ಮಂಗಳವಾರ, ಜನವರಿ 28, 2020
20 °C

‘ಶುದ್ಧಜಲ ವಿತರಣೆಗೆ ಗುಣಮಟ್ಟದ ಪೈಪ್‌ ಬಳಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು: ರಾಜ್ಯದಲ್ಲಿ ಸರ್ಕಾರ ಜಾರಿ­ಗೊಳಿಸುವ ಶುದ್ಧಜಲ ವಿತರಿಸುವ ಯೋಜನೆಗಳಲ್ಲಿ ಗುಣಮಟ್ಟದ ಪೈಪುಗಳನ್ನು ಮಾತ್ರ ಅಳವಡಿಸ­ಲಾಗುವುದು ಎಂದು ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಪಿ.ಜೆ.ಜೋಸೆಫ್ ಹೇಳಿದರು.ಮಂಗಳವಾರ ಈಸ್ಟ್ ಎಳೇರಿ ಗ್ರಾಮ ಪಂಚಾ­ಯಿತಿಯಲ್ಲಿ ಕೇರಳ ಜಲಸಂಪನ್ಮೂಲ ಇಲಾಖೆ ಜಾರಿ­ಗೊಳಿಸುವ ಶುದ್ಧಜಲ ವಿತರಣಾ ಯೋಜನೆಯ ಕಾಮ­ಗಾರಿ ಉದ್ಘಾಟಿಸಿ ಅವರು ಮಾತನಾಡಿದರು.ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಕುಡಿ­ಯುವ ನೀರು ಯೋಜನೆಯಲ್ಲಿ ಒಳಪಡಿಸಿ ಈಸ್ಟ್ ಎಳೇರಿ ಕುಡಿಯುವ ನೀರು ಯೋಜನೆ ಜಾರಿ­ಗೊಳಿ­ಸಲಾತ್ತದೆ. ಈಸ್ಟ್ ಎಳೇರಿ ಕಾರ್ಯ­ಗೊಂಡು ನದಿ­ಯಲ್ಲಿ ಎಂಟು ಕೋಟಿ ರೂಪಾಯಿ ವೆಚ್ಚ­ದಲ್ಲಿ ಅಣೆ­ಕಟ್ಟು ನಿರ್ಮಿಸಲು ಅನುಮತಿ ನೀಡಲಾಗಿದೆ.ಶೀಘ್ರ­ದಲ್ಲಿಯೇ ಕಾಮಗಾರಿ ಆರಂಭ­ವಾಗುವುದು ಎಂದರು.  ಜಿಲ್ಲೆಯ ಕುಡಿಯುವ ನೀರಿನ ಯೋಜನೆ­ಗಳನ್ನು ಗುಣಮಟ್ಟದ ಪೈಪ್‌ಗಳನ್ನು ಬಳಸಿ ಶೀಘ್ರ­ದಲ್ಲಿ ಪೂರ್ತಿಗೊಳಿಸಲಾಗುವುದು. ಈಸ್ಟ್ ಎಳೇರಿ ಯೋಜನೆ 2015 ಮಾರ್ಚ್‌ನಲ್ಲಿ ಪೂರ್ತಿ­ಯಾಗ­ಲಿದೆ. ರೂ.12.12ಕೋಟಿ ವೆಚ್ಚದಲ್ಲಿ ಆರಂಭ­ಗೊಳ್ಳುವ ಈ ಯೋಜನೆ 21,000ಮಂದಿಗೆ ಪ್ರಯೋ­ಜನ ವಾಗಲಿದೆ ಎಂದು ಸಚಿವರು ತಿಳಿಸಿದರು.ತೃಕ್ಕರಿಪುರ ಶಾಸಕ ಕೆ.ಕುಂಞಿರಾಮನ್ ಅಧ್ಯಕ್ಷತೆ ವಹಿಸಿದ್ದರು.  ಕೇರಳ ಜಲ ಪ್ರಾಧಿಕಾರದ  ಮುಖ್ಯ ಎಂಜಿನಿಯರ್ ಪಿ.ಡಿ.ರಾಜು ಯೋಜನೆಯ ಮಾಹಿತಿ ನೀಡಿದರು. ಈಸ್ಟ್ ಎಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೇಮ್ಸ್, ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ವಿ.ಬಿ.ಟೋಮಿ ಪಚ್ಚೇರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)