ಈಗ ನಗರಗಳಲ್ಲಿ ಎಲ್ಲೆಡೆಯೂ ಮುಗಿಲೆತ್ತರದ ಕಟ್ಟಡಗಳದ್ದೇ ಕಾರುಬಾರು. ಎದೆ ಝಲ್ಲೆನ್ನಿಸುವಷ್ಟು ಎತ್ತರ ಮತ್ತು ನೋಟ. ಬೃಹತ್ ಕಟ್ಟಡಗಳು ಅಭಿವೃದ್ಧಿಯ ಧ್ಯೋತಕ ಎಂಬುದು ಕೆಲವರ ಅಭಿಪ್ರಾಯ.

ನಗರೀಕರಣ ಬೆಳೆದಂತೆ ಕಟ್ಟಡಗಳ ನಿರ್ಮಾಣವೂ ಶರವೇಗದಲ್ಲಿ ಬೆಳೆಯುತ್ತಿದೆ. ಅಭಿವೃದ್ಧಿ, ಪ್ರತಿಷ್ಠೆ, ಅಂತಸ್ತು, ವ್ಯವಹಾರ ಹೀಗೆ ವಿವಿಧ ಕಾರಣಗಳಿಗಾಗಿ ಕಟ್ಟಡಗಳ ನಿರ್ಮಾಣ ಅಗತ್ಯವಾಗಿ ಬೇಕಾಗಿದೆ.

ಇನ್ನೂ ವಿದೇಶಗಳಲ್ಲಿ ನೀರಿನಲ್ಲಿ ತೇಲುವ ಕಟ್ಟಡಗಳು, ಗುರುತ್ವಾಕರ್ಷಣೆ ಸಹಾಯದೊಂದಿಗೆ ತಿರುಗುವ ಕಟ್ಟಡಗಳು, ಸ್ಥಳಾಂತರ ಮಾಡಬಹುದಾದ ಕಟ್ಟಡಗಳ ನಿರ್ಮಾಣ ಆಧುನಿಕತೆಯ ಕೊಡುಗೆ ಗಳಾಗಿವೆ. ಸದ್ಯದ ಮಟ್ಟಿಗೆ ಭಾರತದಲ್ಲಿ ಇಂಥ ಯಾವುದೇ ಪ್ರಯೋಗ ಅಥವಾ ಕಟ್ಟಡ ನಿರ್ಮಾಣವಾಗಿಲ್ಲ ಎನ್ನಬಹುದು.

ಇತ್ತೀಚೆಗಂತೂ ಕಟ್ಟಡ ನಿರ್ಮಾಣ ಬಹಳ ದುಬಾರಿಯಾಗಿದೆ. ಅದಕ್ಕೆ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆಯೂ ಗಗನಕ್ಕೇರಿದೆ. ಸಾಮಾನ್ಯರು ಸಣ್ಣ ಮನೆ ಕಟ್ಟಿಕೊಳ್ಳುವುದಕ್ಕೂ ಪರದಾಡಬೇಕಾಗಿದೆ.

ಸರ್ಕಾರ ಕೂಡ ವಸತಿ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವ್ಯಯ ಮಾಡುತ್ತಿದೆ. ಬದಲಾಗಿ ಕಡಿಮೆ ವೆಚ್ಚದ, ತ್ವರಿತಗತಿ ನಿರ್ಮಾಣ ಕಾರ್ಯದ, ಕೈಗೆಟುಕುವ ಮನೆಗಳ ನಿರ್ಮಾಣಕ್ಕಾಗಿ ಪರ್ಯಾಯ ಮಾರ್ಗಗಳತ್ತ ಯೋಚಿಸುವುದು ಅನಿವಾರ್ಯವಾಗಿದೆ.
ಯೂರೋಪ್ ಮತ್ತು ಗಲ್ಫ್ ದೇಶಗಳಲ್ಲಿ ಈಗಾಗಲೇ ‘ಮೈವನ್ ತಂತ್ರಜ್ಞಾನದ ಕಟ್ಟಡ’ ನಿರ್ಮಾಣ ಹೆಚ್ಚು ಜನಪ್ರಿಯವಾಗುತ್ತಿದೆ.

