ಯಾದಗಿರಿ: ರಾಜ್ಯ ಸರ್ಕಾರದ ವಸತಿ ನಿಲಯ, ವಸತಿ ಶಾಲೆಗಳಲ್ಲಿ ಸರ್ಕಾರದಿಂದ ಮಂಜೂರಾಗಿಯೂ ಖಾಲಿಯಿರುವ ಸಿ ಮತ್ತು ಡಿ ದರ್ಜೆಯ ವಿವಿಧ ಹುದ್ದೆಗಳಲ್ಲಿ ಕಳೆದ 15–20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಾವಿರಾರು ಕಾರ್ಮಿಕರಿಗೆ ಕನಿಷ್ಠ ವೇತನವನ್ನು ₨ 15ಸಾವಿರಕ್ಕೆ ನಿಗದಿಪಡಿಸಲು ಆಗ್ರಹಿಸಿ ಬಲಿಷ್ಠ ಹೋರಾಟ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಅಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಸಲಹೆ ನೀಡಿದ್ದಾರೆ.

ಸಂಘದ ಜಿಲ್ಲಾ ಸಮಿತಿಯಿಂದ ಭಾನುವಾರ ನಗರದ ಚರ್ಚ್ ಹಾಲ್ನಲ್ಲಿ ಆಯೋಜಿಸಿದ್ದ ವಸತಿ ನಿಲಯ ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

ವಸತಿ ಶಿಕ್ಷಣ ಸಂಸ್ಥೆಗಳ ಅಡುಗೆ ಕಾರ್ಮಿಕರಲ್ಲದೇ, ಆಸ್ಪತ್ರೆಗಳಲ್ಲಿನ ಡಿ ದರ್ಜೆ ಕಾರ್ಮಿಕರು, ನೀರಾವರಿ ಇಲಾಖೆಯ ಪುನರ್ವಸತಿ ನೌಕರರು, ಸರ್ಕಾರದ ಕಾಯಂ ನೌಕರರು ಮಾಡುವ ಕೆಲಸಗಳನ್ನೇ ಮಾಡುತ್ತಿದ್ದಾರೆ. ಆದರೂ ಈ ನೌಕರರಿಗೆ ಕಡಿಮೆ ವೇತನ ನೀಡಲಾಗುತ್ತಿದೆ. ಕಾರ್ಮಿಕರಿಗೆ ನೇಮಕಾತಿ ಪತ್ರ, ಹಾಜರಾತಿ ಪುಸ್ತಕಗಳು ಹೆಸರಿಗೂ ಕಾಣುವುದಿಲ್ಲ. ಇ.ಪಿ.ಎಫ್ ಹಾಗೂ ಇಎಸ್ಐ ಸೌಲಭ್ಯಗಳನ್ನು ನಾಮಕಾವಸ್ತೆ ಮಾತ್ರ ಮುಂದುವರಿಸಲಾಗುತ್ತಿದೆ.

ಇ.ಪಿ.ಎಫ್ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಲಾಗಿದೆ. ದೇಣಿಗೆ ಆಧಾರಿತ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ನೌಕರರ ಹಣವನ್ನು ದೋಚಲಾಗುತ್ತಿದೆ. ಮೇಲಾಗಿ ಷೇರು ಮಾರುಕಟ್ಟೆಯಲ್ಲಿ ಪಿಂಚಣಿ ಹಣವನ್ನು ಹೂಡಿ, ಅದರಿಂದ ಬಂದ ಲಾಭದಿಂದ ಪಿಂಚಣಿ ಕೊಡುವುದಾಗಿ ಹೇಳಲಾಗುತ್ತಿದೆ. ಈ ಜೂಜಾಟದ ಜಂಜಾಟದಲ್ಲಿ ಕಾರ್ಮಿಕರ ಹಣಕ್ಕೆ ಭದ್ರತೆಯೂ ಇಲ್ಲ. ಇದರಿಂದ ನಿವೃತ್ತಿ ವೇತನ ಎಂಬುದು ಕನ್ನಡಿಯೊಳಗಿನ ಗಂಟಾಗುತ್ತದೆ ಎಂದು ದೂರಿದರು.

