆ. ಸಣ್ಣದೊಂದು ಪ್ರಚಾರ ಆಂದೋಲನ, ಶಿಕ್ಷಕರ ಆಸಕ್ತಿ, ಪಟ್ಟಣದ ಕೆಲವು ದಾನಿಗಳ ನೆರವು, ಪೋಷಕರ ಪ್ರೀತಿಯಿಂದ ಮೊದಲ ವರ್ಷದಲ್ಲೇ 56 ಮಕ್ಕಳು ಶಾಲೆಗೆ ಸೇರಿದ್ದಾರೆ !ಶಿಕ್ಷರ ಉಸ್ತುವಾರಿ: ಸಾಮಾನ್ಯವಾಗಿ ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿಯವರು ‘ಮಕ್ಕಳ ಮನೆ’ ಉಸ್ತುವಾರಿ ವಹಿಸುತ್ತಾರೆ. ಪೋಷಕರು ನೀಡುವ ಶುಲ್ಕ ಮತ್ತು ಗ್ರಾಮಸ್ಥರು ನೀಡುವ ದೇಣಿಗೆಯಿಂದ ‘ಮಕ್ಕಳ ಮನೆ’ಯ ಶಿಕ್ಷಕರಿಗೆ ಸಂಬಳ, ಮಕ್ಕಳಿಗೆ ಸಮವಸ್ತ್ರ, ಲೇಖನ ಸಾಮಗ್ರಿಗಳನ್ನು ಕೊಡಿಸಲಾಗುತ್ತದೆ. ಆದರೆ, ಈ ಸರ್ಕಾರಿ ಶಾಲೆಯ 16 ಶಿಕ್ಷಕರು ವ್ಯವಸ್ಥೆಯ ಬಹುಪಾಲು ಜವಾಬ್ದಾರಿ ಹೊತ್ತಿದ್ದಾರೆ.ಒಬ್ಬರು ಸಮವಸ್ತ್ರ, ಶೂ, ಮತ್ತೊಬ್ಬರು ಪುಸ್ತಕ, ಲೇಖನ ಸಾಮಗ್ರಿಗಳು, ಇನ್ನೊಬ್ಬರು ಆಟಿಕೆ ಗಳನ್ನು ಕೊಡಿಸಿದ್ದಾರೆ. ಪೋಷಕರು $500 ದೇಣಿಗೆ ನೀಡಿದ್ದಾರೆ. ಸಂಸ್ಥೆಯವರೊಬ್ಬರು 60 ಕುರ್ಚಿ ಕೊಡಿಸಿದ್ದಾರೆ. ಶಾಲೆಯ ಇಬ್ಬರು ಶಿಕ್ಷಕರನ್ನು ಮಕ್ಕಳ ಮನೆಗಾಗಿಯೇ ನಿಯೋಜಿಸಿದ್ದಾರೆ.ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ 400 ಮಕ್ಕಳಿದ್ದಾರೆ. ಸದ್ಯ 16 ರಲ್ಲಿ ಇಬ್ಬರು ಶಿಕ್ಷಕರನ್ನು ಮಕ್ಕಳ ಮನೆಗೆ ನಿಯೋಜಿಸಿದ್ದೇವೆ. ಉಳಿದ ಶಿಕ್ಷಕರು, ಹೆಚ್ಚುವರಿ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದಾರೆ.ಒಟ್ಟಾರೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದರೆ ಸಾಕು’ ಎನ್ನುತ್ತಾರೆ ಮುಖ್ಯ ಶಿಕ್ಷಕ ಪೊನ್ಯಾನಾಯ್ಕ್. ಮಕ್ಕಳ ಸಂಖ್ಯೆ ಹೆಚ್ಚಿಸುವ ಗುರಿ: ಪಟ್ಟಣದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾದ ಮೇಲೆ ಸರ್ಕಾರಿ ಶಾಲೆ ಸೇರುವವರ ಸಂಖ್ಯೆ ಕಡಿಮೆಯಾಯಿತು.ಒಂದನೇ ತರಗತಿ­ಯಲ್ಲಿ ಮಕ್ಕಳ ಸಂಖ್ಯೆ 22ಕ್ಕೆ ಇಳಿದಿದೆ. ಹೀಗೆ ಆದರೆ, ಶಾಲೆ ನಡೆಸುವುದು ಕಷ್ಟ. ಅದಕ್ಕಾಗಿ ಮಕ್ಕಳ ಸಂಖ್ಯೆ ಹೆಚ್ಚಿಸಲು ನಾವೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಡಿಡಿಪಿಐ, ಬಿಇಒ ಅವರಲ್ಲಿ ಚರ್ಚಿಸಿ ಅನುಮತಿ ಪಡೆದಿದ್ದಾರೆ. ಶಿಕ್ಷಕರ ಒಪ್ಪಿಗೆ ಮೇರೆಗೆ ‘ಮಕ್ಕಳ ಮನೆ’ ಆರಂಭವಾಗಿದೆ.‘ಮಕ್ಕಳ ಮನೆ’ ಉಸ್ತುವಾರಿಗೆ ಇಬ್ಬರು ಶಿಕ್ಷಕರ ಜತೆಗೆ, ಒಬ್ಬ ಬಿಸಿಯೂಟದ ಅಡುಗೆ ಸಿಬ್ಬಂದಿ ಕೈ ಜೋಡಿಸುತ್ತಾರೆ. ಎರಡು ಪ್ರತ್ಯೇಕ ಕೋಣೆಗಳಿವೆ. ಕಲಾವಿದರೊಬ್ಬರಿಂದ ಇಡೀ ಮಕ್ಕಳ ಮನೆ ತುಂಬಾ ಆಕರ್ಷಕ ಚಿತ್ರಗಳನ್ನು ಬರೆಸಿದ್ದೇವೆ.