‘ಮೈವನ್ ತಂತ್ರಜ್ಞಾನ’
ಇಟ್ಟಿಗೆ, ಕಲ್ಲು, ಗಾರೆಗೆ ಬದಲಾಗಿ ಅಲ್ಯುಮಿನಿಯಂ ಮತ್ತು ಕಾಂಕ್ರೀಟ್ ಬಳಸಿಕೊಂಡು ಕಟ್ಟಡಗಳನ್ನು ನಿರ್ಮಿಸುವುದನ್ನೇ ‘ಮೈವನ್ ತಂತ್ರಜ್ಞಾನ’ ಎಂದು ಕರೆಯುತ್ತಾರೆ (ಅಲ್ಯುಮಿನಿಯಂ ಫಾರ್ಮ್ ವರ್ಕ್).

೧೯೯೦ರ ದಶಕದಿಂದೀಚೆಗೆ ಆರಂಭವಾದ ಮಲೇಷಿಯಾ ಮೂಲದ ‘ಮೈವನ್’ (MIVAN COMPANY) ಎಂಬ ಕಂಪೆನಿ ಈ ತಂತ್ರಜ್ಞಾನ ಬಳಸಿದ್ದರಿಂದ ಇಂತಹ ವಿನ್ಯಾಸದ ಮನೆಗಳಿಗೆ ಈ ಹೆಸರು ಬಂದಿದೆ. ಪರಿಸರ ಸ್ನೇಹಿ ಮತ್ತು ಆರ್ಥಿಕ ಉಳಿತಾಯ ಈ ತಂತ್ರಜ್ಞಾನದ ಮುಖ್ಯ ಧ್ಯೇಯವಾಗಿದೆ.

ಕಟ್ಟಡ ನಿರ್ಮಾಣ ಹೇಗೆ?
ಮನೆ ನಿರ್ಮಾಣಕ್ಕೂ ಮುನ್ನ ಪೂರ್ವ ಯೋಜಿತ ರೀತಿಯಲ್ಲಿ ವಿಸ್ತೀರ್ಣಕ್ಕೆ ತಕ್ಕಂತೆ ಅಲ್ಯೂಮಿನಿಯಂ ಫಲಕಗಳನ್ನು ಕಾಯ್ದಿರಿಸಿಕೊಳ್ಳಬೇಕು

ಅಡಿಪಾಯದ ಮೇಲಿಂದ ಎರಡು ಅಲ್ಯೂಮಿನಿಯಂ ಫಲಕಗಳನ್ನು ಗೋಡೆಯ ಆಕಾರದಲ್ಲಿ ಗಾತ್ರ, ಸ್ಥಳಕ್ಕೆ ಅನುಗುಣವಾಗಿ ಜೋಡಿಸಿಕೊಳ್ಳಬೇಕು.

ಜೋಡಣೆಯಾದ ಫಲಕಗಳ ನಡುವಿನ ಜಾಗವನ್ನು ಕಾಂಕ್ರೀಟ್ನಿಂದ ಮುಚ್ಚಬೇಕು.

ಬಾಗಿಲು, ಕಿಟಕಿ, ಸಜ್ಜಾ, ಕಿಂಡಿಗಳಿಗೆ ಬೇಕಾದ ಜಾಗ ಬಿಟ್ಟು ಅದಕ್ಕೆ ಅನುಗುಣವಾಗಿ ಫಲಕಗಳ ಜೋಡಣೆ ಅಗತ್ಯ.

ಫಲಕಗಳನ್ನು ಗೋಡೆಯಾಕಾರದಲ್ಲಿ ಜೋಡಿಸಿದ ನಂತರ ಕಾಂಕ್ರೀಟ್ನಿಂದ ಪ್ಲಾಸ್ಟಿರಿಂಗ್ ಮಾಡುವ ಅವಶ್ಯಕತೆಯೇನೂ ಇಲ್ಲ.

