ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಪ್ರಾರಂಭವಾಗಿ ಎರಡು ಶತಮಾನಗಳೇ ಕಳೆದಿದ್ದರೂ, ದೇಶದಲ್ಲಿನ ಶೇ *1.30 ಕುಟುಂಬಗಳು ಇನ್ನೂ ಬ್ಯಾಂಕಿಂಗ್ ಸೇವೆಗಳಿಂದ ದೂರವೇ ಇರುವುದು ವಿಷಾದದ ಸಂಗತಿ. ಪ್ರಚಾರದ ಕೊರತೆ, ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ತಿಳಿವಳಿಕೆ, ಮಾಹಿತಿ ಇಲ್ಲದೇ ಇರುವುದು ಹಾಗೂ ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಶಾಖೆಗಳು ಹೆಚ್ಚು ಆರಂಭಗೊಳ್ಳದೇ ಇರುವುದು ಈ ದುಃಸ್ಥಿತಿಗೆ ಕಾರಣವಾಗಿದೆ. ಇದನ್ನು ಮನಗಂಡ ಭಾರತ ಸರ್ಕಾರ ಹಾಗೂ ‘ಭಾರತೀಯ ರಿಸರ್ವ್ ಬ್ಯಾಂಕ್’ (ಆರ್ಬಿಐ) ‘ಬ್ಯಾಂಕಿಂಗ್ ಸಾಕ್ಷರತೆ ಹಾಗೂ ವಿತ್ತೀಯ ಸೇರ್ಪಡೆ’ ಎನ್ನುವ ಅಂದೋಲನವನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಮ್ಮಿಕೊಂಡಿವೆ.

ಮಹತ್ವದ ಈ ಅಂದೋಲನವನ್ನು ಯಶಸ್ವಿಗೊಳಿಸಲೆಂದೇ ಭಾರತೀಯ ರಿಸರ್ವ್ ಬ್ಯಾಂಕ್, 10 ವರ್ಷದ ಮಕ್ಕಳಿಗೂ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ (ಉಳಿತಾಯ ಬ್ಯಾಂಕ್ ಖಾತೆ) ತೆರೆಯಲು ಸ್ವತಂತ್ರವಾಗಿ ವ್ಯವಹರಿಸಲು ಅವಕಾಶ ನೀಡಿದೆ.
ಕಿರಿಯರ ಈ ಉಳಿತಾಯ ಖಾತೆ ತೆರೆಯಲು ಇಂತಿಷ್ಟು ಕನಿಷ್ಠ ಆರಂಭಿಕ ಶಿಲ್ಕು (ಹಣ) ಇರಿಸಲೇಬೇಕು ಎಂಬ ನಿಯಮವೇನಿಲ್ಲ. ಹಾಗೂ ಖಾತೆಯಲ್ಲಿ ಸದಾ ಕಾಲವೂ ಕನಿಷ್ಠ ಮೊತ್ತವನ್ನು ಇಡಲೇಬೇಕೆಂಬುದು ಕಡ್ಡಾಯವೇನಿಲ್ಲ. ಶೂನ್ಯ ಶಿಲ್ಕಿನಲ್ಲಿಯೂ ಮಕ್ಕಳು ತಮ್ಮ ಬ್ಯಾಂಕ್ ಖಾತೆಯಲ್ಲಿ ವ್ಯವಹರಿಸಬಹುದಾಗಿದೆ.

196*ರಲ್ಲಿಯೇ ಸಿಂಡಿಕೇಟ್ ಬ್ಯಾಂಕಿನ ಅಂದಿನ ಅಧ್ಯಕ್ಷರಾದ ಡಾ. ಟಿ.ಎಂ.ಎ.ಪೈ ಅವರು ‘ವಿದ್ಯಾರ್ಥಿ ಉಳಿತಾಯ ಖಾತೆ’ ಎನ್ನುವ ಬ್ಯಾಂಕಿಂಗ್ ಸೇವೆ ಆರಂಭಿಸಿದ್ದರು. ವಿದ್ಯಾರ್ಥಿಗಳಿಂದ ₨* ಪಡೆದು, ಅದಕ್ಕೆ ಬ್ಯಾಂಕಿನಿಂದಲೇ ₨1 ಸೇರಿಸಲಾಯಿತು. ಹೀಗೆ ₨5 ಒಟ್ಟುಗೂಡಿಸಿ ಉಳಿತಾಯ ಖಾತೆ ಪ್ರಾರಂಭಿಸುವ ಮನೋಭಾವವನ್ನು ಮಕ್ಕಳಲ್ಲಿ ದಶಕಗಳ ಹಿಂದೆಯೇ ಮೂಡಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು. (196*ರಲ್ಲಿ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಆರಂಭಿಸಲು ಬೇಕಾಗಿದ್ದ ಕನಿಷ್ಠ ಮೊತ್ತ ₨5 ಮಾತ್ರ).

‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?’ ಎನ್ನುವ ಗಾದೆ ಮಾತಿನಂತೆ, ಚಿಕ್ಕವಯಸ್ಸಿನಲ್ಲಿ ಪ್ರತಿಬಿಂಬಿಸುವ ಉತ್ತಮ ನಡವಳಿಕೆಗಳು ಹಾಗೂ ಅವುಗಳ ಪ್ರಭಾವ ಅಂತಹ ಮಕ್ಕಳ ಜೀವನದ ಶೈಲಿಯನ್ನೇ ಬದಲಾಯಿಸಬಲ್ಲದು. ಅಷ್ಟೇ ಅಲ್ಲದೆ, ಈ ಉಳಿತಾಯ ಮನೋಭಾವ ಜೀವನದ ಸಂದ್ಯಾಕಾಲದವರೆಗೂ ತಂಪಾದ ಗಾಳಿಯಂತೆ ನಿರಂತರವಾಗಿ ಬೀಸಿ ಬದುಕನ್ನು ಹಸನುಗೊಳಿಸಬಲ್ಲದು.

10ರಿಂದ 18 ವರ್ಷಗಳೊಳಗಿನ ಮಕ್ಕಳು (ಹದಿಹರೆಯದವರು), ಬೆಳೆದು ಬಂದ ವಾತಾವರಣ, ಹೊಂದಿಕೊಂಡಿರುವ ಪರಿಸರ ಹಾಗೂ ಕೌಟುಂಬಿಕ ಹಿನ್ನೆಲೆ... ಇವೆಲ್ಲವೂ ಅವರ ಮುಂದಿನ ಜೀವನದಲ್ಲಿ ಮನುಷ್ಯನ ನೆರಳಿನಂತೆ ಹಿಂಬಾಲಿಸುತ್ತಿರುತ್ತವೆ. ಈ ಕಾಲಾವಧಿಯನ್ನು ‘Transformation Period’ (ಪರಿವರ್ತನಾಕಾಲ) ಎಂಬುದಾಗಿ ಕರೆಯುತ್ತಾರೆ.
15ನೇ ಜನಗಣತಿ ವರದಿ ಪ್ರಕರಣವಾಗಿದ್ದು ನಾವೀಗ 121 ಕೋಟಿ ಎನ್ನುವುದು ಖಚಿತವಾಗಿದೆ.

ಈ ವಿಚಾರದಲ್ಲಿ ಒಂದು ಸಮೀಕ್ಷೆ.

* 63 ಕೋಟಿ ಪುರುಷರು
* 58 ಕೋಟಿ ಮಹಿಳೆಯರು
* ಇವರಲ್ಲಿ ಮಕ್ಕಳ ಸಂಖ್ಯೆಯೇ 15.88 ಕೋಟಿ
ಸಾಕ್ಷರತೆ ಪ್ರಮಾಣ (ಶೇ)
* ಪುರುಷರು 82.1*
* ಮಹಿಳೆಯರು 65.*6
ಜನಸಾಂದ್ರತೆ (ಪ್ರತಿ ಚದರ ಕಿ.ಮೀ.)
* ದೆಹಲಿ ಗರಿಷ್ಠ 11297
* ಅರುಣಾಚಲ ಪ್ರದೇಶ ಕನಿಷ್ಠ 17
* ವಿಶ್ವದ ಜನಸಂಖ್ಯೆಯ ಶೇ 17.5 ರಷ್ಟು ಭಾರತೀಯರು
ಇತ್ತೀಚೆಗೆ ವಿಶ್ವಬ್ಯಾಂಕ್ ನಡೆಸಿರುವ ಸಮೀಕ್ಷೆ ಪ್ರಕಾರ ಆರ್ಥಿಕ ಸಾಮರ್ಥ್ಯದಲ್ಲಿ ಭಾರತ ವಿಶ್ವದಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಇದೇ ವೇಗದಲ್ಲಿ ಸಾಗಿದರೆ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಮ್ ಅವರು ವಿಶ್ವಾಸವಿಟ್ಟಿರುವಂತೆ 2020ನೇ ವರ್ಷದ ವೇಳೆಗೆ ಭಾರತವು ‘ವಿಶ್ವದ ಪ್ರಬಲ ರಾಷ್ಟ್ರ’ ಎಂಬ ಸ್ಥಾನಕ್ಕೇರಿ ರಾರಾಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಸಾಧನೆ ಕೈಗೂಡಬೇಕಾದರೆ ದೇಶದ ಪ್ರತಿಯೊಬ್ಬರ ಕೊಡುಗೆಯೂ ಬಹಳ ಮುಖ್ಯ. ಮಕ್ಕಳಿನ್ನೂ ಚಿಕ್ಕವರು ಎಂದು ಪಕ್ಕಕ್ಕೆ ಸರಿಸದೆ ಅವರಿಂದಲೂ ‘ಅಳಿಲು ಸೇವೆ’ಯಂತಹ ಕೊಡುಗೆ ನಿರೀಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಹಣ ಉಳಿತಾಯ ಎಂಬ ರೂಢಿಯನ್ನು ಮಕ್ಕಳಲ್ಲಿ ತರಬೇಕಿದೆ.

