ರಾಯಚೂರು: 16ನೇ ಲೋಕಸಭೆ ರಚನೆಗೆ ಲೋಕಸಭಾ ಚುನಾವಣೆ ಈಗ ನಡೆಯುತ್ತಿದೆ. ರಾಯಚೂರು ಲೋಕಸಭಾ ಕ್ಷೇತ್ರವು 7 ತಾಲ್ಲೂಕಿನ 8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ.

ರಾಯಚೂರು ಜಿಲ್ಲೆಯ ರಾಯಚೂರು ನಗರ, ರಾಯಚೂರು ಗ್ರಾಮೀಣ, ಮಾನ್ವಿ, ದೇವದುರ್ಗ, ಲಿಂಗಸುಗೂರು ಹಾಗೂ ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪುರ ಮತ್ತು ಸುರಪುರ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. 1957ರಿಂದ 2004ರವರೆಗೂ ರಾಯಚೂರು ಲೋಕಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿತ್ತು. 2009ರಿಂದ ಈ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ(ಎಸ್ಟಿ) ಮೀಸಲಾಗಿದೆ.

1957ರಿಂದ 2009ರವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ(1986ರ ಉಪಚುನಾವಣೆ ಸೇರಿದಂತೆ) ಒಟ್ಟು 12 ಬಾರಿ ಕಾಂಗ್ರೆಸ್ ಪಕ್ಷವು ಗೆದ್ದಿದೆ. 1967ರಲ್ಲಿ ಸ್ವತಂತ್ರ ಅಭ್ಯರ್ಥಿ ಆರ್.ವಿ ನಾಯಕ ಗೆಲುವು ಸಾಧಿಸಿದ್ದರು. ಬಳಿಕ 1996ರಲ್ಲಿ ಜನತಾದಳ ಅಭ್ಯರ್ಥಿ ರಾಜಾ ರಂಗಪ್ಪ ನಾಯಕ ಈ ಕ್ಷೇತ್ರದಲ್ಲಿ ಜನತಾದಳ ಖಾತೆ ತೆರೆದರು. ಬಳಿಕ ಮತ್ತೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿಸಿತ್ತು. 2009ರಲ್ಲಿ ಬಳ್ಳಾರಿ ಮೂಲದ ಬಿ. ಶ್ರೀರಾಮುಲು ಅವರ ಸಹೋದರ ಸಣ್ಣಫಕ್ಕೀರಪ್ಪ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಈ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದರು.

1957ರಿಂದ 2009ರವರೆಗಿನ ರಾಯಚೂರು ಲೋಕಸಭಾ ಚುನಾವಣೆ ಹಿನ್ನೋಟದ ಮುಖ್ಯಾಂಶ ಇಂತಿದೆ. ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಈವರೆಗೆ ನಡೆದ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಮತ್ತು ಸಮೀಪ ಸ್ಪರ್ಧಿಗಳು ಗಳಿಸಿದ ಮತಗಳ ವಿವರ ನೀಡಲಾಗಿದೆ.

*1957– ಜಿ.ಎಸ್ ಮೇಲುಕೋಟೆ (ಕಾಂಗ್ರೆಸ್), ಪಡೆದ ಮತಗಳು– 84,089, ಸಮೀಪ ಸ್ಪರ್ಧಿ– ವಿಶ್ವನಾಥರೆಡ್ಡಿ(ಪಕ್ಷೇತರ), ಪಡೆದ ಮತಗಳು– 66.069.

*1962– ಜಗನ್ನಾಥರಾವ ಚಂಡ್ರಕಿ(ಕಾಂಗ್ರೆಸ್), ಪಡೆದ ಮತಗಳು– 95,424, ಸಮೀಪ ಸ್ಪರ್ಧಿ– ವೆಂಕಟಪ್ಪ ನಾಯಕ ಕೆ(ಲೋಕ ಸೇವಕ ಸಂಘ), ಪಡೆದ ಮತಗಳು– 80,099.

*1967– ಆರ್.ವಿ ನಾಯಕ (ಪಕ್ಷೇತರ), ಪಡೆದ ಮತಗಳು– 1,17,272, ಸಮೀಪ ಸ್ಪರ್ಧಿ– ಜಿ.ಆರ್ ಚಂಡ್ರಕಿ (ಕಾಂಗ್ರೆಸ್), ಪಡೆದ ಮತಗಳು– 1,05,833.

*1971– ಪಂಪನಗೌಡ ಅತ್ನೂರು( ಕಾಂಗ್ರೆಸ್) ಪಡೆದ ಮತಗಳು– 1,57,858. ಸಮೀಪ ಸ್ಪರ್ಧಿ– ರಾಜಾ ವೆಂಕಟಪ್ಪ ನಾಯಕ ( ಸ್ವತಂತ್ರ), ಪಡೆದ ಮತಗಳು– 54, 005.