ನಿರ್ಮಾಣವಾದ ಗೋಡೆಗೆ ಆಲ್ಯೂಮಿನಿಯಂ ಫಲಕಗಳಿಂದಲೇ ಮೇಲ್ಛಾವಣಿ ರೂಪಿಸಬೇಕು. ನಂತರ ಮೇಲೆ ಕಾಂಕ್ರೀಟ್ ಹಾಕಬೇಕು.

ಅಲ್ಯೂಮಿನಿಯಂ ಫಲಕಗಳಿಂದ ಕಟ್ಟಲಾದ ಗೋಡೆಗಳಿಗೆ ನೇರವಾಗಿ ತಮ್ಮ ಅಭಿರುಚಿಗೆ ತಕ್ಕಂತೆ ಸುಣ್ಣ/ ಬಣ್ಣ ಬಳಿಯಬಹುದು.

ಈ ಕಟ್ಟಡ ನಿರ್ಮಾಣಕ್ಕೆ ಬಳಸುವ ಅಲ್ಯೂಮಿನಿಯಂ ಲೋಹ ಹೆಚ್ಚಿನ ಸಾರ್ಮರ್ಥ್ಯದ್ದಾಗಿದ್ದು, 370kg/ mtr 2 ಒತ್ತಡವನ್ನು ತಡೆಯುವ ಶಕ್ತಿ ಹೊಂದಿರುತ್ತದೆ.

ತಂತ್ರಜ್ಞಾನದ ಪ್ರಯೋಜನ
ದೀರ್ಘ ಕಾಲದ ಬಾಳಿಕೆ

ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣ

ಸಮಯದ ಉಳಿತಾಯ. ಗೋಡೆ/ ಮೇಲ್ಛಾವಣಿ ನಿರ್ಮಾಣಕ್ಕೆ ಬೇಕಾಗುವ ಕಾಲಾವಧಿ ೧೦ರಿಂದ ೧೨ ಗಂಟೆ ಅಷ್ಟೆ. ತೆರವುಗೊಳಿಸಲು ೭ರಿಂದ ೧೦ ಗಂಟೆ ಸಾಕು.

ನಿರ್ಮಾಣಕ್ಕೆ ಹೆಚ್ಚಿನ ಕೌಶಲವೇನೂ ಬೇಕಾಗಿಲ್ಲ.- ಬೋಲ್ಟ್, ನಟ್ ಜೋಡಿಸುವ ವಿಧಾನ ಗೊತ್ತಿದ್ದರೆ ಸಾಕು.

ಕಡಿಮೆ ಕೂಲಿ ಕಾರ್ಮಿಕರ ಬಳಕೆ

ಕಟ್ಟಡ ನಿರ್ಮಾಣಕ್ಕೆ ನೀರು, ಇಟ್ಟಿಗೆ, ಕಲ್ಲು, ಮಣ್ಣು, ಮರದ ಅವಶ್ಯಕತೆ ಇಲ್ಲ.

ಗೋಡೆ, ಕಿಟಕಿ, ಬಾಗಿಲು ಜೋಡಣೆ ಸಂದಿಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದಿಲ್ಲ.

ಸೋರಿಕೆ ಮತ್ತು ದುರಸ್ತಿ ಸಮಸ್ಯೆ ಇಲ್ಲ.

ಹೆಚ್ಚು ಸುರಕ್ಷತೆ

ತಂತ್ರಜ್ಞಾನ ಬಳಕೆ ಎಲ್ಲೆಲ್ಲಿ?
ಈ ತಂತ್ರಜ್ಞಾನವನ್ನು ಬೆಳೆಯುತ್ತಿರುವ ನಗರ ಪ್ರದೇಶದ ಅಪಾರ್ಟ್ಮೆಂಟ್ಗಳು, ವಸತಿ ಯೋಜನೆಗಳಲ್ಲಿ ಬಳಸಬಹುದು. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪ್ರತಿಯೊಬ್ಬರಿಗೂ ‘ಸೂರು’ ನಿರ್ಮಾಣ ಅಗತ್ಯವಾಗಿರುವುದರಿಂದ ಇಂಥ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವುದರಿಂದ ಖರ್ಚು ಮತ್ತು ಸಮಯ ಉಳಿತಾಯ ಮಾಡಬಹುದು.

