ನವದೆಹಲಿ(ಪಿಟಿಐ): ಎರಡಂಕಿ ತಲುಪಿರುವ ಹಣದುಬ್ಬರ ದರ ಮತ್ತು ಗರಿಷ್ಠ ಮಟ್ಟದಲ್ಲಿರುವ ಚಾಲ್ತಿ ಖಾತೆ ಕೊರತೆಯೇ(ಸಿಎಡಿ) ದೇಶದ ಹಣಕಾಸು ಮಾರುಕಟ್ಟೆಯಲ್ಲಿನ ಇತ್ತೀಚಿನ ಅಸ್ಥಿರ ತೆಗೆ ಪ್ರಮುಖ ಕಾರಣ ಎಂದು ‘ಆರ್ಬಿಐ’ ಗವರ್ನರ್ ರಘುರಾಂ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

‘2002ರಲ್ಲಿ ಶೇ 8ರಷ್ಟಿದ್ದ ‘ಜಿಡಿಪಿ’ 2012ರಲ್ಲಿ ಶೇ 5ಕ್ಕೆ ಕುಸಿದಿದೆ. ಇದಕ್ಕೆ ದೇಶೀಯ ಸಂಗತಿಗಳು ಮತ್ತು ಸಾಂಸ್ಥಿಕ ಹಣಕಾಸು ಸಂಸ್ಥೆಗಳ ವೈಫಲ್ಯ ಪ್ರಮುಖ ಕಾರಣ. 2008ರ ಜಾಗತಿಕ ಆರ್ಥಿಕ ಹಿಂಜರಿತದಿಂದ ಹೊರಬರಲು ಸರ್ಕಾರ ಒಂದರ ಬೆನ್ನಿಗೊಂದರಂತೆ ಉತ್ತೇಜನ ಕೊಡುಗೆಗಳನ್ನು ಪ್ರಕಟಿಸಿತು. ಇದರ ಪರಿ ಣಾಮವಾಗಿ ‘ಸಿಎಡಿ’ ಮತ್ತು ಹಣದು ಬ್ಬರ ಹೆಚ್ಚಿತು. ದೇಶದ ಆರ್ಥಿಕ ಆರೋ ಗ್ಯದ ದೃಷ್ಟಿಯಿಂದ ಇವೆರಡನ್ನು ನಿಯಂತ್ರಿ ಸುವುದು ಸದ್ಯದ ಅಗತ್ಯ ಎಂದು ಅವರು ಇಲ್ಲಿ ಸಿಟಿ ಬ್ಯಾಂಕ್ ಆಯೋಜಿಸಿದ್ದ ಹೂಡಿಕೆದಾರರ ಸಭೆಯಲ್ಲಿ ಹೇಳಿದರು.

2008ರ ಜಾಗತಿಕ ಆರ್ಥಿಕ ಹಿಂಜರಿತದಿಂದ ಉದ್ಯಮ ವಲಯ ಚೇತರಿಸಿಕೊಳ್ಳಲು ಆಗ ಹಣಕಾಸು ಸಚಿವರಾಗಿದ್ದ ಪ್ರಣವ್ ಮುಖರ್ಜಿ ಮೂರು ಉತ್ತೇಜನ ಕೊಡುಗೆಗಳನ್ನು ಪ್ರಕಟಿಸಿದ್ದರು. ಇವೆಲ್ಲದರ ಪರಿಣಾಮವಾಗಿ 2010 ರಲ್ಲಿ ‘ಜಿಡಿಪಿ’ಯ ಶೇ 2.8ರಷ್ಟಿದ್ದ ‘ಸಿಎಡಿ’ 2013ರ ವೇಳೆಗೆ ಶೇ 4.8ಕ್ಕೆ ಏರಿಕೆ ಕಂಡಿತು. ಆದರೆ, ಆರ್ಬಿಐ ಮತ್ತು ಕೇಂದ್ರ ಸರ್ಕಾರ ಚಿನ್ನದ ಆಮದು ನಿಯಂತ್ರಿಸಲು ತೆಗೆದುಕೊಂಡ ಕ್ರಮಗ ಳಿಂದ ಪ್ರಸಕ್ತ ಹಣಕಾಸು ವರ್ಷದ ಎರ ಡನೇ ತ್ರೈಮಾಸಿಕದಲ್ಲಿ ಇದು ಶೇ 3.1ಕ್ಕೆ ತಗ್ಗಿದೆ. ಹಣದುಬ್ಬರ ಸೂಚ್ಯಂಕ ಆಧರಿ ಸಿದ ಬಾಂಡ್ಗಳು ಚಿನ್ನದ ಬೇಡಿಕೆಯನ್ನು ಇನ್ನಷ್ಟು ತಗ್ಗಿಸಲಿವೆ ಎಂದರು.

ಹೆಚ್ಚುವರಿ ಬಂಡವಾಳ
ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರ ನಿಯಂತ್ರಿಸಲು ಅನುಸರಿಸಿಕೊಂಡು ಬರುತ್ತಿರುವ ಬಿಗಿ ಹಣಕಾಸು ನೀತಿಯಲ್ಲಿ ಮತ್ತೆ ತುಸು ಸಡಿಲಿಕೆ ತೋರಿದೆ. ಡಿ. 13ರಂದು ಮಾರುಕಟ್ಟೆಗೆ ಹೆಚ್ಚುವರಿಯಾಗಿ ರೂ10 ಸಾವಿರ ಕೋಟಿ ಬಂಡವಾಳ ಬಿಡುಗಡೆ ಮಾಡುವುದಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.