*1977– ರಾಜಶೇಖರ ಮಲ್ಲಪ್ಪ (ಕಾಂಗ್ರೆಸ್), ಪಡೆದ ಮತಗಳು– 2,12,232, ಸಮೀಪ ಸ್ಪರ್ಧಿ– ಎಂ ನಾಗಪ್ಪ ಬಸಪ್ಪ ( ಭಾರತೀಯ ಲೋಕ ದಳ), ಪಡೆದ ಮತಗಳು– 75,810.

*1980– ಬಿ.ವಿ ದೇಸಾಯಿ(ಕಾಂಗ್ರೆಸ್), ಪಡೆದ ಮತಗಳು– 1,75, 888, ಸಮೀಪ ಸ್ಪರ್ಧಿ– ರಾಜಾ ಪಿಡ್ಡ ನಾಯಕ ( ಭಾರಕಾ–ಯು), ಪಡೆದ ಮತಗಳು– 46,838.

*1984– ಬಿ.ವಿ ದೇಸಾಯಿ( ಕಾಂಗ್ರೆಸ್), ಪಡೆದ ಮತಗಳು– 2,12,244. ಸಮೀಪ ಸ್ಪರ್ಧಿ– ವಿಶ್ವನಾಥರೆಡ್ಡಿ(ಜನತಾ ಪಕ್ಷ), ಪಡೆದ ಮತಗಳು– 1,54,858.

*1986( ಬಿ.ವಿ ದೇಸಾಯಿ ಅವರ ನಿಧನದಿಂದ ಉಪಚುನಾವಣೆ ನಡೆಯಿತು)– ಎಂ.ವೈ ಘೋರ್ಪಡೆ( ಕಾಂಗ್ರೆಸ್), ಪಡೆದ ಮತಗಳು– 1,69,691. ಸಮೀಪ ಸ್ಪರ್ಧಿ– ರಾಜಾ ಅಮರಪ್ಪ ನಾಯಕ(ಜನತಾ ಪಕ್ಷ), ಪಡೆದ ಮತಗಳು– 1,64,012.

*1989– ರಾಜಾ ಅಂಬಣ್ಣ ನಾಯಕ(ಕಾಂಗ್ರೆಸ್), ಪಡೆದ ಮತಗಳು– 2,28,065, ಸಮೀಪ ಸ್ಪರ್ಧಿ– ನಜೀರ ಅಹಮ್ಮದ್ ಸಿದ್ದಿಕಿ(ಜನತಾ ದಳ), ಪಡೆದ ಮತಗಳು– 1,39,143.

*1991– ಎ ವೆಂಕಟೇಶ ನಾಯಕ(ಕಾಂಗ್ರೆಸ್), ಪಡೆದ ಮತಗಳು– 1,94,709, ಸಮೀಪ ಸ್ಪರ್ಧಿ– ನಜೀರ ಅಹಮ್ಮದ್ ಸಿದ್ದಿಕಿ(ಜನತಾ ದಳ), ಪಡೆದ ಮತಗಳು– 72,251.

*1996– ರಾಜಾ ರಂಗಪ್ಪ ನಾಯಕ(ಜನತಾ ದಳ), ಪಡೆದ ಮತಗಳು– 2,14,920, ಸಮೀಪ ಸ್ಪರ್ಧಿ– ಎ ವೆಂಕಟೇಶ ನಾಯಕ (ಕಾಂಗ್ರೆಸ್), ಪಡೆದ ಮತಗಳು– 1,78,515.

*1998– ವೆಂಕಟೇಶ ನಾಯಕ (ಕಾಂಗ್ರೆಸ್), ಪಡೆದ ಮತಗಳು– 2,64,187. ಸಮೀಪ ಸ್ಪರ್ಧಿ– ರಾಜಾ ರಂಗಪ್ಪ ನಾಯಕ( ಜನತಾ ದಳ), ಪಡೆದ ಮತಗಳು– 1,85,909.

*1999– ವೆಂಕಟೇಶ ನಾಯಕ (ಕಾಂಗ್ರೆಸ್), ಪಡೆದ ಮತಗಳು– 3,59,946, ಸಮೀಪ ಸ್ಪರ್ಧಿ– ಅಬ್ದುಲ್ ಸಮದ್ ಸಿದ್ದಿಕಿ(ಜೆಡಿಯು), ಪಡೆದ ಮತಗಳು– 1,87,740.

*2004– ವೆಂಕಟೇಶ ನಾಯಕ (ಕಾಂಗ್ರೆಸ್), ಪಡೆದ ಮತಗಳು– 2,89,424. ಸಮೀಪ ಸ್ಪರ್ಧಿ– ಮದನಗೋಪಾಲ ನಾಯಕ( ಜೆಡಿಎಸ್), ಪಡೆದ ಮತಗಳು– 2,88,916.

*2009– ಸಣ್ಣ ಫಕ್ಕೀರಪ್ಪ (ಬಿಜೆಪಿ), ಪಡೆದ ಮತಗಳು– 3,16,450. ಸಮೀಪ ಸ್ಪರ್ಧಿ– ರಾಜಾ ವೆಂಕಟಪ್ಪ ನಾಯಕ(ಕಾಂಗ್ರೆಸ್), ಪಡೆದ ಮತಗಳು– 2,85,814.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.