೨೦೦೮ರಲ್ಲಿ ಮೈವನ್ ತಂತ್ರಜ್ಞಾನ ಬಳಸಿಕೊಂಡು ದುಬೈನಲ್ಲಿ ೭೩ ಅಂತಸ್ತಿನ ತಿರುಗುವ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಮುಂಬೈನಲ್ಲೂ ಈ ತಂತ್ರಜ್ಞಾನ ಬಳಕೆಯಿಂದ ಅನೇಕ ಯೋಜನೆಗಳಲ್ಲಿ ಕಟ್ಟಡಗಳ ನಿರ್ಮಾಣವಾಗುತ್ತಿದೆ. ಮಿತವ್ಯಯ ಕ್ರಮದ ಹಿನ್ನೆಲೆಯಲ್ಲಿ ಸದ್ಯಕ್ಕೆ ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಇಂತಹ ತಂತ್ರಜ್ಞಾನ ಅವಶ್ಯಕವಾಗಿ ಬೇಕಾಗಿದೆ.

ನಗರದಲ್ಲಿಯೂ ನಿರ್ಮಾಣ
ಬೆಂಗಳೂರಿನಲ್ಲಿ ಕೊಳೆಗೇರಿ ನಿರ್ಮೂಲನ ಮಂಡಳಿಯವರು ನಿರ್ಮಿಸುವ ಪುನರ್ವಸತಿ ವಲಯದಲ್ಲಿ ಇದೇ ತಂತ್ರಜ್ಞಾನ ಬಳಸಿ ಮನೆಗಳನ್ನು ಕಡಿಮೆ ವೆಚ್ಚದಲ್ಲಿ ಮತ್ತು ಕ್ಷಿಪ್ರಗತಿಯಲ್ಲಿ ನಿರ್ಮಿಸಲಾಗಿದೆ.

‘ಪುರ್ವ ವೆಸ್ಟೆಂಡ್’
ಲೋಕಸಭೆ ಚುನಾವಣೆ ನಂತರ ಬರಲಿರುವ ಹೊಸ ಆಡಳಿತದ ಬಗ್ಗೆ ದೇಶದ ಉದ್ಯಮ ವಲಯದಲ್ಲಿ ಭಾರೀ ನಿರೀಕ್ಷೆಗಳು ಗರಿಗೆದರಿವೆ. ಇದರ ಪ್ರತಿಬಿಂಬವೇನೋ ಎಂಬಂತೆ ‘ಷೇರುಪೇಟೆ’ಯಲ್ಲಿ ಕಳೆದ ವಾರವಿಡೀ ವಹಿವಾಟು ಮೇಲ್ಮುಖವಾಗಿಯೇ ಇತ್ತು. ಐದು ದಿನಗಳಲ್ಲಿ ‘ಬಿಎಸ್ಇ’ ಸಂವೇದಿ ಸೂಚ್ಯಂಕ ಒಟ್ಟು 800 ಅಂಶಗಳ ಏರಿಕೆ ಕಂಡಿದೆ. ಶುಕ್ರವಾರವಂತೂ ಹೂಡಿಕೆದಾರರ ಷೇರು ಸಂಪತ್ತಿನಲ್ಲಿ ₨85 ಸಾವಿರ ಕೋಟಿ ವೃದ್ಧಿಯಾಗಿದೆ. ಇದರಲ್ಲಿ ರಿಯಲ್ ಎಸ್ಟೇಟ್ ವಲಯದ ಷೇರುಗಳೂ ಇದ್ದವು ಎಂಬುದು ಗಮನಾರ್ಹ.

