ಗುರುವಾರ , ಫೆಬ್ರವರಿ 25, 2021
25 °C

‘ಶಿಕ್ಷಕರಲ್ಲಿ ಕಲಿಕಾ ಮನೋಭಾವ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಶಿಕ್ಷಕರಲ್ಲಿ ಕಲಿಕಾ ಮನೋಭಾವ ಅಗತ್ಯ’

ವಿರಾಜಪೇಟೆ: ಗುರು– ಶಿಷ್ಯರ ನಡುವೆ ಆತ್ಮೀಯ ಸಂಬಂಧ ಬೆಳೆಯುವುದರಿಂದ ಶಿಕ್ಷಣ ಯಶಸ್ವಿಯಾಗುತ್ತದೆ ಎಂದು ವಿರಾಜಪೇಟೆಯ ಎಸ್‌ಬಿಐ ಹಿರಿಯ ವ್ಯವಸ್ಥಾಪಕ ಸಿ. ನಾರಾಯಣ ಹೇಳಿದರು.ಪಟ್ಟಣದ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ ಬಿಇಡಿ ವಿದ್ಯಾರ್ಥಿಗಳಿಗೆ ಸಮೀಪದ ಅರಮೇರಿಯ ಕಳಂಚೇರಿ ಮಠದ ಶಾಲಾ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ‘ಪೌರತ್ವ ತರಬೇತಿ ಶಿಬಿರ’ದ ಶಿಬಿರಾಗ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಕ್ಕಳಿಗೆ ಮನೆಯಲ್ಲಿ ತಾಯಿಯೇ ಮೊದಲ ಗುರುವಾದರೆ, ಶಿಕ್ಷಕ ಜೀವನದ ಗುರುವಾಗುತ್ತಾನೆ. ಆದರ್ಶ ಶಿಕ್ಷಕ ತನ್ನ ವಿದ್ಯಾರ್ಥಿಗಳಲ್ಲಿ ನೈತಿಕತೆ, ಸರ್ವಧರ್ಮ ಸಮಾನತೆಯಂತಹ ಉನ್ನತ ಗುಣಗಳನ್ನು ಬೆಳೆಸಬಲ್ಲ. ಸಮಾಜವನ್ನು ಶ್ರೇಷ್ಠತೆಯೆಡೆಗೆ ಕೊಂಡೊಯ್ಯಬಲ್ಲ ಶಕ್ತಿ ಶಿಕ್ಷಕರ ಕೈಯಲ್ಲಿದೆ ಎಂದು ಅವರು ಹೇಳಿದರು.ಸರ್ವೋದಯ ವಿದ್ಯಾಸಂಸ್ಥೆಯ ಸದಸ್ಯ ಕೆ.ಸಿ. ಶಬರೀಶ್‌ ಮಾತನಾಡಿ, ಮಕ್ಕಳ ಭವಿಷ್ಯವನ್ನು ರೂಪಿಸಬಲ್ಲ ಶಿಕ್ಷಕರು ಸದಾ ಕಲಿಕಾ ಮನೋಭಾವ ರೂಢಿಸಿಕೊಳ್ಳುವುದರೊಂದಿಗೆ, ಸ್ವಯಂ ನಿಯಂತ್ರಣ ಹೊಂದಬೇಕು. ಶಿಕ್ಷಕರು ಪರಸ್ಪರ ಸದ್ಭಾವನೆ ಹಾಗೂ ರಾಷ್ಟ್ರೀಯ ಐಕ್ಯತೆಯ ಗುಣಗಳನ್ನು ಮೈಗೂಡಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನು ಸೃಷ್ಟಿಸಬಹುದು ಎಂದರು.ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷೆ ಸಿ.ಜೆ. ಸೂರ್ಯಕುಮಾರಿ, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷೆ ಬಿ.ವಿ. ಶಶಿಕಲಾ, ಸಂಸ್ಥೆಯ ವಾಸಂತಿ ಶರತ್ಚಂದ್ರ, ಪ್ರಾಂಶುಪಾಲೆ ಡಾ.ಸಹೀದಾ ಶಹನವಾಜ್‌ ಹಾಗೂ ಶಿಬಿರಾಧಿಕಾರಿಗಳಾದ ಡಾ.ಎಂ. ವಾಣಿ ಇದ್ದರು. ಶಿಬಿರಾಗ್ನಿ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಗಳು ನಡೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.