ತುಮಕೂರು: ಪ್ರತಿಷ್ಠಿತ, ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಪೂರ್ಣ ಸೀಟುಗಳನ್ನು ಬಳಸಿಕೊಳ್ಳಲು ತುಮಕೂರು ಶೈಕ್ಷಣಿಕ ಜಿಲ್ಲೆಯ ಪೋಷಕರಿಗೆ ಸಾಧ್ಯವಾಗಿಲ್ಲ. ಲಭ್ಯವಿರುವ 2711 ಸೀಟುಗಳಲ್ಲಿ, 2068 ಸೀಟುಗಳು ಮಾತ್ರ ಭರ್ತಿಯಾಗಿವೆ.

ತುಮಕೂರು ಶೈಕ್ಷಣಿಕ ಜಿಲ್ಲೆಯ ಪರಿಸ್ಥಿತಿ ಇದಾಗಿದ್ದರೆ, ಶೈಕ್ಷಣಿಕ ವರ್ಷ ಆರಂಭವಾಗಿ ವಾರ ಕಳೆದರೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ಟಿಇ) ಎಷ್ಟು ಮಕ್ಕಳಿಗೆ ಪ್ರವೇಶ ನೀಡಲಾಗಿದೆ ಎಂಬ ಮಾಹಿತಿಯೇ ಅಲ್ಲಿನ ಉಪನಿರ್ದೇಶಕರ ಬಳಿ ಇಲ್ಲ. ಆರ್ಟಿಇ ಅನುಷ್ಠಾನ ಮತ್ತು ಅದರಿಂದ ಎಷ್ಟು ಮಕ್ಕಳಿಗೆ ಪ್ರವೇಶ ನೀಡಲಾಗಿದೆ, ಎಷ್ಟು ಸೀಟುಗಳು ಖಾಲಿ ಇವೆ ಎಂಬ ಮಾಹಿತಿಯೂ ಲಭ್ಯವಿಲ್ಲ. ಮಂಗಳವಾರ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆಯಲಾಗಿದ್ದು, ವಿವರ ಪಡೆಯಲಾಗುವುದು ಎಂದು ಉಪನಿರ್ದೇಶಕ ಆಂಜಿನಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಆರ್ಇಟಿ ಸಮರ್ಪಕ ಅನುಷ್ಠಾನವಾಗಿದೆ. ಆದರೆ ಅರ್ಜಿ ಸಲ್ಲಿಸಿರುವ ಎಲ್ಲ ಮಕ್ಕಳು ಪ್ರವೇಶ ಪಡೆದಿಲ್ಲ. ವಿದ್ಯಾನಿಕೇತನ, ಜೈನ್, ಪ್ರುಡೆನ್ಸ್, ಮಾರುತಿ ಶಾಲೆಯಂತಹ ಪ್ರತಿಷ್ಠಿತ ಶಾಲೆಗಳಲ್ಲಿ ಲಭ್ಯವಿರುವ ಎಲ್ಲ ಸೀಟುಗಳು ಭರ್ತಿಯಾಗಿವೆ. ಆದರೆ ಸಣ್ಣ, ಪುಟ್ಟ ಹೆಸರುಗಳಿಸದ ಶಾಲೆಗಳಿಗೆ ಅರ್ಜಿ ಹಾಕಿ, ಸೀಟು ಲಭ್ಯವಿದ್ದರೂ ಪೋಷಕರು ಮಕ್ಕಳನ್ನು ಸೇರಿಸಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಮೋಹನ್ ಕುಮಾರ್ ಹೇಳಿದರು.

ಆರ್ಇಟಿ ಕಾಯ್ದೆಯಂತೆ ಆಯಾ ಶಾಲೆಗಳು ಶೇ 25ರಷ್ಟು ಸೀಟುಗಳನ್ನು ಶಾಲಾ ವ್ಯಾಪ್ತಿಯಲ್ಲಿರುವ ಬಡ ಮಕ್ಕಳಿಗೆ ಮೀಸಲಿಡಬೇಕು. ಶಾಲೆಗಳು ಪ್ರಕಟಿಸಿದ ಸೀಟುಗಳಿಗೆ ಪೋಷಕರು ಅರ್ಜಿ ಸಲ್ಲಿಸಬೇಕು. ನಂತರ ಲಭ್ಯವಿರುವ ಸೀಟುಗಳಿಗಿಂತ ಹೆಚ್ಚಿನ ಅರ್ಜಿಗಳು ಬಂದಿದ್ದರೆ ಲಾಟರಿ ಮೂಲಕ ಮಕ್ಕಳ ಪ್ರವೇಶ ಆಯ್ಕೆ ಮಾಡಲಾಗುತ್ತದೆ.

ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಇನ್ನೂ 643 ಸೀಟುಗಳು ಖಾಲಿ ಉಳಿದಿವೆ. ಇವುಗಳಲ್ಲಿ ಎಲ್ಕೆಜಿಯಲ್ಲಿ 494 ಹಾಗೂ ಒಂದನೇ ತರಗತಿಯಲ್ಲಿ 149 ಸೀಟುಗಳು ಖಾಲಿ ಉಳಿದಿವೆ. ಆರ್ಟಿಇ ಪ್ರಕಾರ ಎಲ್ಕೆಜಿಯಲ್ಲಿ 1512 ಸೀಟುಗಳು, ಒಂದನೇ ತರಗತಿಗೆ 1199 ಸೀಟುಗಳು ಲಭ್ಯವಾಗಿದ್ದವು. ಎಲ್ಕೆಜಿಗೆ ಪ್ರವೇಶ ಬಯಸಿ 1563 ಅರ್ಜಿಗಳು ಬಂದಿದ್ದರೂ ಕೇವಲ 1017 ಮಕ್ಕಳಷ್ಟೇ ಪ್ರವೇಶ ಪಡೆದಿದ್ದಾರೆ. ಒಂದನೇ ತರಗತಿಗೆ 1786 ಅರ್ಜಿಗಳು ಬಂದಿದ್ದರೂ ಕೇವಲ 1050 ಮಕ್ಕಳು ಮಾತ್ರ ಪ್ರವೇಶ ಪಡೆದಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆ ಪರಿಪೂರ್ಣ ಲಾಭವನ್ನು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ತಾಲ್ಲೂಕು ಪಡೆದಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಲಭ್ಯವಿದ್ದ 173, ತುರುವೇಕೆರೆ ತಾಲ್ಲೂಕಿನಲ್ಲಿ ಲಭ್ಯವಿದ್ದ 127 ಸೀಟುಗಳು ಪೂರ್ಣವಾಗಿ ಭರ್ತಿಯಾಗಿವೆ.

ತುಮಕೂರು ನಗರದ ಜನತೆ ಸೌಲಭ್ಯ ಪಡೆಯುವಲ್ಲಿ ಎಲ್ಲರಿಗಿಂತಲೂ ಹಿಂದೆ ಉಳಿದಿದ್ದಾರೆ. ಅತಿ ಹೆಚ್ಚು ಖಾಸಗಿ ಶಾಲೆಗಳಿರುವ ಕಾರಣ ಶೈಕ್ಷಣಿಕ ಜಿಲ್ಲೆಯ ಎಲ್ಲ ತಾಲ್ಲೂಕು ಸೇರಿಸಿದರೂ ದುಪ್ಪಟ್ಟು ಸೀಟುಗಳು ಇಲ್ಲಿ ಲಭ್ಯವಾಗಿವೆ. ಆದರೆ ನಗರದಲ್ಲಿ 1654 ಸೀಟುಗಳು ಭರ್ತಿಯಾಗಿಲ್ಲ. ಕೇವಲ 1096 ಸೀಟುಗಳು ಮಾತ್ರ ಇಲ್ಲಿ ಭರ್ತಿಯಾಗಿವೆ. 558 ಸೀಟುಗಳು ಖಾಲಿ ಉಳಿದಿವೆ.

ಗುಬ್ಬಿ ತಾಲ್ಲೂಕಿನಲ್ಲಿ 239 ಸೀಟುಗಳು ಲಭ್ಯವಾಗಿದ್ದು, 225 ವಿದ್ಯಾರ್ಥಿಗಳು, ಕುಣಿಗಲ್ ತಾಲ್ಲೂಕಿನಲ್ಲಿ 228 ಸೀಟುಗಳಿಗೆ ಬದಲಿಯಾಗಿ 185, ತಿಪಟೂರು ತಾಲ್ಲೂಕಿನಲ್ಲಿ 290 ಸೀಟುಗಳಿಗೆ ಬದಲಿಯಾಗಿ 262 ಸೀಟುಗಳು ಭರ್ತಿಯಾಗಿದ್ದು, ಉಳಿದವು ಖಾಲಿ ಇವೆ.

`ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ಸೇರಿಸ ಬಯಸುವ ಮಕ್ಕಳು ಸಾಮಾನ್ಯ ಶಾಲೆಗಳಿಗೆ ಸೇರಿಸಲು ಇಷ್ಟಪಡುತ್ತಿಲ್ಲ. ಹೀಗಾಗಿ ಸಾಮಾನ್ಯ ಶಾಲೆಗಳಲ್ಲಿ ಸೀಟುಗಳು ಖಾಲಿ ಉಳಿಯಲು ಕಾರಣ. ಆದರೆ ಕಾಯ್ದೆಯಿಂದ ಸಾಕಷ್ಟು ಪ್ರಯೋಜನವಾಗಿದೆ. ಬಡ ಮಕ್ಕಳಿಗೂ ಪ್ರತಿಷ್ಠಿತ ಶಾಲೆಗಳು ಕೈಗೆಟುಕುವಂತಾಗಿವೆ' ಎಂದು ಡಿಡಿಪಿಐ ಮೋಹನ್ಕುಮಾರ್ ಅಭಿಪ್ರಾಯಪಟ್ಟರು.

