ಇಪ್ಪತ್ತೈದು ವರ್ಷಗಳ ಹಿಂದೆ ಬ್ರಿಟನ್ನಿನ ಕಂಪ್ಯೂಟರ್ ವಿಜ್ಞಾನಿ ಸರ್ ಟಿಮ್ ಬರ್ನರ್ಸ್ ಲೀ ಅವರು ವಿಶ್ವ ವ್ಯಾಪಿ ಜಾಲ (world wide web-– www) ಕಂಡು ಹಿಡಿದಿರುವುದಕ್ಕೆ ಈಗ 25 ವರ್ಷಗಳು ತುಂಬುತ್ತಿವೆ.

ವಿಶ್ವ ವ್ಯಾಪಿ ಜಾಲವು (www)- ಇಂಟರನೆಟ್ ಅಲ್ಲ. ವಿಶ್ವ ವ್ಯಾಪಿ ಜಾಲ ಮತ್ತು ಅಂತರ್ಜಾಲ (internet) ಎರಡೂ ಬೇರೆ ಬೇರೆ. ಇಂಟರ್ನೆಟ್ ಎನ್ನುವುದು ಪರಸ್ಪರ ಸಂಪರ್ಕ ಹೊಂದಿದ ಕಂಪ್ಯೂಟರ್ಗಳ ಜಾಲವಾಗಿದೆ. ಬಳಕೆದಾರರು ಇಂಟರ್-ನೆಟ್ನಲ್ಲಿ ಮಾಹಿತಿಯನ್ನು ಹೇಗೆ ಹಂಚಿಕೊಳ್ಳುತ್ತಾರೆ ಎನ್ನುವುದು ವಿಶ್ವ ವ್ಯಾಪಿ ಜಾಲವಾಗಿದೆ.

ಬರ್ನರ್ಸ್ ಲೀ, ಜಿನಿವಾದಲ್ಲಿನ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ವಿಶ್ವ ವ್ಯಾಪಿ ಜಾಲದ ಪರಿಕಲ್ಪನೆ ಹೊಳೆದಿತ್ತು. ಬೇರೆ, ಬೇರೆ ಕಂಪ್ಯೂಟರ್ ಬಳಸಿ ಪರಸ್ಪರ ಮಾಹಿತಿ ಹಂಚಿಕೊಳ್ಳುವ ಕ್ರಾಂತಿಕಾರಿ ವಿಧಾನಕ್ಕೆ ಅವರು ಆರಂಭದಲ್ಲಿ ಶ್ರೀಕಾರ ಹಾಕಿದ್ದರು.
1989ರಲ್ಲಿಯೇ ಅಂತರ್ಜಾಲ ಅಸ್ತಿತ್ವಕ್ಕೆ ಬಂದಾಗಿತ್ತು. ಇ-–ಮೇಲ್ ಕಳಿಸುವುದು ಬಳಕೆಯಲ್ಲಿತ್ತು. ಆದರೆ, ಅಂತರ್ಜಾಲ (websites) ತಾಣಗಳು ಇದ್ದಿರಲಿಲ್ಲ.

