ಶುಕ್ರವಾರ, ಜೂನ್ 25, 2021
22 °C

16ನೇ ಲೋಕಸಭಾ ಚುನಾವಣೆ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಹುನಿರೀಕ್ಷಿತ 16ನೇ ಲೋಕಸಭೆ ಚುನಾವಣೆ ಏಪ್ರಿಲ್‌ 7ರಂದು ಆರಂಭಗೊಂಡು ಮೇ 12ರವರೆಗೆ ಒಂಬತ್ತು ಹಂತಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಮುಖ್ಯ ಚುನಾವಣಾ ಆಯುಕ್ತರಾದ ವಿ.ಎಸ್. ಸಂಪತ್ ಅವರು ಬುಧವಾರ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಿದರು. ಇದೇ ವೇಳೆ ಸಿಕ್ಕಿಂ, ಓಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಒಂಬತ್ತು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ 16 ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 81.4 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಸಲ 10 ಕೋಟಿ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.

ದೇಶದ 544 ಕ್ಷೇತ್ರಗಳ ಒಟ್ಟು 9.30 ಲಕ್ಷ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದೇ ಮೊದಲ ಬಾರಿಗೆ ನೋಟಾ (ಯಾರಿಗೂ ಮತದಾನ ಇಲ್ಲ) ಬಳಕೆ ಮಾಡಲಾಗುತ್ತಿದೆ.ಚುನಾವಣಾ ವೇಳಾಪಟ್ಟಿ:


ಹಂತಗಳು

ದಿನಾಂಕ

ಕ್ಷೇತ್ರಗಳು

ಮೊದಲ ಹಂತ

ಏಪ್ರಿಲ್–7 

6

ಎರಡನೇ ಹಂತ

ಏಪ್ರಿಲ್–9 

7

ಮೂರನೇ ಹಂತ

ಏಪ್ರಿಲ್–10

92

ನಾಲ್ಕನೇ ಹಂತ

ಏಪ್ರಿಲ್–12

5

ಐದನೇ ಹಂತ

ಏಪ್ರಿಲ್–17

122

ಆರನೇ ಹಂತ 

ಏಪ್ರಿಲ್–24

117

ಏಳನೇ ಹಂತ

ಏಪ್ರಿಲ್–30

89

ಎಂಟನೇ ಹಂತ

ಮೇ–7

64

ಒಂಬತ್ತನೇ ಹಂತ

ಮೇ–12

41

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.