ಅಷ್ಟೇ ಅಲ್ಲದೆ, ಹಣ ಉಳಿತಾಯ, ಬ್ಯಾಂಕ್ನಲ್ಲಿ ಅವರದ್ದೇ ಆದ ಉಳಿತಾಯ ಖಾತೆ, ಜತೆಗೆ ಸ್ವತಂತ್ರ ವಹಿವಾಟು ಕ್ರಮಗಳಿಂದ ಮಕ್ಕಳಿಗೆ ಬ್ಯಾಂಕಿಂಗ್ ಕ್ಷೇತ್ರದ ಆರಂಭಿಕ ಪರಿಚಯವೂ ಆಗಲಿದೆ.

ಹಾಗಾಗಿಯೇ, ಕೇಂದ್ರ ಸರ್ಕಾರದ ಮಹತ್ವದ ಕಾರ್ಯಕ್ರಮವಾದ ‘ಬ್ಯಾಂಕಿಂಗ್ ಸಾಕ್ಷರತೆ’ ಯಶಸ್ವಿಯಾಗಲು ಪ್ರಾರಂಭದಿಂದಲೇ ಮಕ್ಕಳಲ್ಲಿ ಉಳಿತಾಯದ ಮನೋಭಾವ ಮೂಡಿಸಬೇಕು. ಇದರಲ್ಲಿ ಹೆತ್ತವರ ಪಾತ್ರ ಮಹತ್ವದ್ದು. ಈ ನಿಟ್ಟಿನಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಏ. 6ರಂದು ‘ಮಕ್ಕಳಿಗೆ ಸ್ವತಂತ್ರ ಉಳಿತಾಯ ಖಾತೆ’ ಆರಂಭ ಮತ್ತು ವಹಿವಾಟಿಗೆ ಅನುಮತಿ ನೀಡಿದೆ.

ಎಲ್ಲರ ಜವಾಬ್ದಾರಿ
ಭಾರತದಲ್ಲಿ ಜನಿಸಿದ 10 ವರ್ಷ ಮೀರಿದ ಬಾಲಕ ಅಥವಾ ಬಾಲಕಿ ಕಡ್ಡಾಯವಾಗಿ ತಮ್ಮ ಮನೆಗೆ ಸಮೀಪದ ಬ್ಯಾಂಕ್ ಒಂದರಲ್ಲಿ ಉಳಿತಾಯ ಖಾತೆ ತೆರೆಯುವಂತೆ, ಬ್ಯಾಂಕ್ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸಬೇಕಿದೆ. ಈ ಖಾತೆ ತೆರೆಯುವುದರಿಂದ ಪಡೆಯಬಹುದಾದ ಲಾಭ ಹಾಗೂ ಸೌಲಭ್ಯಗಳ ವಿಚಾರಗಳಲ್ಲಿ ಹೆತ್ತವರಿಗೆ ಮನವರಿಕೆ ಮಾಡಿಕೊಡಬೇಕಿದೆ.

