ಹುಬ್ಬಳ್ಳಿ: ‘ಮಹಾದಾಯಿ ನದಿ ನೀರಿಗಾಗಿ ಹೋರಾಟ ಮಾಡಿದ ರೈತರನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾ ಗಿದೆ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ನಾವೇ ಜೈಲಿಗೆ ಹೋಗಲು ಸಿದ್ಧ’ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಇಲ್ಲಿ ಗುಡುಗಿದರು.

ನವಲಗುಂದದಿಂದ ಹುಬ್ಬಳ್ಳಿವರೆಗೆ ರೈತರು ನಡೆಸಿದ ಬೃಹತ್ ಬೈಕ್ ರ್ಯಾಲಿ ಮಂಗಳವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿದಾಗ ಸುದ್ದಿಗಾ ರರೊಂದಿಗೆ ಮಾತನಾಡಿದ ಅವರು, ‘ಕುಡಿಯುವ ನೀರಿಗಾಗಿ ಹೋರಾಟ ಮಾಡಿದ ರೈತರು ಮತ್ತು ಅಮಾಯಕರ ಮನೆಗೆ ನುಗ್ಗಿದ ಪೊಲೀಸರು ಬೂಟು ಕಾಲಿನಿಂದ ಒದ್ದು, ಲಾಠಿಯಿಂದ ಹೊಡೆದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಯಮನೂರ, ಆರೆಕುರಹಟ್ಟಿ, ಅಳಗವಾಡಿಯಲ್ಲಿ ರೈತರ ಗೋಳು ಹೇಳತೀರದಾಗಿದೆ. ಅವರ ಮೇಲೆ ಹಾಕಿರುವ ಎಲ್ಲ ಕೇಸುಗಳನ್ನು ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಮಹಾದಾಯಿ ಹೋರಾಟ ಆರಂಭವಾದಾಗಿನಿಂದ ನಾಲ್ಕು ಜಿಲ್ಲೆಗಳ ಒಂಬತ್ತು ತಾಲ್ಲೂಕುಗಳ ರೈತರು ಶಾಂತಿ ಯುತವಾಗಿಯೇ ಹೋರಾಟ ಮಾಡಿ ಕೊಂಡು ಬಂದಿದ್ದೇವೆ. ಆದರೆ, ನ್ಯಾಯಮಂಡಳಿಯಲ್ಲಿ ರಾಜ್ಯದ ಅರ್ಜಿ ವಜಾಗೊಂಡಿದ್ದರಿಂದ ಆಕ್ರೋಶಗೊಂಡ ರೈತರು ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಮನಸೋಇಚ್ಛೆ ಹಲ್ಲೆ ನಡೆಸಿರುವುದು ಖಂಡನೀಯ. ಪೊಲೀಸರು ರೈತರ ಸಹನೆಯನ್ನು ಕೆಣಕಿದ್ದಾರೆ. ನಮಗೆ ನೀರು ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ. ಇದಕ್ಕೆ ಪ್ರತಿ ರೋಧ ಒಡ್ಡುವವರು ಮುಂದಾ ಗುವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಲಾಯಿತು. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಚನ್ನಮ್ಮ ವೃತ್ತದಲ್ಲಿ ಬೈಕ್ ರ್ಯಾಲಿಯನ್ನು ಅಂತ್ಯಗೊಳಿಸಲಾಯಿತು.

ಕುದುರೆ ಏರಿ ಬಂದ ಕರಿಗಾರ
ನವಲಗುಂದದಿಂದ ಹುಬ್ಬಳ್ಳಿವರೆಗೆ ನಡೆಸಿದ ಬೈಕ್ ರ್ಯಾಲಿಯಲ್ಲಿ ಶಿವಾನಂದ ಕರಿಗಾರ ಕುದುರೆ ಏರಿ ಬಂದರು. ಬ್ಯಾಹಟ್ಟಿಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಅವರು ಕುದುರೆ ಮೇಲೆ ಬಂದಾಗ ಮತ್ತೊಬ್ಬ ಕುದುರೆ ಸವಾರ ಅವರನ್ನು ಹಿಂಬಾಲಿಸಿದ. ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಕರಿಗಾರ ಅವರಿಗೆ ಕೈ ಎತ್ತಿ ಅಭಿನಂದನೆ ಸಲ್ಲಿಸುತ್ತಿದ್ದ ದೃಶ್ಯವೂ ಸಾಮಾನ್ಯವಾಗಿ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.