ಮಂಗಳವಾರ, ಜೂನ್ 15, 2021
21 °C
ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ

189 ದೇಶಗಳಲ್ಲಿ ಭಾರತಕ್ಕೆ 111ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ(ಪಿಟಿಐ): ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ  ವಿಶ್ವದ 189 ದೇಶ­ಗಳಲ್ಲಿ ಭಾರತವು 111ನೇ ಸ್ಥಾನ ಪಡೆದಿದೆ.



ಅಂತರರಾಷ್ಟ್ರೀಯ ಮಹಿಳಾ ದಿನಾ­ಚರಣೆಯ  ಸಲುವಾಗಿ ಶುಕ್ರವಾರ ಅಂತರ­ರಾಷ್ಟ್ರೀಯ ಸಂಸದೀಯ ಸಮಿತಿ (ಐಪಿಯು) ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಪಿಯು ಒಟ್ಟು 189 ದೇಶಗಳ  ಸಂಸತ್ತಿನಲ್ಲಿ ಮಹಿಳೆಯರ ಸಂಖ್ಯೆ ಕುರಿತು ವಿಶ್ಲೇಷಣೆ  ನಡೆಸಿ ಪಟ್ಟಿ ಪ್ರಕಟಿಸಿತ್ತು. ಈ  ರ್‍್ಯಾಂಕ್‌ ಪಟ್ಟಿಯಲ್ಲಿ ಭಾರತ 111ನೇ ಸ್ಥಾನ ಪಡೆದಿದೆ.



ಭಾರತದ ಲೋಕಸಭೆಯ ಒಟ್ಟು 545 ಸಂಸದರಲ್ಲಿ 62 ಜನ ಮಹಿಳೆಯರು  ಹಾಗೂ ರಾಜ್ಯಸಭೆಯ ಒಟ್ಟು 245 ಸದಸ್ಯರಲ್ಲಿ 28 ಜನ ಮಹಿಳೆಯರು ಇದ್ದಾರೆ. ಲೋಕಸಭೆಯಲ್ಲಿ ಶೇ.11.4ರಷ್ಟು ಹಾಗೂ ರಾಜ್ಯಸಭೆಯಲ್ಲಿ  ಶೇ. 11.4ರಷ್ಟು ಮಹಿಳೆ­ಯರು  ಸಂಸತ್ತನ್ನು ಪ್ರತಿ­ನಿಧಿಸು­ತ್ತಿದ್ದಾರೆ ಎಂದು ಐಪಿಯು ತಿಳಿಸಿದೆ.



ವಿವಿಧ ದೇಶದಲ್ಲಿ ಈ ಹಿಂದಿನ ತಲೆ­ಮಾರಿ­ಗಿಂತ ಹೆಚ್ಚು ಮಹಿಳೆಯರು ಸಂಸತ್ತಿನಲ್ಲಿ ಭಾಗವಹಿಸುವ ಮೂಲಕ ದೇಶದಲ್ಲಿ ಲಿಂಗಸಮಾನತೆಯನ್ನು ಸಾಧಿಸಿದೆ. 2013ರಲ್ಲಿ  ನಡೆದ ಚುನಾವಣೆ ಬಳಿಕ ವಿಶ್ವದ ಸಂಸತ್ತುಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇಕಡಾ 1.5 ರಷ್ಟು ಹೆಚ್ಚಳವಾಗಿದೆ ಎಂದು ಐಪಿಯು ತನ್ನ ವಾರ್ಷಿಕ ವಿಶ್ಲೇಷಣೆಯಲ್ಲಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.