ಗುಬ್ಬಿ: ಪಟ್ಟಣದ ಆಸ್ಪತ್ರೆಯ ತಾಲ್ಲೂಕು ವೈದ್ಯಾಧಿಕಾರಿ ಕೊಠಡಿ ಮುಂದೆ ನಿಂತಾಗ ಸಮಯ ಮಧ್ಯಾಹ್ನ ಒಂದು. ಮೇಲೆ ಸುಡು ಬಿಸಿಲ ತಾಪ. ವೈದ್ಯರ ಕೊಠಡಿಯ ಹೊಸ್ತಿಲ ಮೇಲೆ ಒಂಟಿ ಕಾಲ ಮೇಲೆ ಮೊಮ್ಮಗು ಎತ್ತಿಕೊಂಡಿದ್ದ ಶಾರದಮ್ಮ ಮಾತಿಗೆ ಸಿಕ್ಕರು.

ಎಲೆಕ್ಷನ್ ಎಂದಾಕ್ಷಣವೇ ಅವರು ಸಿಟ್ಟಿಗೆದ್ದರು. ಬೆಳಿಗ್ಗೆ 10ರಿಂದಲೂ ಕಾಯುತ್ತಾ ನಿಂತಿದ್ದೇನೆ. ನಮ್ಮೊಂಥೋರಿಗೆ ಯಾಕ್ ಸ್ವಾಮಿ ಚುನಾವಣೆ. ಡಾಕ್ಟರ್ ಕರೆಸಿ ಸಾಕು ಎಂದರು. ಮಾತು ಕೇಳಿಸಿಕೊಳ್ಳತ್ತಾ ಪಕ್ಕದಲ್ಲೇ ನಿಂತಿದ್ದ ಬೊಮ್ಮಸಂದ್ರದ ನರಸಿಂಹಯ್ಯ ಅವರ ಮುಖ ಮತ್ತಷ್ಟು ಕೆರಳಿತು. ಯಾವ ಕೆರೆಯಲ್ಲೂ ನೀರಿಲ್ಲ. ದನ ಕರು ಸಾಯುತ್ತಿವೆ. ತೋಟ ತುಡಿಕೆ ಒಣಗಿಹೋಗಿವೆ. ಬದುಕೇ ಸಾವಿನ ದಡ ಮುಟ್ಟಿರುವಾಗ ಚುನಾವಣೆ ಆದ್ರು ಒಂದೇ, ಬಿಟ್ರು ಒಂದೇ ಎಂದು ಮಾತು ಮುಗಿಸಿದರು.

ಪಕ್ಕದ ಕೊಠಡಿಯಲ್ಲಿ ಇಬ್ಬರು ರಾಜಕಾರಣಿಗಳೊಂದಿಗೆ ಹರಟೆಯಲ್ಲಿ ತೊಡಗಿದ್ದ ತಾಲ್ಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀನಾರಾಯಣಪ್ಪ ಅವರ ಬಳಿ ಚುನಾವಣೆ ವಿಷಯ ಪಕ್ಕಕ್ಕಿಟ್ಟು ತಾಲ್ಲೂಕಿನ ಆರೋಗ್ಯ ವ್ಯವಸ್ಥೆ ಕುರಿತು ಮಾಹಿತಿ ಕೇಳಿದೆ.

ತಾಲ್ಲೂಕಿನಲ್ಲಿ ಸಾವಿರಕ್ಕೆ ಮೂವತ್ತೈದು ಮಕ್ಕಳು ಹುಟ್ಟುವಾಗಲೇ ಅಸು ನೀಗುತ್ತಿವೆ. ಲಕ್ಷ ಗರ್ಭಿಣಿಯರಲ್ಲಿ 180 ಮಂದಿ ಮಗುವಿಗೆ ಜನ್ಮ ನೀಡುತ್ತಲೇ ಸಾಯುತ್ತಿದ್ದಾರೆ. ಕೇಂದ್ರ ಸರ್ಕಾರದ ‘ಮಿಲೇನಿಯಂ ಗೋಲ್’ ಪ್ರಕಾರ ಶಿಶು ಮರಣ ಪ್ರಮಾಣ ಇರಲೇಬಾರದು. ಇದು ಕನಿಷ್ಠ 30ಕ್ಕಾದರೂ ಇಳಿಯಬೇಕು. ತಾಯಿ ಮರಣ ಪ್ರಮಾಣ 150ಕ್ಕಾದರೂ ತರಲೇಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಸಾಕಷ್ಟು ಹಣವೂ ಹರಿದಿದೆ. ಆದರೆ ಇಲ್ಲಿ ತಾಯಿ, ಶಿಶುಗಳು ಸಾಯುತ್ತಿರುವುದು ಚುನಾವಣೆಯ ವಿಷಯವೇ ಆಗಿಲ್ಲ.

