ಗುರುವಾರ , ಮಾರ್ಚ್ 4, 2021
16 °C

‘ರಾಸಾಯನಿಕದಿಂದ ಮುಕ್ತಿ’ ಸಂತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಸಾಯನಿಕದಿಂದ ಮುಕ್ತಿ’ ಸಂತೆ!

ಬೆಳಿಗ್ಗೆ ಕಾಫಿಯಿಂದ ಹಿಡಿದು ರಾತ್ರಿ ಸೊಳ್ಳೆ ಓಡಿಸಲು ಹಚ್ಚುವ ಲಿಕ್ವಿಡೇಟರ್‌ವರೆಗೆ ರಾಸಾಯನಿಕಗಳದ್ದೇ ಸಾಮ್ರಾಜ್ಯ. ನಿಧಾನ ವಿಷಗಳೆಂದೇ ಕುಖ್ಯಾತಿ ಪಡೆದಿರುವ ರಾಸಾಯನಿಕಗಳು ಈಗ ಅತಿಕ್ರಮಿಸದ ತಾಣವೇ ಇಲ್ಲ ಎಂಬಂತಾಗಿದೆ. ಆಹಾರವಂತೂ ಅಡುಗೆಮನೆಗೆ ಬರುವಷ್ಟರಲ್ಲಿ ಎಷ್ಟು ಬಗೆಯ ವಿಷಗಳಿಂದ ತೋಯ್ದಿರುತ್ತದೋ?ಅಪಾಯಕಾರಿ ರಾಸಾಯನಿಕಗಳ ಬಗ್ಗೆ ಈಗ ಜನರಲ್ಲಿ ಜಾಗೃತಿ ಮೂಡುತ್ತಿದೆ. ಸಾವಯವ ಅಥವಾ ನೈಸರ್ಗಿಕ ವಿಧಾನಗಳಲ್ಲಿ ಬೆಳೆದ ಆಹಾರ ಸಾಮಗ್ರಿಗೆ ಬೇಡಿಕೆ ಹೆಚ್ಚುತ್ತಿದೆ. ಅದಲ್ಲದೇ ಪ್ರತಿಯೊಂದು ಪದಾರ್ಥವೂ ನಿಸರ್ಗಸ್ನೇಹಿ ವಿಧಾನದಿಂದ ಉತ್ಪಾದನೆಯಾಗುತ್ತಿರುವುದು ಹೊಸ ಬೆಳವಣಿಗೆ.ಅಂಥ ಉತ್ಪನ್ನಗಳನ್ನು ಒಂದೇ ಸೂರಿನಡಿ ಪ್ರದರ್ಶಿಸುವ ‘ರಾಸಾಯನಿಕದಿಂದ ಮುಕ್ತಿ’ ಸಂತೆ ಆಗಸ್ಟ್ 13ರಿಂದ 15ದವರೆಗೆ ನಡೆಯಲಿದೆ. ಅಂದ ಹಾಗೆ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಈ ವಿಶೇಷ ಸಂತೆಯನ್ನು ಏರ್ಪಡಿಸಲಾಗಿದೆ.‘ರಾಸಾಯನಿಕಗಳು ಉಂಟು ಮಾಡುತ್ತಿರುವ ಅವಾಂತರವನ್ನು ತೆರೆದಿಡುವ ಕಾರ್ಯಕ್ರಮಗಳು ಈ ಸಂತೆಯ ವಿಶೇಷ. ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನವನ್ನು ಆದಷ್ಟು ಕಡಿಮೆ ಬಳಸಿ ಎಂದು ಹೇಳುವುದರ ಜತೆಗೆ ಪರ್ಯಾಯ ದಾರಿಯೊಂದನ್ನು ತೋರುವುದು ಸಂತೆಯ ಉದ್ದೇಶ’ ಎಂದು ಕಾರ್ಯಕ್ರಮ ಆಯೋಜಿಸಿರುವ ‘ಗ್ರೀನ್ ಪಾತ್– ಆರ್ಗ್ಯಾನಿಕ್ ಸ್ಟೇಟ್’ ಸಂಸ್ಥಾಪಕ ಹಾಗೂ ಸಾವಯವ ಕೃಷಿಕ ಎಚ್.ಆರ್.ಜಯರಾಮ್ ಹೇಳುತ್ತಾರೆ.ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿರುವ ಸಂತೆಯಲ್ಲಿ ಪರಿಸರ ಸ್ನೇಹಿ ಪದಾರ್ಥಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ. ಹತ್ತಾರು ಬಗೆಯ ದಿನಸಿ ಸಾಮಗ್ರಿ, ಸಾಂಪ್ರದಾಯಿಕ ತಿನಿಸುಗಳು, ಕೃಷಿ– ಪರಿಸರ ಪುಸ್ತಕಗಳು, ಹಣ್ಣು– ತರಕಾರಿ ಜತೆಗೆ ಸಾವಯವ ವಿಧಾನದಲ್ಲಿ ಬೆಳೆದ ಹತ್ತಿಯ ಉಡುಪುಗಳು ಲಭ್ಯ. ಮಕ್ಕಳಿಗಾಗಿ ಹಲವು ವಿಶೇಷ ಮನರಂಜನೆ ಕಾರ್ಯಕ್ರಮಗಳೂ ನಡೆಯಲಿವೆ.ಸ್ಥಳ: ಗ್ರೀನ್ ಪಾತ್– ಆರ್ಗ್ಯಾನಿಕ್ ಸ್ಟೇಟ್, ರಾಜೀವ್ ಗಾಂಧಿ ವೃತ್ತ, ಶೇಷಾದ್ರಿಪುರಂ, ಬೆಂಗಳೂರು. 

ವಿವರಗಳಿಗೆ: 080 23569777 / 9538256777 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.