ಶಿಕ್ಷಣ ಹಕ್ಕು ಕಾಯ್ದೆ ಕುರಿತು ಪೋಷಕರಲ್ಲಿನ ಭಯ, ಜಾಗೃತಿಯ ಕೊರತೆ ಕಾಯ್ದೆಯ ಪರಿಪೂರ್ಣ ಪ್ರಯೋಜನ ಬಡ ಜನರಿಗೆ ಸಿಗದಂತೆ ಮಾಡಿದೆ.
ಬಡವರು, ಪೋಷಕರಲ್ಲಿ ಶಿಕ್ಷಣ ಇಲಾಖೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಡಿವೈಎಫ್ಐ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ರಾಘವೇಂದ್ರ ಹೇಳಿದರು.

ಶುಲ್ಕ ಎಷ್ಟು?
ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ ಪಡೆದ ಮಕ್ಕಳಿಂದ ಖಾಸಗಿ ಶಾಲೆಗಳು ಬೇಕಾಬಿಟ್ಟಿ ಶುಲ್ಕ ವಸೂಲು ಮಾಡುವಂತಿಲ್ಲ. ಬೇರೆ ಬೇರೆ ರೂಪದ ವಂತಿಗೆ ಪಡೆಯುವಂತಿಲ್ಲ. ಮಕ್ಕಳ ತಲಾ ವೆಚ್ಚದ ಮೇಲೆ ಶುಲ್ಕ ವಸೂಲಿಯ ಮಾನದಂಡ ರೂಪಿಸಲಾಗಿದೆ. ಉದಾಹರಣೆಗೆ ಒಂದು ಶಾಲೆ ಬೇರೆ ಮಕ್ಕಳಿಂದ ಒಂದು ಲಕ್ಷ ಶುಲ್ಕ ವಸೂಲಿ ಮಾಡುವಂತಿದ್ದರೆ, ಅದೇ ಶಾಲೆಯ ಆರ್ಟಿಇ ಅಡಿ ಸೇರಿದ ಮಕ್ಕಳಿಗೆ 11 ಸಾವಿರ ರೂಪಾಯಿ ಶುಲ್ಕ ಪಡೆಯಬೇಕು. ಈ ಶುಲ್ಕ ಕೂಡ ಆ ಶಾಲೆಗೆ ಸರ್ಕಾರವೇ ನೇರವಾಗಿನೀಡಲಿದೆ. ಪೋಷಕರು ಭರಿಸಬೇಕಾಗಿಲ್ಲ.

ವ್ಯವಸ್ಥೆ ಸರಿ ಇಲ್ಲ
ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು, ಕಾಯ್ದೆ ಲಾಭ ಪಡೆಯಲು ಪೋಷಕರು ಸಿದ್ಧರಿದ್ದಾರೆ. ಮಕ್ಕಳು ಕೂಡ ಸಿದ್ಧರಿದ್ದಾರೆ. ಶಾಲೆಗಳ ಆಡಳಿತ ಮಂಡಳಿ ಮತ್ತು ಇಲಾಖೆ ಕಾಯ್ದೆ ಪರವಾಗಿಲ್ಲ. ಕೂಲಿ ಮಾಡುವವರಿಂದ ಹಿಡಿದು ಸಣ್ಣಪುಟ್ಟ ಕೆಲಸ ಮಾಡುವವರು ನಮ್ಮ ಬಳಿ ದೂರು ತರುತ್ತಿದ್ದಾರೆ. ಪ್ರವೇಶದ ವೇಳೆ ಶಾಲಾ ಆಡಳಿತ ಮಂಡಳಿಗಳು ತೋರುತ್ತಿರುವ ವರ್ತನೆ ಅವರನ್ನು ಹಿಂಜರಿಯುವಂತೆ ಮಾಡುತ್ತಿದೆ. ಶಾಲಾ ಆಡಳಿತ ಮಂಡಳಿಗಳು, ಶಿಕ್ಷಣ ಇಲಾಖೆ ಭರವಸೆ ತುಂಬುವ, ಮುಕ್ತವಾಗಿ ಪ್ರವೇಶ ಮಾಡಿಕೊಳ್ಳುವ ವಾತಾವರಣ ನಿರ್ಮಿಸಿದರೆ ಪ್ರವೇಶಕ್ಕೆ ನೂಕುನುಗ್ಗಲು ಕಂಡು ಬರಲಿದೆ ಎಂದು ಶಿಕ್ಷಣ ತಜ್ಞ ದೊರೈರಾಜ್ ಪ್ರತಿಕ್ರಿಯಿಸಿದರು.

ಯಾರಿಗೆ ಎಷ್ಟು ಲಾಭ

ಆರ್ಟಿಇ ಅಡಿ ಪರಿಶಿಷ್ಟ ಜಾತಿಯ 429, ಪರಿಶಿಷ್ಟ ಪಂಗಡದ 174 ಹಾಗೂ ಹಿಂದುಳಿದ ವರ್ಗಗಳ 1465 ಮಕ್ಕಳು ಪ್ರವೇಶ ಪಡೆದಿದ್ದಾರೆ. ಹೆಣ್ಣು ಮಕ್ಕಳಿಗಿಂತ ಬಾಲಕರು ಪ್ರಯೋಜನ ಪಡೆದಿದ್ದಾರೆ. 1113 ಬಾಲಕರು, 955 ಬಾಲಕಿಯರು ದಾಖಲಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.