ತಾಲ್ಲೂಕಿನ ತಿಪ್ಪೂರು, ಅಳಿಲುಘಟ್ಟ, ಹಾಗಲವಾಡಿ, ಕಡಬಾ, ಹುರುಳುಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ. ನಿಟ್ಟೂರು, ಅದಲಗೆರೆಯಲ್ಲಿ ತರಬೇತಿ ವೈದ್ಯರಿದ್ದಾರೆ. ಇವರೂ ಏಪ್ರಿಲ್ನಿಂದ ಖಾಲಿಯಾಗುತ್ತಾರೆ. ಅಪೌಷ್ಟಿಕತೆಯಿಂದ ನರಳುತ್ತಿರುವ ತಾಲ್ಲೂಕಿನ 57 ಮಕ್ಕಳಲ್ಲಿ ಗುಬ್ಬಿ ಪಟ್ಟಣದ ಮಕ್ಕಳೇ ಹೆಚ್ಚಿದ್ದಾರೆ.

ನಿಟ್ಟೂರಿನ ಬಾಗಿಲು ಮುಚ್ಚಿದ ಅಂಗಡಿ ಮುಂಭಾಗ ಕುಳಿತಿದ್ದ ಬಂಡಿಹಳ್ಳಿಯ ಶಿವಕುಮಾರ ಸ್ವಾಮಿ ಮಾತ್ರ ರಸಗೊಬ್ಬರ ಸಬ್ಸಿಡಿ ವಿಷಯ ಚರ್ಚೆಯಾಗಬೇಕೆಂದರು. ಕೇಂದ್ರ ಸರ್ಕಾರ ರಸಗೊಬ್ಬರ ಸಬ್ಸಿಡಿ ಕಡಿತಗೊಳಿಸಿದ್ದನ್ನು ಯಾರೂ ಪ್ರಶ್ನೆ ಮಾಡಲಿಲ್ಲ. ರೈತರ ಬಗ್ಗೆ ಮಾತಾಡದ ಮಂದಿಗೆ ಮತ ಏಕೆ ಹಾಕಬೇಕು ಎಂದರು.

ಒಂದು ರೂಪಾಯಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಕಿ ಕೊಡುತ್ತಿದ್ದಾರೆ. ಬತ್ತ ಬೆಳೆಯಲು ಬೇಕಾದ ರಸಗೊಬ್ಬರದ ಬೆಲೆ ಆಕಾಶ ಮುಟ್ಟಿದೆ. ಬಳ್ಳಾರಿಯ ಮೈನ್ಸ್ ಮಣ್ಣು ಹಾಕಿ ಅಕ್ಕಿ ತೆಗೆಯಲು ಸಾಧ್ಯವಾ? ಜನರು ಬುದ್ಧಿವಂತರಾಗದಿದ್ದರೆ ಈ ರಾಜಕಾರಣಿಗಳು ದೇಶವನ್ನೇ ಅಡ ಇಡುತ್ತಾರೆ ಎಂದು ಸಿಟ್ಟಾದರು.

ವಿರೂಪಾಕ್ಷಿಪುರದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಮಣ್ಣ ತಾಲ್ಲೂಕಿನಲ್ಲಿ ರಾಜಕಾರಣವೆಂದರೆ ಲಿಂಗಾಯತರು ಮತ್ತು ಜಾತಿ ಅಷ್ಟೇ ಅಂದರು. ಹಾಲಿ ಸಂಸದ ಬಸವರಾಜು ಮೇಲೆ ಅಸಮಾಧಾನವಿದೆ. ಆದರೆ ಜಾತಿ ಬಿಟ್ಟು ವೋಟು ಹಾಕಲು ಸಾಧ್ಯವಾ ಎಂದು ಪ್ರಶ್ನಿಸಿದರು.

‘ನಾನು ಏನ್ ಹೇಳಾಣ ಸಾ. ಯಾವುದ್ಕೊ ಒಂದಕ್ಕೆ ಒತ್ತೋದು ಅಷ್ಟೇ’ ಎಂದು ನಿಟ್ಟೂರು ಗದ್ದೆ ಬಯಲಲ್ಲಿ ಬಿಸಿಲ ದಗೆಯಲ್ಲೇ ಬದು ಹಾಕುತ್ತಿದ್ದ ಪತ್ರೆಮತ್ತಿಘಟ್ಟದ ಕುಮಾರ್ ಅಷ್ಟಗಲ ನಕ್ಕರು.