2012ರಿಂದ ಅವನತ ಮುಖಿಯಾಗಿಯೇ ಇದ್ದ ದೇಶದ ಷೇರುಪೇಟೆ 2014ರ ಬಗ್ಗೆ ಭಾರೀ ಆಶಾಭಾವ ಹೊಂದಿದೆ. ಎರಡು ವರ್ಷಗಳ ಕಾಲ ಮಾರಾಟವಾಗದೇ ಉಳಿದಿದ್ದ ಫ್ಲ್ಯಾಟ್ಗಳಲ್ಲಿ ಬಹಳಷ್ಟು ಮಾರಾಟವಾಗುವ ನಿರೀಕ್ಷೆಯೂ ಇದೆ. ಇನ್ನೊಂದೆಡೆ, ಹೊಸ ಯೋಜನೆಗಳು ಕಾರ್ಯಾರಂಭವೂ ನಡೆದಿದೆ. ರಿಯಲ್ ಎಸ್ಟೇಟ್ ಅಭಿವೃದ್ಧಿ ಕ್ಷೇತ್ರದ ಪ್ರಮುಖ ಕಂಪೆನಿಗಳಲ್ಲೊಂದಾದ ಬೆಂಗಳೂರಿನ ಪುರವಂಕರ ಪ್ರಾಜೆಕ್ಟ್ಸ್ ಲಿ., ಮಾ. 3ರಂದು ‘ಪುರ್ವ ವೆಸ್ಟೆಂಡ್’ ವಸತಿ ಯೋಜನೆ ಪ್ರಕಟಿಸಿದೆ.

ಕೋರಮಂಗಲದಿಂದ 4 ಕಿ.ಮೀ. ದೂರದಲ್ಲಿರುವ ‘ಪುರ್ವ ವೆಸ್ಟೆಂಡ್’ ವಸತಿ ಯೋಜನೆ ನ್ಯೂಯಾರ್ಕ್ನ ಬ್ರಾಡ್ವೇ ಮತ್ತು ಲಂಡನ್ನ ವೆಸ್ಟ್ಎಂಡ್ ಶೈಲಿಯಲ್ಲಿದೆ. 8.25 ಎಕರೆಯಲ್ಲಿ 2 ಮತ್ತು 3 ಕೊಠಡಿಗಳ ಒಟ್ಟು 735 ಫ್ಲ್ಯಾಟ್ ನಿರ್ಮಾಣಗೊಳ್ಳುತ್ತಿವೆ. ಮೊದಲ 4 ದಿನದಲ್ಲೇ 317 ಮನೆಗಳಿಗೆ ಗ್ರಾಹಕರು ಮುಂಗಡ ಪಾವತಿಸಿದ್ದಾರೆ ಎಂದು ವಿವರಿಸಿದ್ದಾರೆ ಪುರವಂಕರ ಪ್ರಾಜೆಕ್ಟ್ನ ಗ್ರೂಪ್ ‘ಸಿಇಒ’ ಜಾಕ್ಬಾಸ್ಟಿನ್ ನಝರತ್.ಈವರೆಗೆ 43 ವಸತಿ ಯೋಜನೆಗಳು, 2ವಾಣಿಜ್ಯ ಸಂಕೀರ್ಣಗಳನ್ನು (ಒಟ್ಟು 189.20 ಲಕ್ಷ ಚದರಡಿ ವಿಸ್ತೀರ್ಣ) ಪೂರ್ಣಗೊಳಿಸಲಾಗಿದೆ. ಪುರ್ವ ವೆಸ್ಟೆಂಡ್ 3 ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

(ಲೇಖಕರು, ಕರ್ನಾಟಕ ಗೃಹಮಂಡಳಿಯಲ್ಲಿ ಸಹಾಯಕ ಎಂಜಿನಿಯರ್. ಮೊ: ೮೧೯೭೪ ೮೧೮೪೨)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.