ಭಾನುವಾರ, ಮೇ 16, 2021
22 °C

`13 ನಿರ್ಬಂಧಗಳನ್ನು ಕಡ್ಡಾಯವಾಗಿ ಪಾಲಿಸಬೇಕು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಅನುಗುಣವಾಗಿ ಶಾಲಾ ವಾಹನಗಳಿಗೆ 13 ನಿರ್ಬಂಧಗಳನ್ನು ವಿಧಿಸಿದ್ದು, ಕಡ್ಡಾಯವಾಗಿ ಅವುಗಳನ್ನು ಪಾಲಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.ಸುಪ್ರೀಂ ಕೋರ್ಟ್ ಆದೇಶದಂತೆ ಕಳೆದ ಜನವರಿಯಲ್ಲಿ ಕರ್ನಾಟಕ ಮೋಟಾರು ವಾಹನ ನಿಯಮಾವಳಿ ಅಡಿ `ಸ್ಕೂಲ್ ಕ್ಯಾಬ್ ಸ್ಕೀಂ' ಜಾರಿಗೊಳಿಸುವ ಸಂಬಂಧ ಆದೇಶ ಹೊರಡಿಸಲಾಗಿದೆ. ಶಾಲಾ ವಾಹನಗಳ ಪ್ರವರ್ತಕರ ಮನವಿಗೆ ಸ್ಪಂದಿಸಿದ ಹಿಂದಿನ ಸರ್ಕಾರ, ಆದೇಶ ಅನುಷ್ಠಾನಕ್ಕೆ ಮೇ ತಿಂಗಳವರೆಗೂ ಕಾಲಾವಕಾಶ ನೀಡಿತ್ತು ಎಂದು ಸುದ್ದಿಗಾರರಿಗೆ ತಿಳಿಸಿದರು.ಮೇ ತಿಂಗಳವರೆಗೂ ಕಾಲಾವಕಾಶ ಕೇಳಿದ್ದ ಶಾಲಾ ವಾಹನಗಳ ಪ್ರವರ್ತಕರು ಈಗ ಮುಷ್ಕರದ ಮೊರೆ ಹೋಗಿರುವುದು ಸರಿಯಲ್ಲ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದು ಎಲ್ಲರ ಕರ್ತವ್ಯ. ಮುಷ್ಕರನಿರತರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಶಾಲಾ ವಾಹನಗಳಿಗೆ ತೆರಿಗೆ ವಿಧಿಸಬಾರದು ಎಂಬ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು. ಆದರೆ, 15 ವರ್ಷ ಆಗಿರುವ ವಾಹನಗಳನ್ನು ಬಳಸಬಾರದು ಎಂಬ ನಿರ್ಬಂಧವನ್ನು ತೆಗೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. 13 ಆಸನಗಳನ್ನು ಮಾತ್ರ ಹೊಂದಿರಬೇಕು. ನಿಗದಿತ ಆಸನಗಳ ಸಾಮರ್ಥ್ಯವನ್ನು ಬದಲಾಯಿಸಬಾರದು. ಸ್ಪೀಡ್ ಗೌರ‌್ನರ್ ಅಳವಡಿಸಿರಬೇಕು. ಚಾಲಕರು ವಾಹನ ಚಾಲನಾ ಪರವಾನಗಿ ಹೊಂದಿರಬೇಕು. 4 ವರ್ಷ ಅನುಭವ ಹೊಂದಿರಬೇಕು. ವಾಹನ ಗಟ್ಟಿಮುಟ್ಟಾದ ಮೇಲ್ಛಾವಣಿ, ಮುಚ್ಚಿದ ಕವಚ ಹೊಂದಿರಬೇಕು ಎಂಬುದು ಸೇರಿದಂತೆ 13 ಷರತ್ತುಗಳನ್ನು ವಿಧಿಸಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.