ಈ ಪರಿಕಲ್ಪನೆಯ ಪ್ರಸ್ತಾವನೆಯನ್ನು ಬರ್ನರ್ಸ್ ಲೀ ಅವರು ಮೊದಲ ಬಾರಿಗೆ 1989ರಲ್ಲಿ ಯೂರೋಪ್ನ ಅಣ್ವಸ್ತ್ರ ಸಂಶೋಧನಾ ಸಂಘಟನೆಯ (European Organisation for Nuclear Research–CRRN) ಮುಂದಿಟ್ಟಿದ್ದರು. ದತ್ತಾಂಶಗಳ ಜಾಡು ಕಂಡು ಹಿಡಿಯುವ ಮಾಹಿತಿ ವ್ಯವಸ್ಥೆಗೆ ಸಂಪರ್ಕ ಕಲ್ಪಿಸುವ ಸಾಧನ ರೂಪದಲ್ಲಿ ಈ ಸೌಲಭ್ಯ ಪರಿಚಯಿಸಿದ್ದರು. ಕೇಂದ್ರೀಕೃತ ವ್ಯವಸ್ಥೆ ಮತ್ತು ದೂರದಿಂದಲೇ ಜಾಲ ಸಂಪರ್ಕಿಸಬಹುದಾದ ಸೌಲಭ್ಯ ಇದರಲ್ಲಿತ್ತು. ಆನಂತರ ತಂತ್ರಜ್ಞಾನದ ಭಾಷೆ ಮತ್ತು ಇತರ ಶಿಷ್ಟಾಚಾರಗಳನ್ನು ಅಭಿವೃದ್ಧಿಪಡಿಸಲಾಯಿತು.

ವ್ಯಕ್ತಿಗಳು ಮತ್ತು ಸಂಘಟನೆಗಳು ಈ ಸೌಲಭ್ಯ ಬಳಸಿಕೊಳ್ಳಲು ಅಣ್ವಸ್ತ್ರ ಸಂಶೋಧನಾ ಸಂಸ್ಥೆಯು 1991ರಲ್ಲಿ ಅನುಮತಿ ನೀಡಿದ ನಂತರ ಮತ್ತು 1993ರಲ್ಲಿ ಗೌರವಧನ ರದ್ದುಪಡಿಸಿದ ನಂತರ ಜನಸಾಮಾನ್ಯರ ಮಾಧ್ಯಮವಾಗಿ ಇದು ರೂಪುಗೊಂಡು ಅಲ್ಪಾವಧಿಯಲ್ಲಿ ವ್ಯಾಪಕ ಜನಪ್ರಿಯತೆ ಪಡೆದುಕೊಂಡಿತು.

ಅಂತರ್ಜಾಲ ತಾಣ
1993ರಲ್ಲಿ 130ರಷ್ಟಿದ್ದ ಅಂತರ್ಜಾಲ ತಾಣಗಳ ಸಂಖ್ಯೆ ಈಗ 60 ಕೋಟಿಗಿಂತಲೂ ಹೆಚ್ಚಿಗೆ ಇವೆ. ಸದ್ಯಕ್ಕೆ ವಿಶ್ವದಾದ್ಯಂತ ವಿಶ್ವ ವ್ಯಾಪಿ ಜಾಲವನ್ನು ಕೋಟ್ಯಂತರ ಜನರು ಬಳಸಿಕೊಳ್ಳುತ್ತಿದ್ದಾರೆ.

ಲೀ ಆಶಯ
ವಿಶ್ವದಲ್ಲಿನ ಪ್ರತಿಯೊಬ್ಬರಿಗೂ ಇದು ಕೈಗೆಟುಕಬೇಕು ಎನ್ನುವುದು ಬರ್ನರ್ಸ್ ಲೀ ಅವರ ಆಶಯವಾಗಿದೆ. ಅಂತರ್ಜಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬಳಕೆದಾರರ ಹಕ್ಕುಗಳ ರಕ್ಷಣೆ ಆಗಬೇಕು ಎನ್ನುವುದು ಅವರ ಕಾಳಜಿಯಾಗಿದೆ. ಮುಂದಿನ ದಿನಗಳಲ್ಲಿ ವಿಶ್ವ ವ್ಯಾಪಿ ಜಾಲವನ್ನು ಮುಕ್ತ, ಖಾಸಗಿತನದ ರಕ್ಷಣೆ ಮತ್ತು ಸೆನ್ಸಾರ್ ರಹಿತ ತತ್ವ ಆಧರಿಸಿ ಅಭಿವೃದ್ಧಿಪಡಿಸಬೇಕು ಎನ್ನುವುದು ಅವರ ಕನಸಾಗಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ
ವಿಶ್ವವ್ಯಾಪಿ ಜಾಲದಲ್ಲಿ ಖಾಸಗಿತನದ ರಕ್ಷಣೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಈಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಗುತ್ತಿಗೆದಾರ ಎಡ್ವರ್ಡ್ ಸ್ನೊಡೆನ್ ಅವರು ಅಮೆರಿಕ ಸರ್ಕಾರದ ಅಸಂಖ್ಯ ರಹಸ್ಯ ದಾಖಲೆಗಳನ್ನು ಬಹಿರಂಗಗೊಳಿಸಿದ ನಂತರ ವಿಶ್ವ ವ್ಯಾಪಿ ಜಾಲ, ಅಂತರ್ಜಾಲ, ಮೊಬೈಲ್ ಮಾಹಿತಿ ಮೇಲೆ ನಿಗಾ ಇರಿಸುವ ಸರ್ಕಾರಗಳ ಧೋರಣೆಗಳು ಟೀಕೆಗೆ ಒಳಗಾಗಿವೆ.

