ಹಾಸನ: ‘ಜನವರಿ ತಿಂಗಳ ಕೊನೆಯಲ್ಲಿ ಪ್ರಕಟಿಸಿರುವ ಮತದಾರರ ಪಟ್ಟಿಯ ಪ್ರಕಾರ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 15,23,524 ಮತದಾರರಿದ್ದು, ಮತದಾನಕ್ಕಾಗಿ ಒಟ್ಟಾರೆ 2,196 (ಹಾಸನದಲ್ಲಿ 1960, ಕಡೂರಿನಲ್ಲಿ 236) ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು’ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ‘ಒಟ್ಟಾರೆ 7,70,769 ಪುರುಷರು, 7,52,680 ಮಹಿಳೆಯರು ಹಾಗೂ 75 ಲಿಂಗ ಅಲ್ಪಸಂಖ್ಯಾತರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಶ್ರವಣಬೆಳಗೊಳ ಕ್ಷೇತ್ರದಲ್ಲಿ 1,91,989 ಮತದಾರರಿದ್ದರೆ, ಅರಸೀಕೆರೆ ಕ್ಷೇತ್ರದಲ್ಲಿ 2,00,045, ಬೇಲೂರು ಕ್ಷೇತ್ರದಲ್ಲಿ 1,77,051, ಹಾಸನದಲ್ಲಿ 1,88,822, ಹೊಳೆನರಸೀಪುರದಲ್ಲಿ 1,99,073, ಅರಕಲಗೂಡಿನಲ್ಲಿ 1,99,804 ಹಾಗೂ ಸಕಲೇಶಪುರ ಕ್ಷೇತ್ರದಲ್ಲಿ 1,83,122 ಮತದಾರರು ನೋಂದಣಿಯಾಗಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಇರುವ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದಲ್ಲಿ 1,83,618 ಮತದಾರರಿದ್ದಾರೆ.

ಇದಕ್ಕೆ ಅನುಗುಣವಾಗಿ ಶ್ರವಣಬೆಳಗೊಳ ಕ್ಷೇತ್ರದಲ್ಲಿ 270, ಅರಸೀಕೆರೆಯಲ್ಲಿ 275, ಬೇಲೂರಿನಲ್ಲಿ 268, ಹಾಸನದಲ್ಲಿ 265, ಹೊಳೆನರಸೀಪುರದಲ್ಲಿ 316, ಅರಕಲಗೂಡಿನಲ್ಲಿ 285, ಸಕಲೇಶಪುರದಲ್ಲಿ 281 ಹಾಗೂ ಕಡೂರು ಕ್ಷೇತ್ರದಲ್ಲಿ 236 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಲೋಕಸಭಾ ಚುನಾವಣೆಗಾಗಿ ಬಿಇಎಲ್ ಕಂಪೆನಿಯಿಂದ ಹೊಸ ವಿದ್ಯುನ್ಮಾನ ಯಂತ್ರಗಳನ್ನು ತರಿಸಲಾಗಿದೆ. 2,700 ಬ್ಯಾಲೆಟ್ ಯೂನಿಟ್ (ಬಿ.ಯು) ಹಾಗೂ 2,180 ಕಂಟ್ರೋಲ್ ಯೂನಿಟ್ (ಸಿ.ಯು)ಗಳು ಬಂದಿದ್ದು, ಅವುಗಳನ್ನು ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭದ್ರವಾಗಿ ಇಡಲಾಗಿದೆ.

ಸದ್ಯದಲ್ಲೇ ಬಿಇಎಲ್ ಸಂಸ್ಥೆಯ ಅಧಿಕಾರಿಗಳು ಮತ್ತು ಎಂಜಿನಿಯರ್ಗಳು ಬಂದು ಈ ಯಂತ್ರಗಳನ್ನು ಪರಿಶೀಲಿಸುವರು. ಇದಾದ ಬಳಿಕ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.

ಪಟ್ಟಿ ಸೇರ್ಪಡೆಗೆ ಅವಕಾಶ
‘18 ವರ್ಷ ಪೂರೈಸಿದ್ದು, ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದವರಿಗೆ ಮಾರ್ಚ್ 16ರವರೆಗೂ ಹೆಸರು ನೋಂದಾಯಿಸಲು ಅವಕಾಶ ಇರುತ್ತದೆ. ಅರ್ಹ ಮತದಾರರು ಹೆಸರು ನೋಂದಾಯಿಸಬೇಕು’ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಮಾರ್ಚ್ 9ರಂದು ಎಲ್ಲ ಬಿಎಲ್ಒಗಳು ಅವರವರ ಮತಗಟ್ಟೆಯಲ್ಲೇ ಇದ್ದು, ಜನರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಮತದಾರರು ಅಂದು ಮತಗಟ್ಟೆಗಳಿಗೆ ಹೋಗಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಇನ್ನೂ ಹೆಸರು ನೋಂದಾಯಿಸದವರು ಅಲ್ಲಿಯೇ ಅರ್ಜಿ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ನೀಡಬಹುದು ಎಂದರು. ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿರುವ ಮತದಾರರಲ್ಲಿ ಶೇ 99.60ರಷ್ಟು ಮಂದಿಗೆ ಭಾವಚಿತ್ರ ಸಹಿತ ಮತದಾರರ ಚೀಟಿಯನ್ನು ನೀಡಲಾಗಿದೆ.
ಈಗ ಹೆಸರು ನೋಂದಾಯಿಸುವವರಿಗೂ ಅತಿ ಶೀಘ್ರದಲ್ಲಿ ಗುರುತಿನ ಚೀಟಿ ವಿತರಿಸಲಾಗುವುದು. ಮತದಾನಕ್ಕೆ ಈ ಚೀಟಿ ಅಥವಾ ಆಯೋಗ ಅಂಗೀಕರಿಸಿರುವ ದಾಖಲೆಗಳಲ್ಲಿ ಒಂದನ್ನು ಕಡ್ಡಾಯವಾಗಿ ತರಬೇಕಾಗುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ ಹಾಗೂ ಇತರ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.