‘ಗುಜರಾತ್ನಲ್ಲಿ ಯಾವ್ನೊ ಅವ್ನಂತೆ. ಏನೋ ಅಭಿವೃದ್ಧಿ ಮಾಡೌನೆ ಅಂಥ ಪಕ್ಕದ ಗದ್ದೆಯವರು ಹೇಳ್ತಾ ಇದ್ದರು. ಅವ್ರು ರೈತರಿಗೆ ಏನ್ ಅನುಕೂಲ ಮಾಡಿಲ್ಲ ಅಂತಾರೆ ಸಾ. ಆವ್ರು ಅಂಗೇನೆ, ನಾವು ಇಂಗೇನೆ’ ಎಂದು ಮಣ್ಣಾಗಿದ್ದ ಕೈ ಒರೆಸಿಕೊಂಡರು.

‘ಹೇಮಾವತಿ ನೀರು ಈ ಸಲದ ಚುನಾವಣೆಯ ವಿಷಯ. ಗುಬ್ಬಿಗೆ ಮೋಸವಾಗಿದೆ. ಒಂದು ಕೆರೆಯನ್ನೂ ತುಂಬಿಸಿಲ್ಲ. ತೋಟ ತುಡಿಕೆ ಒಣಗಿವೆ. ರೈತರು ಸಾಯುವಂಥ ಸ್ಥಿತಿಯಲ್ಲಿದ್ದಾರೆ. ಕಡಬಾ ಕೆರೆ ಒಂದನ್ನಾದರೂ ಹೇಮಾವತಿ ನೀರಿನಿಂದ ತುಂಬಿಸಿದ್ದರೆ ಅರ್ಧ ತಾಲ್ಲೂಕಿನ ಅಂತರ್ಜಲ ಸುಧಾರಿಸುತ್ತಿತ್ತು. ಈ ಬಗ್ಗೆ ಯಾರೂ ಮಾತನಾಡಿಲ್ಲ. ದೇವರಾಣೆಗೂ ಹೇಳ್ತೇನೆ ವೋಟ್ ಮಾಡುವ ಆಸಕ್ತಿ ಯಾರಿಗೂ ಇಲ್ಲ’ ಎಂದು ಗುಬ್ಬಿ ನ್ಯಾಯಾಲಯದ ಮುಂದೆ ಹರಟೆಗೆ ಕುಳಿತಿದ್ದ ವಕೀಲ ಹೇಮಂತ್ ವಿಷಯ ಬಿಡಿಸಿಟ್ಟರು.

22.5 ಟಿಎಂಸಿ ಹೇಮಾವತಿ ನೀರು ಜಿಲ್ಲೆಗೆ ಹರಿದಿದೆ. 1.80 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ವಿಂಗಡಣೆ ಹೇಮಾವತಿ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಆದರೆ ಒಂದು ಎಕರೆ ಅಚ್ಚುಕಟ್ಟು ಸಹ ವಿಂಗಡಣೆಯಾಗಿಲ್ಲ ಎಂಬುದು ಇಲಾಖೆ ಅಂಕಿ ಅಂಶ.

ಯಾವ ಪಕ್ಷದ ಅಭ್ಯರ್ಥಿಗೂ ಅಭಿವೃದ್ಧಿ ಚುನಾವಣೆಯ ವಿಷಯವೇ ಆಗಿಲ್ಲ. ಹೇಮಾವತಿ ನೀರಿನ ವಿಷಯ ಸರಿಯಾಗಿಯೇ ಏಟು ಕೊಡಲಿದೆ ನೋಡಿ ಎಂದು ಮತ್ತೊಬ್ಬ ವಕೀಲ ಎಸ್.ಬಸವರಾಜು ಲೆಕ್ಕಾಚಾರ ಮಂಡಿಸಿದರು.

ನರೇಂದ್ರ ಮೋದಿ ಏನಾದರೂ ಬದಲಾವಣೆ ಮಾಡಬಹುದಾ ಎಂದು ವಕೀಲ ಜಯಣ್ಣ ಹೇಳುತ್ತಿದ್ದಂತೆ ಪಕ್ಕದಲ್ಲಿದ್ದ ಮತ್ತೊಬ್ಬ ವಕೀಲ ಬಿ.ಟಿ.ಮಹಾವೀರ ಜೈನ್ ಕುಳಿತಲ್ಲೇ ಕೆಂಡವಾದರು. ಮೋದಿಯಿಂದ ಏನು ಆಗಲ್ಲ. ನಮ್ಮಲ್ಲಿ ಹೆದ್ದಾರಿಗಳು ಇಲ್ಲ್ವೇನ್ರಿ. ಯಾವುದೋ ಹೆದ್ದಾರಿ ತೋರಿಸಿ ಅಭಿವೃದ್ಧಿ ಅಂದರೆ ಆಯ್ತಾ? ಎಂದು ಜಗಳಕ್ಕೆ ಬಿದ್ದರು. ಅಭಿವೃದ್ಧಿ ಮಾಡಿದ್ರೆ ಏಕ್ರೀ ಚುನಾವಣೆಗೆ ನಿಲ್ಲಲು ವಾರಣಾಸಿಗೆ ಹೋಗ್ತಿದ್ರು ಎಂದು ತಿರುಗೇಟು ನೀಡಿದರು.