ದೇಶದ ದುಡಿಯುವ ಜನತೆಯ ಶೇ 94 ರಷ್ಟಿರುವ ಅಸಂಘಟಿತ ಕಾರ್ಮಿಕರ ಬದುಕು ಶೋಚನೀಯವಾಗಿದೆ. ಈ ವಿಭಾಗಕ್ಕೆ ಸೇರುವ ಕೃಷಿ ಕಾರ್ಮಿಕಕರು, ಕಟ್ಟಡ ಕಾರ್ಮಿಕರು, ಮನೆ ಕೆಲಸಗಾರರು ವರ್ಷವಿಡೀ ಕೆಲಸವಿಲ್ಲದೇ, ಅಲ್ಪ ವೇತನದಲ್ಲಿ, ಕಾರ್ಮಿಕ ಕಾಯ್ದೆ ಅನ್ವಯ ದೊರಕಬಹುದಾದ ಸೌಲಭ್ಯಗಳೂ ಇಲ್ಲದೇ ಬದುಕುತ್ತಿದ್ದಾರೆ. ಇವರ ಕೆಲಸದ ಅನಿಶ್ಚತತೆ, ಅಲ್ಪವೇತನಗಳಿಂದಾಗಿ, ಇವರು ಹಾಗೂ ಇವರ ಕುಟುಂಬವು ಶಿಕ್ಷಣ, ಉತ್ತಮ ಪರಿಸರ, ಆರೋಗ್ಯ ಸವಲತ್ತುಗಳಿಲ್ಲದೇ ಬದುಕಬೇಕಾಗಿದೆ ಎಂದರು.

ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೌಕರರ ಸ್ಥಾನಮಾನವನ್ನೇ ನಿರಾಕರಿಸಲಾಗಿದೆ. ದೇಶದಾದ್ಯಂತ ಲಕ್ಷಾಂತರ ಮಹಿಳೆಯರನ್ನು ಬಿಟ್ಟಿಯಾಗಿ ನಿಗದಿತ ಕನಿಷ್ಠ ವೇತನವೂ ಇಲ್ಲದೇ ಗೌರವ ಧನ, ಪ್ರೋತ್ಸಾಹ ಧನ ಇತ್ಯಾದಿಗಳ ಹೆಸರಿನಲ್ಲಿ ಅನಾಗರೀಕವಾಗಿ ದುಡಿಸಿಕೊಳ್ಳಲಾಗುತ್ತಿದೆ. ಜೀವನಾವಶ್ಯಕ ಪದಾರ್ಥಗಳ ಬೆಲೆಗಳು ಗಗನಕ್ಕೇರಿರುವುದರಿಂದ ಈ ಕಾರ್ಮಿಕರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ತಿಳಿಸಿದರು.

ದೇಶದ ಕಾರ್ಪೋರೇಟ್ ಮನೆತನಗಳಿಗೆ ಸರ್ಕಾರ ₨ 2.18 ಲಕ್ಷ ಕೋಟಿ ಪರಿಹಾರದ ಉಡುಗೊರೆಯನ್ನು ನೀಡಿದೆ. ಆದರೆ ಅಸಂಘಟಿತ ವಲಯಕ್ಕೆ ನೀಡಿರುವ ಮೊತ್ತ ಕೇವಲ ₨ 1 ಸಾವಿರ ಕೋಟಿ ಮಾತ್ರ. ಹೀಗಾಗಿ ಬಂಡವಾಳಿಗರ ಲಾಭ ವೃದ್ಧಿಯಾಗುತ್ತಿದೆ. ವಿಶ್ವದ ಅತಿ ಶ್ರೀಮಂತ ಮೊದಲ ಹತ್ತು ಜನರಲ್ಲಿ ನಾಲ್ವರು ಭಾರತದ ಉದ್ಯಮಿಗಳಿದ್ದಾರೆ ಎನ್ನುವುದೇ ದೇಶದ ಕಾರ್ಮಿಕರನ್ನು ಘೋರ ಶೋಷಣೆಗೆ ಗುರಿಪಡಿಸಲಾಗಿದೆ ಎನ್ನುವುದನ್ನು ಎತ್ತಿತೋರಿಸುತ್ತಿದೆ ಎಂದು ಕಿಡಿ ಕಾರಿದರು.

ಆಲ್ ಇಂಡಿಯಾ ಯುಟಿಯುಸಿ ನೇತೃತ್ವದಲ್ಲಿ ಇತರ ವಲಯಗಳ ಕಾರ್ಮಿಕರಂತೆ ವಸತಿ ನಿಲಯ ಕಾರ್ಮಿಕರು ಹತ್ತಾರು ವರ್ಷಗಳಿಂದ ಹಲವಾರು ಸ್ಮರಣೀಯ ಹೋರಾಟಗಳನ್ನು ಬೆಳೆಸಿ ಜಯಶಾಲಿಗಳಾಗಿದ್ದಾರೆ ಎಂದು ಹೇಳಿದರು.

ಆಲ್ ಇಂಡಿಯಾ ಯುಟಿಯುಸಿ ಯ ಜಿಲ್ಲಾ ಸಮಿತಿಯ ಸದಸ್ಯೆ ಡಿ.ಉಮಾದೇವಿ ಮಾತನಾಡಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಪ್ಪ ಕಂದಕೂರ ಅಧ್ಯಕ್ಷತೆ ವಹಿಸಿದ್ದರು. ತಾಜುದ್ದೀನ್ ನಿರೂಪಿಸಿದರು. ಹಣಮಂತ, ಗೋವಿಂದಗೌಡ, ವಿಜಯಕುಮಾರ, ಮರಳಮ್ಮ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.