ವಿಶಿಷ್ಟ ತಂತ್ರಜ್ಞಾನ
ಜನರ ಜೀವನ ಶೈಲಿಯನ್ನೇ ಅತ್ಯಲ್ಪ ಅವಧಿಯಲ್ಲಿ ಅತ್ಯಂತ ತ್ವರಿತವಾಗಿ ಪಸರಿಸಿದ ತಂತ್ರಜ್ಞಾನ ಇನ್ನೊಂದು ಇಲ್ಲ. ‘ಡಿಜಿಟಲ್ ಜಾಲ’ ಇರದ ವಿಶ್ವ ಕಲ್ಪಿಸಿಕೊಳ್ಳಲೂ ಈಗ ಅಸಾಧ್ಯ.

ಮಾಹಿತಿ ಯುಗದಲ್ಲಿ ಇದು ಸಂವಹನವನ್ನು ಅಗ್ಗಗೊಳಿಸಿದ್ದು, ತಕ್ಷಣಕ್ಕೆ ಮಾಹಿತಿ ರವಾನೆ ಸಾಧ್ಯಗೊಳಿಸಿದೆ. ಇದು ಹೊಸ ಹವ್ಯಾಸ, ವ್ಯಸನ ಮತ್ತು ಸಾಮಾಜಿಕ ಮಾಧ್ಯಮದಂತಹ ವೇದಿಕೆಗಳಿಗೂ ಅವಕಾಶ ಮಾಡಿಕೊಟ್ಟಿದೆ.

ಭವಿಷ್ಯ
ವ್ಯಕ್ತಿ, ಸಂಘಟನೆ ಮತ್ತು ದೇಶಗಳ ಮಧ್ಯೆ ಮಾಹಿತಿ ಹರಿದಾಡುವಿಕೆಗೆ ನೀಡಿದ ಕೊಡುಗೆಯನ್ನು ಈ ಬೆಳ್ಳಿಹಬ್ಬದ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವುದರ ಜತೆಗೆ, ಅದರ ಬಳಕೆ ಬಗ್ಗೆಯೂ ಹೆಚ್ಚು ಜಾಗರೂಕತೆ ವಹಿಸಬೇಕಾಗಿದೆ. ಮುಂಬರುವ ದಿನಗಳಲ್ಲಿ ವಿಶ್ವವ್ಯಾಪಿ ಜಾಲವು ಇನ್ನೂ ಸಾಕಷ್ಟು ಬಗೆಯಲ್ಲಿ ಬದಲಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ವಿಶ್ವವ್ಯಾಪಿ ಜಾಲವು ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಿರುವ ಮತ್ತು ಅದರ ತಟಸ್ಥ ನಿಲುವಿನ ಬಗ್ಗೆ ಎಚ್ಚರಿಕೆಯಿಂದ ಇರುವ ಅಗತ್ಯ ಇದೆ ಎಂದೂ ಲೀ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.