ಹೇರೂರು ಫಾರ್ಮ್ ಬಳಿಯ ಟೀ ಅಂಗಡಿಯ ಮಲ್ಲೇಶಗಂತೂ ಚುನಾವಣೆ ಸುದ್ದಿ ಬೋರ್ ಹೊಡೆಸಿಬಿಟ್ಟಿದೆ. ಹುಡುಗರೆಲ್ಲ ಮೋದಿ ಅಂದರೆ ದೊಡ್ಡವರೆಲ್ಲ ಸೋನಿಯಾ ಅಂತಾರೆ ಸಾರ್. ರಾಹುಲ್ ಬಗ್ಗೆ ಯಾರೂ ಏನೂ ಮಾತಾಡಲ್ಲ... ಸಿದ್ದರಾಮಯ್ಯ ಬಗ್ಗೆ ಅಷ್ಟಿಷ್ಟು ಮಾತಾಡ್ತಾರೆ ಅನ್ನುತ್ತಾ ನಕ್ಕರು.

ಕ್ಷೇತ್ರ ಪ್ರತಿನಿಧಿಸಲಷ್ಟೇ ಪ್ರತಿನಿಧಿ ಅಲ್ಲ...

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ಗೆ ಅತ್ಯುನ್ನತ ಸ್ಥಾನ. ಸಂಸದರಿಗೆ ಉತ್ತುಂಗದ ಸ್ಥಾನ. ರಾಷ್ಟ್ರದ ಅಭಿವೃದ್ಧಿ ನಿರ್ಧರಿಸುವುದು ಸಂಸತ್. ಕೃಷಿ, ಕೈಗಾರಿಕಾ ನೀತಿ, ಉದ್ಯೋಗ, ಆರೋಗ್ಯ ವ್ಯವಸ್ಥೆ ಸುಧಾರಣೆ, ಕೈಗೆಟಕುವ ಉನ್ನತ ಶಿಕ್ಷಣ ಎಲ್ಲವೂ ಸಂಸತ್ನ ನೀತಿ ನಿರೂಪಣೆ ಮೇಲೆ ನಿಂತಿದೆ. ಹೀಗಾಗಿ ಸಂಸದರು ಕೇವಲ ಪ್ರತಿನಿಧಿಸಲಷ್ಟೇ ಪ್ರತಿನಿಧಿ ಅಲ್ಲ. ಅವರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ.

ದೇಶ ಮುಕ್ತ ಆರ್ಥಿಕ ನೀತಿ ಅಪ್ಪಿಕೊಳ್ಳುವುದಕ್ಕೂ ತುಮಕೂರಿನಲ್ಲಿ ತೆಂಗಿನಕಾಯಿ ಬೆಲೆ ಮೇಲೇಳದೇ ಇರುವುದಕ್ಕೂ ಸಂಬಂಧವಿದೆ. ಜಿಲ್ಲೆಯಲ್ಲಿ ಶಿಶು ಮರಣ ಸಂಖ್ಯೆ ಹೆಚ್ಚಿರುವ ಹಿಂದೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ವೈಫಲ್ಯತೆ ಇದೆ. ಸಂಸದರ ಕೆಲಸ ಊರಿನ ಗಟಾರ ಸರಿಪಡಿಸುವುದಲ್ಲ. ಆದರೆ ಊರಿನ ಮೇಲೆ ಹಾದು ಹೋಗಬಹುದಾದ ರಾಷ್ಟ್ರೀಯ ಹೆದ್ದಾರಿ, ರೈಲು, ಸಾರ್ವಜನಿಕ ಉದ್ದಿಮೆ ಸ್ಥಾಪನೆ ಇವೆಲ್ಲವೂ ಸಂಸದರ ಕೆಲಸ.

ಈಗ ಸಂಸತ್ಗೆ ಚುನಾವಣೆ ಕಾವು. ರಾಷ್ಟ್ರಮಟ್ಟದಲ್ಲಿ ಅಭಿವೃದ್ಧಿ, ಭ್ರಷ್ಟಾಚಾರ ಚುನಾವಣೆ ವಿಷಯ. ಜಿಲ್ಲೆಯಲ್ಲಿ ಅಭಿವೃದ್ಧಿ ಚರ್ಚೆ ಆಗುತ್ತಿದೆಯೇ ಅಥವಾ ಜನರ ನಡುವೆ ಯಾವ ವಿಷಯ ಮುಖ್ಯವಾಗುತ್ತಿದೆ ಎಂಬುದರ ಇಣುಕು ನೋಟ ‘ಕ್ಷೇತ್ರ ಸುತ್ತಾಟ’ದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.