ಭಾನುವಾರ, ಏಪ್ರಿಲ್ 18, 2021
33 °C

1ಲಕ್ಷ ಮೌಲ್ಯದ ಅಕ್ರಮ ಮದ್ಯ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಕಳೆದ ಎರಡು ವರ್ಷಗಳಿಂದ ಇದುವರೆಗಿನ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಮದ್ಯ, ಮದ್ಯಸಾರ ಹಾಗೂ ಸೇಂದಿಯನ್ನು ಅಬಕಾರಿ ಅಧಿಕಾರಿಗಳು ಬುಧವಾರ ನಾಶಪಡಿಸಿದರು.  ಹೆಚ್ಚುವರಿ ತಹಶೀಲ್ದಾರ್ ಪದ್ಮಾ ಅವರ ಸಮ್ಮುಖದಲ್ಲಿ ಅಕ್ರಮ ಮದ್ಯವನ್ನು ಪಟ್ಟಣದ ಸ್ಮಾರಕ ಸ್ತಂಭದ ಬಳಿ ನಾಶಪಡಿಸಲಾಯಿತು. 223.600 ಲೀಟರ್ ಸ್ವದೇಶಿ ಮದ್ಯ, 696.400 ಲೀ. ಮದ್ಯಸಾರ, 139.30 ಲೀ. ಬಿಯರ್, 65.500 ಲೀ. ಬ್ಲೆಂಡೆಡ್ ಮದ್ಯ, 142.500 ಲೀ. ಸೇಂದಿ ಸೇರಿದಂತೆ ವಿವಿಧ ನಮೂನೆಯ ಮದ್ಯವನ್ನು ಅಬಕಾರಿ ಸಿಬ್ಬಂದಿ ನಾಶಪಡಿಸಿದರು. ರಾಜಾ ವಿಸ್ಕಿ, ಆಫೀಸರ್ಸ್‌, ಸೂಪರ್ ಜಾಕ್, ನಾಕೌಟ್, ಯುಬಿ, ಕಿಂಗ್‌ಫಿಷರ್ ಇತರ ಮದ್ಯಗಳನ್ನು ಅಬಕಾರಿ ಇಲಾಖೆ ಉಪ ಅಧೀಕ್ಷಕ ಶಾಮಾ ಜೋಯಿಸ್, ಇನ್ಸ್‌ಪೆಕ್ಟರ್ ಎಂ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮದ್ಯವನ್ನು ನಾಶಪಡಿಸಲಾಯಿತು.ಜೈಲು ಶಿಕ್ಷೆ: ಅಕ್ರಮ ಮದ್ಯ ಸಂಗ್ರಹಿಸಿದ್ದ ಆರೋಪಿಗೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ ರೂ.5 ಸಾವಿರ ದಂಡ ವಿಧಿಸಿದೆ.ತಾಲ್ಲೂಕಿನ ಮಹದೇವಪುರದ ಸಿದ್ದೇಗೌಡ ಅವರ ಮಗ ಎಂ.ಎಸ್. ಸಂದೇಶ್ ಅಲಿಯಾಸ್ ರಾಜು ಎಂಬಾತ ಶಿಕ್ಷೆಗೆ ಒಳಗಾದ ಆರೋಪಿ. ಏ.29, 2006ರಲ್ಲಿ ಸಂದೇಶ್ ಮನೆಯ ಮೇಲೆ ದಾಳಿ ನಡೆಸಿದ್ದ ಅಬಕಾರಿ ವಿಚಕ್ಷಣಾ ದಳದ ಉಪನಿರೀಕ್ಷಕ ಎಸ್.ರಂಗಸ್ವಾಮಿ ಅವರು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 14.220 ಲೀಟರ್ ನಕಲಿ ಮದ್ಯ ಹಾಗೂ 7.900 ಲೀಟರ್ ಬಿಯರ್ ವಶಪಡಿಸಿಕೊಂಡಿದ್ದರು. ಈ ಕುರಿತು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎ.ಜಿ.ಶಿಲ್ಪಾ ಅವರು ಜು.13ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.