ಗುರುವಾರ , ಜೂನ್ 17, 2021
27 °C

‘ವಯಸ್ಸಾದವರಿಗೆ ಹೆಚ್ಚು ಆಯ್ಕೆಗಳಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿಗೂ ಅಮಿತಾಭ್‌ ಬಚ್ಚನ್‌ ಹಿಂದಿ ಚಿತ್ರೋದ್ಯಮದ ಅತ್ಯಂತ ಬ್ಯುಸಿ ನಟ ಎನಿಸಿದ್ದಾರೆ. ಆದರೆ, ‘ನಾನು ಪಾತ್ರಗಳ ಆಯ್ಕೆಯ ವಿಚಾರದಲ್ಲಿ ಹೆಚ್ಚು ಚೂಸಿ ಆಗಿಲ್ಲ. ಯಾಕೆಂದರೆ ವಯಸ್ಸಾದ ಮೇಲೆ ಚಿತ್ರ ಜಗತ್ತಿನಲ್ಲಿ ಹೆಚ್ಚು ಆಯ್ಕೆಗಳಿರುವುದಿಲ್ಲ. ಹಾಗಾಗಿ ವಯಸ್ಸಿನ ಕಾರಣದಿಂದ ಅನೇಕ ಪಾತ್ರಗಳು ನನ್ನ ಕೈ ತಪ್ಪಿವೆ’ ಎಂದು ಅಮಿತಾಭ್ ಹೇಳಿದ್ದಾರೆ.‘ಬಂದ ಪಾತ್ರಗಳನ್ನು ಒಪ್ಪಿಕೊಳ್ಳಬೇಕಾದುದು ಈ ವಯಸಿನಲ್ಲಿ ಮುಖ್ಯ. ಈಗಿನ ಯುವ ನಿರ್ದೇಶಕರ ಸ್ಕ್ರಿಪ್ಟ್‌ನಲ್ಲಿ ಹಿರಿಯ ವ್ಯಕ್ತಿಯೊಬ್ಬನ ಪಾತ್ರ ಇದ್ದೇ ಇರುತ್ತದೆ. ಅಂಥ ಪಾತ್ರಗಳಿಗೆ ನನ್ನನ್ನು ಕರೆಯುತ್ತಾರೆ’ ಎಂದು ಅಮಿತಾಭ್‌ ಹೇಳಿಕೊಂಡಿದ್ದಾರೆ.ಹಾರರ್‌ ಕಾಮಿಡಿ ಚಿತ್ರ ‘ಭೂತ್‌ನಾಥ್‌ ರಿಟರ್ನ್ಸ್‌’ನಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿ, ‘‘ಚಿತ್ರದ ಪರಿಕಲ್ಪನೆ ನನಗೆ ಇಷ್ಟವಾಯಿತು. ನಿರ್ದೇಶಕ ನಿತೇಶ್‌ ತಿವಾರಿ ಜೊತೆ ‘ಕೌನ್‌ ಬನೇಗ ಕರೋಡ್‌ಪತಿ’ಯ ಪ್ರಮೋಷನ್‌ನಲ್ಲಿ ಕೆಲಸ ಮಾಡಿದ್ದೇನೆ. ಬಹಳ ದಿನಗಳ ನಂತರ ಸ್ವಯಂಚಾಲಿತ ಸ್ಕೂಟರ್‌ನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಓಡಿಸಿದ್ದೇನೆ. ಆ ಸ್ಕೂಟರ್‌ ಅನೇಕ ವರ್ಷಗಳಿಂದ ನನ್ನ ಬಳಿ ಇದೆ. ಕೆಲವು ಸಲ ಅದನ್ನು ಬಳಸಿದ್ದೇನೆ ಕೂಡಾ. ಸೆಟ್‌ನಲ್ಲೂ ಓಡಿಸಿದ್ದೇನೆ’’ ಎಂದು ಸಂದರ್ಶನವೊಂದರಲ್ಲಿ ಖುಷಿ ಹಂಚಿಕೊಂಡಿದ್ದಾರೆ.ಇಷ್ಟೇ ಅಲ್ಲ, ‘‘ತಮ್ಮ ಮೊಮ್ಮಕ್ಕಳು ಕೂಡ ‘ಭೂತ್‌ನಾಥ್‌’ ಚಿತ್ರದ ಬಗ್ಗೆ ಕುತೂಹಲದಿಂದಿದ್ದಾರೆ’’ ಎಂದು ಅಮಿತಾಭ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.