ಜತೆಗೆ, ಮಕ್ಕಳ ಉಳಿತಾಯ ಖಾತೆ ಆರಂಭಿಸುವ ವಿಚಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಪ್ರತೀ ಬ್ಯಾಂಕಿಗೂ ಒಂದು ನಿರ್ದಿಷ್ಟ ಗುರಿ ನೀಡಬೇಕಿದೆ. ಹಾಗೂ ಡಿಸ್ಟ್ರಿಕ್್ಟ ಕನ್ಸಲ್ಟೇಟಿವ್ ಕಮಿಟಿಯಲ್ಲಿ ಪ್ರತೀ ಬ್ಯಾಂಕಿನ ಶಾಖೆ ಮಕ್ಕಳ ಉಳಿತಾಯ ಖಾತೆ ಪ್ರಾರಂಭಿಸಿರುವುದನ್ನು, ಪ್ರತೀ ತಿಂಗಳೂ ಪರಾಮರ್ಶೆ ನಡೆಸಬೆೇಕು ಹಾಗೂ ಆ ಕುರಿತ ವಿವರ ವರದಿಯನ್ನು ಲೀಡ್ ಬ್ಯಾಂಕಿಗೆ ಸಲ್ಲಿಸಬೇಕು. ಆಯಾ ಜಿಲ್ಲೆಯ ಲೀಡ್ ಬ್ಯಾಂಕ್ ತಮ್ಮ ವ್ಯಾಪ್ತಿಯಲ್ಲಿ ಮಕ್ಕಳ ಉಳಿತಾಯ ಖಾತೆ ಆರಂಭ ವಿಚಾರದಲ್ಲಿ ಆಗಿರುವ ಪ್ರಗತಿಯನ್ನು ರಾಜ್ಯದ ಮಟ್ಟದ ಬ್ಯಾಂಕರ್್ಸ ಸಮಿತಿಯಲ್ಲಿನ ಸಭೆಯಲ್ಲಿ ಆರ್.ಬಿ.ಐ.ಗೆ ವಿವರಿಸಬೇಕು. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರಬೇಕು.

ಮಕ್ಕಳ ಉಳಿತಾಯ ಖಾತೆಯನ್ನು ಶೂನ್ಯ ಮೊತ್ತದಿಂದಲೇ ಆರಂಭಿಸಬಹುದಾಗಿರುವುದರಿಂದ ಈ ವಿಚಾರದಲ್ಲಿ ಮಕ್ಕಳಿಗೆ ಹಾಗೂ ಹೆತ್ತವರಿಗೆ ಎಂದಿಗೂ ಆತಂಕ, ಅಡ್ಡಿ ಇರದು. ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದಲ್ಲಿ ಚಿಕ್ಕ ಮಕ್ಕಳಲ್ಲಿ ಉಳಿತಾಯದ ರೂಢಿ ತರಬೇಕು, ಬ್ಯಾಂಕಿಂಗ್ ಸಾಕ್ಷರತೆ ಹೆಚ್ಚಿಸಬೇಕು ಎಂಬ ‘ಆರ್ಬಿಐ’ನ ಉದ್ದೇಶ ಈಡೇರುತ್ತದೆ.

ಮಕ್ಕಳನ್ನು ಬ್ಯಾಂಕಿಂಗ್ ವಹಿವಾಟಿನೊಳಗೆ ತರಲು ಹಾಗೂ ಸಮಗ್ರ ಬ್ಯಾಂಕಿಂಗ್ ಸಾಕ್ಷರತೆಗೆ ಒಳಪಡಿಸಲು ಅತ್ಯಗತ್ಯವಾದ ಮೂಲ ಸೌಕರ್ಯಗಳನ್ನು ಆರ್ಬಿಐ ಮತ್ತು ಬ್ಯಾಂಕ್ಗಳು ಒದಗಿಸಬೇಕಿದೆ. ಭಾರತದ ಒಟ್ಟು ಜನಸಂಖ್ಯೆಯ ಶೇ 70ರಷ್ಟು ಅಂದರೆ 85 ಕೋಟಿ ಜನರು ಹಳ್ಳಿ ಹಾಗೂ ಸಣ್ಣ ಪಟ್ಟಣಗಳಲ್ಲಿ ಜೀವಿಸುತ್ತಿದ್ದಾರೆ. ಸದ್ಯ ದೇಶದಲ್ಲಿ ಕೇಂದ್ರ ಸರ್ಕಾರದ ಒಡೆತನದ 27 ಬ್ಯಾಂಕುಗಳು ಹಾಗೂ ಖಾಸಗಿ ಕ್ಷೇತ್ರದ 27 ಬ್ಯಾಂಕುಗಳು ಮತ್ತು 56 ಪ್ರಾದೇಶಿಕ ಬ್ಯಾಂಕುಗಳು (ಒಟ್ಟು 105 ಬ್ಯಾಂಕಿಂಗ್ ಸಂಸ್ಥೆಗಳು) ಚಟುವಟಿಕೆಯಲ್ಲಿ ಇವೆ. ಜೊತೆಗೆ ಸಹಕಾರಿ ಹಾಗೂ ಇದೇಶಿ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿವೆ. ಆರ್.ಬಿ.ಐ. ಇನ್ನೆರಡು ಖಾಸಗಿ ಬ್ಯಾಂಕುಗಳಿಗೆ ಇತ್ತೀಚೆಗೆ ಪರವಾನಗಿ ನೀಡಿದೆ.

