ಶನಿವಾರ, ಜೂನ್ 19, 2021
21 °C

‘ಮೀಸಲಾತಿ ಪಡೆದು ಆಳುವವರ ಗುಲಾಮರಾಗದಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀನಗರ: ಅಂಬೇಡ್ಕರ್ ವಿಚಾರಧಾರೆ ನಿಂತ ನೀರಲ್ಲ. ಅದು ಸದಾ ಹರಿಯುವ ವಾಹಿನಿ ಎಂದು ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ ತಿಳಿಸಿದರು.ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಮತಾ ಸೈನಿಕ ದಳ ಹಾಗೂ ವಿಶ್ವಮಾನವ ಸೇವಾ ಸಮಿತಿ ಏರ್ಪಡಿಸಿದ್ದ ‘ರಾಜ್ಯಾಧಿಕಾರದತ್ತ ದಲಿತರ ಚಿತ್ತ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಮೀಸಲಾತಿ ಪಡೆದವರು ಜನಾಂಗ ಪ್ರತಿನಿಧಿಸದೇ ಆಳುವ ಪಕ್ಷಗಳ ಗುಲಾಮರಾಗಿದ್ದಾರೆ. ಹೀಗಾಗಿ ದಲಿತರು ಪರ್ಯಾಯವಾಗಿ ಚಿಂತಿಸಿ ಮುನ್ನೆಡೆಯುವುದು ಅತ್ಯಗತ್ಯ ಎಂದರು.ವಕೀಲ ಎಂ. ಮಹೇಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಪಿಐ ಗಂಗಾಧರಸ್ವಾಮಿ, ಹಿರಿಯ ಪತ್ರಕರ್ತ ಅಣ್ಣೂರು ಲಕ್ಷ್ಮಣ್‌, ಗಾಯಕ ಅಂಬರಹಳ್ಳಿಸ್ವಾಮಿ, ಸಾಹಿತಿ ಕಾಳೇನಹಳ್ಳಿ ಮಹದೇವು, ಮಾಜಿ ಸೈನಿಕ ಎಚ್‌.ಎಂ. ನಾಗಯ್ಯ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್‌, ಭಾರತೀಯ ರಿಪಬ್ಲಿಕ್‌ ಪಕ್ಷದ ಜಿಲ್ಲಾಧ್ಯಕ್ಷ ಕೊಮ್ಮೆರಹಳ್ಳಿ ಕೃಷ್ಣಮೂರ್ತಿ,  ಕೆಪಿಸಿಸಿ ಸದಸ್ಯ ಚಿದಂಬರಮೂರ್ತಿ, ಎಸ್‌ಎಫ್‌ಐ ತಾಲ್ಲೂಕು ಅಧ್ಯಕ್ಷ ಬಿ.ಎ. ಮಧುಕುಮಾರ್‌, ಪವಿತ್ರಾ್ರ, ಅಮೃತಾ, ರಂಜಿತಾ, ಮುಖಂಡರಾದ ಕೆ.ಎಂ. ಪಂಚಲಿಂಗಯ್ಯ, ನಾಗರಾಜು, ಗುಡಿಗೆರೆ ಬಸವರಾಜು, ಹುಲಿಗೆರೆಪುರ ಮಹದೇವು, ಯಲಾದಹಳ್ಳಿ ಪುಟ್ಟಸ್ವಾಮಿ, ಮಾಜಿ ಸೈನಿಕ ಹಾಗಲಹಳ್ಳಿ ರಾಜಣ್ಣ, ಹನುಮೇಶ್‌, ಕೆ.ಸಿ. ಪ್ರಕಾಶ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.