ಶನಿವಾರ, ಜೂನ್ 19, 2021
23 °C

‘ರೈತರ ಸಮಸ್ಯೆಗೆ ಮಠದಿಂದ ರೈತರಿಗೆ ವೇದಿಕೆ ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿತಾಳ :ಧಾರ್ಮಿಕ ಜಾಗೃತಿ ಮೂಡಿ­ಸು­ವುದರ ಜೊತೆಗೆ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ವೇದಿಕೆ ಒದಗಿಸಿದ ಕೀರ್ತಿ ಶ್ರೀಮಠಕ್ಕೆ ಸಲ್ಲುತ್ತದೆ ಎಂದು ಪೊತ್ನಾಳ ಜಿಲ್ಲಾ ಪಂಚಾಯಿತಿ ಸದಸ್ಯ ವಿಶ್ವನಾಥ ಪಾಟೀಲ್ ತೋರಣದಿನ್ನಿ ಹೇಳಿದರು.ಸಮೀಪದ ಇರಕಲ್ ಬಸವಯೋಗ ಮಂಟಪದಲ್ಲಿ ಸೋಮವಾರ ಜಾತ್ರೆ ನಿಮಿತ್ತ ಜರುಗಿದ ಸಾಮೂಹಿಕ ವಿವಾಹ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರ ಸನ್ನಾನ ಸಮಾರಂಭ­ದಲ್ಲಿ ಮಾತನಾಡಿ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶ್ರೀಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ಹೇಳಿದರು.ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್.ಆರ್.ನವಲಿ ಹಿರೇಮಠ ಮಾತನಾಡಿ ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರ ಮಾಡುವ ಕೆಲಸಗಳನ್ನು ಮಠಗಳು ಮಾಡುತ್ತಿವೆ ಎಂದು ಶ್ಲಾಘಿಸಿದರು. ವಟಗಲ್ ಗ್ರಾಮದ ಚಿಲ್ಕರಾಗಿ ಸೂಗಪ್ಪ ರಚಿಸಿದ ಗರುದೇವನ ಗುಣಗಾನ ಪುಸ್ತಕವನ್ನು ಸಾನಿಧ್ಯ ವಹಿಸಿದ್ದ ಬಸವಪ್ರಸಾದ ಸ್ವಾಮೀಜಿ ಬಿಡುಗಡೆ ಮಾಡಿದರು.ಎಸ್.ಆರ್.ನವಲಿ ಹಿರೇಮಠ ಅವರಿಗೆ ಜಂಗಮ ಜ್ಯೋತಿ, ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿಯನ್ನು ಪಾಮನಕಲ್ಲೂರಿನ ನಬೀಸಾಬ್ ಮತ್ತು ರೈತರತ್ನ ಪ್ರಶಸ್ತಿಯನ್ನು ಕವಿತಾಳದ ಪತ್ರಕರ್ತ ರಾಮಣ್ಣ ಬಿ.ಇಡಿ. ಅವರಿಗೆ ನೀಡಿ ಸನ್ಮಾನಿಸಲಾಯಿತು. ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡಪ್ಪ ನಾಯಕ, ಕಿಡಿಗಣೆಯ್ಯಸ್ವಾಮಿ, ದಂಡಗುಂಡಪ್ಪ ತಾತ, ಬಸವಭೂಷಣ ಸ್ವಾಮಿ ಇತರರು ವೇದಿಕೆ ಮೇಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.