ಕನಿಷ್ಠ 2000 ಜನಸಂಖ್ಯೆ ಇರುವ ಹಳ್ಳಿಯಲ್ಲಿಯೂ ಶಾಖೆ ತೆರೆಯುವಂತಾಗಬೇಕು ಎಂಬ ಕನಸು ಆರ್.ಬಿ.ಐನದ್ದಾಗಿದೆ. ಈ ನಿಟ್ಟಿನಲ್ಲಿಯೇ ಎಲ್ಲ ಬ್ಯಾಂಕುಗಳಿಗೂ ಸುತ್ತೋಲೆ ಕಳಿಸಿ ‘ಬ್ರಾಂಚ್ ಲೈಸನ್್ಸ’ (ಶಾಖೆ ಆರಂಭಕ್ಕೆ ಅನುಮತಿ) ಪಡೆಯುವ ವಿಚಾರದಲ್ಲಿ ನಿಯಮಗಳನ್ನೂ ಸಡಿಲಿಸಿದೆ.

ಕರ್ನಾಟಕ ಒಂದರಲ್ಲಿಯೇ 2000 ಜನಸಂಖ್ಯೆ ಇರುವ 602* ಹಳ್ಳಿಗಳನ್ನು ‘Unbanked’ (ಬ್ಯಾಂಕಿಂಗ್ ಸೇವೆ ಲಭ್ಯವಿಲ್ಲದ) ಪ್ರದೇಶಗಳೆಂದು ಗುರುತಿಸಲಾಗಿದೆ. ಒಟ್ಟಿನಲ್ಲಿ ದೇಶದ ಆರ್ಥಿಕ ಪ್ರಗತಿಯಲ್ಲಿ ಬ್ಯಾಂಕುಗಳ ಪಾತ್ರ ಬಹು ದೊಡ್ಡದು. ಹಣ ಚಲಾವಣೆಯಾಗಬೇಕು, ಪ್ರತಿಯೊಂದೂ ಕುಟುಂಬ ಹಾಗೂ ಕುಟುಂಬದ ಸದಸ್ಯರು ಕಡ್ಡಾಯವಾಗಿ ಬ್ಯಾಂಕ್ ಖಾತೆ ತೆರೆದು ಎಷ್ಟಾದರಷ್ಟು ಉಳಿತಾಯ ಮಾಡಬೇಕು.

ಈ ಪ್ರವೃತ್ತಿಯಿಂದ ಮಾತ್ರವೇ ರಾಷ್ಟ್ರ ಸಬಲವಾಗಲು ಸಾಧ್ಯ. ಜನರ ಸಹಕಾರ, ಸರ್ಕಾರದ ಬೆಂಬಲ ಹಾಗೂ ಬ್ಯಾಂಕ್ ಸಿಬ್ಬಂದಿಗಳ ನಿರಂತರ ಸೇವೆ ಇವುಗಳು ಒಂದಾಗಿ ಕೆಲಸ ಮಾಡಿದಲ್ಲಿ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ ಹೊರಹೊಮ್ಮಿ ಉಳಿತಾಯಕ್ಕೆ ಅವರು ಮುಂದಾಗುತ್ತಾರೆ. ಇವರೇ ಬ್ಯಾಂಕಿನ ಮುಂದಿನ ಉತ್ತಮ ಗ್ರಾಹಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.