ಸುತ್ತಲಿನ ಆರೇಳು ಹಳ್ಳಿಗಳಿಂದ ಪೋಷಕರು ಮಕ್ಕಳನ್ನು ಆಟೊದಲ್ಲಿ ‘ಮಕ್ಕಳ ಮನೆಗೆ’ ಕರೆತರುತ್ತಾರೆ. ಅನೇಕ ಬಡ ಪೋಷಕರಿಗೆ ತಮ್ಮ ಮಕ್ಕಳು ಸಮವಸ್ತ್ರ ಧರಿಸಿ ಎಲ್‌ಕೆಜಿ, ಯುಕೆಜಿಗೆ ಹೋಗುತ್ತಿದ್ದಾರಲ್ಲಾ ಎಂಬ ಸಂಭ್ರಮ ವೂ ಇದೆ’ ಎನ್ನುತ್ತಾ ಎರಡು ತಿಂಗಳಿಂದ ನಡೆಯುತ್ತಿರುವ ಪ್ರಕ್ರಿಯೆ ಯನ್ನು ಪೊನ್ಯಾನಾಯ್ಕ್ ವಿವರಿಸುತ್ತಾರೆ.ಹೊರೆಯಾಗದ ಉಚಿತ ಶಿಕ್ಷಣ: ‘ಅಂದಾಜು ₹ 80 ಸಾವಿರ ಖರ್ಚಾ ಗಿದೆ. ಶಿಕ್ಷಕರು, ಕೆಲ ಪೋಷಕರು, ಸಂಘಟನೆಗಳು ನೆರವಾಗಿವೆ’ ಎನ್ನುತ್ತಾರೆ ಮುಖ್ಯ ಶಿಕ್ಷಕರು. ‘ಮಕ್ಕಳ ಮನೆ’ಯ ಶಿಕ್ಷಕರಿಗೆ ವೇತನದ ಹೊರೆ ಬೀಳುತ್ತಿಲ್ಲ ವಾದ್ದರಿಂದ, ಪೋಷಕರಿಂದ ಮಾಸಿಕ ಹಣ ಸಂಗ್ರಹಿಸುವ ಅಗತ್ಯಬಿದ್ದಿಲ್ಲ.

ಹಾಗಾಗಿ ಭರಮಸಾಗರದ ಈ ‘ಮಕ್ಕಳ ಮನೆ’ ಒಂದು ರೀತಿ ಮಕ್ಕಳಿಗೆ ‘ಉಚಿತ ಶಿಕ್ಷಣ’ ನೀಡುತ್ತಿದೆ. ಈ ಪ್ರಯತ್ನ ಯಶಸ್ವಿಯಾದರೆ, ಇದೊಂದು ಮಾದರಿ ಶಾಲೆಯಾಗಬಹುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

*

ಶಿಕ್ಷಕರೆಲ್ಲ ಸೇರಿ ಆಸಕ್ತಿಯಿಂದ ‘ಮಕ್ಕಳ ಮನೆ’ ನಡೆಸುತ್ತಿದ್ದಾರೆ. ಆಸಕ್ತಿಯನ್ನು ಪ್ರೋತ್ಸಾಹಿಸಿದ್ದೇವೆ. ಉತ್ತಮ ಕಟ್ಟಡಗಳಿವೆ.  ಸಂಖ್ಯೆ ಹೆಚ್ಚುವ ಭರವಸೆ ಇದೆ.

– ರೇವಣಸಿದ್ದಪ

ಡಿಡಿಪಿಐ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.