ರೋಮ್ (ಪಿಟಿಐ): 1993ರ ಮುಂಬೈ ಬಾಂಬ್ ದಾಳಿಗಳ ಮೆದುಳು ಎಂದೇ ಪರಿಗಣಿಸಲಾಗಿರುವ ದಾವೂದ್ ಇಬ್ರಾಹಿಂ ತನಗೆ ಇನ್ನೂ ದುರ್ಲಭನಾಗಿರುವ ಹಿನ್ನೆಲೆಯಲ್ಲಿ ~ನಂಬಲರ್ಹ ಸಾಕ್ಷ್ಯಧಾರಗಳನ್ನು ನೀಡಿದ್ದರೂ ಹೀನ ಸರಣಿ ಬಾಂಬ್ ಸ್ಫೋಟಗಳ ಸೂತ್ರಧಾರಿಗಳು ಪಾಕಿಸ್ತಾನದ ಸ್ವರ್ಗದಲ್ಲಿ ಸುರಕ್ಷಿತರಾಗಿದ್ದಾರೆ~ ಎಂದು ಭಾರತ ಮಂಗಳವಾರ ಆಪಾದಿಸಿತು.

ಇಂಟರ್ ಪೋಲ್ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಸುಶೀಲ್ ಕುಮಾರ ಶಿಂಧೆ ಅವರು ~ಭಾರತವು ನಿರಂತರವಾಗಿ ಹಲವು ವಿಧದ ಭಯೋತ್ಪಾದಕ ಬೆದರಿಕೆಗಳನ್ನು, ನಿರ್ದಿಷ್ಟವಾಗಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ~ ಎಂದು ಹೇಳಿದರು.

~ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಯನ್ನು ಪರಿಣಾಮಕಾರಿ ಆಯಕಟ್ಟಿನ ಶಸ್ತ್ರವಾಗಿ ಬಳಸುವುದು ಹೆಚ್ಚುತ್ತಿದೆ~ ಎಂದು ಅವರು ನುಡಿದರು.

ನೆರೆ ರಾಷ್ಟ್ರದ ಜೊತೆಗೆ ನಿರಂತರ ಮಾತುಕತೆ, ಕಳೆದ ಶತಮಾನ -1993ರ ಅತಿ ಹೀನ ಮುಂಬೈ ಬಾಂಬ್ ಸ್ಫೋಟ ಕೃತ್ಯಗಳಿಗೆ ಸಂಬಂಧಿಸಿದಂತೆ ನಂಬಲರ್ಹ ಸಾಕ್ಷ್ಯಧಾರಗಳನ್ನು ಒದಗಿಸಲಾಗಿದೆ. ಆದರೆ ದುಷ್ಕೃತ್ಯದ ಸೂತ್ರಧಾರಿ ಪಾಕಿಸ್ತಾನದ ಸ್ವರ್ಗದಲ್ಲಿ ಸುರಕ್ಷಿತನಾಗಿದ್ದಾನೆ. 257 ಜನರ ಹತ್ಯೆ, 713 ಜನ ಗಾಯಗೊಳ್ಳಲು ಕಾರಣನಾದ ಸೂತ್ರಧಾರಿಯನ್ನು ಕಟಕಟೆಗೆ ತರಲು ಇನ್ನೂ ಸಾಧ್ಯವಾಗಿಲ್ಲ~ ಎಂದು ಶಿಂಧೆ ಹೇಳಿದರು.

~ಅಪರಾಧಿಗಳು ನೆರೆಯ ರಾಷ್ಟ್ರದಲ್ಲೇ ಇದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದಿದೆ. ಭಾರತದ ಪ್ರಜೆಗಳೇ ಆಗಿರುವ ಅವರ ವಿರುದ್ಧ ಹೊರಡಿಸಲಾದ ಇಂಟರ್ ಪೋಲ್ ಕೆಂಪು ನೋಟಿಸ್ ಗಳು 1993ರಿಂದ ನೆನೆಗುದಿಯಲ್ಲಿ ಬಿದ್ದಿವೆ~ ಎಂಬುದಾಗಿ ಪಾಕಿಸ್ತಾನವನ್ನು ಉದ್ದೇಶಿಸಿಯೇ ಶಿಂಧೆ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.