ಶನಿವಾರ, ಜೂನ್ 19, 2021
28 °C

21 ಪುಟಗಳ ಆರೋಪಪಟ್ಟಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌(ಪಿಟಿಐ): ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೊಭ್ರಗಡೆ ವಿರುದ್ಧ ಇಲ್ಲಿನ ಮ್ಯಾನ್‌­ಹಟನ್‌ನಲ್ಲಿರುವ ಭಾರತ  ಮೂಲದ ಅಮೆರಿಕದ ಅಟಾರ್ನಿ ಪ್ರೀತ್ ಭರಾರ, 21 ಪುಟಗಳ ಹೊಸ ಆರೋಪ­ಪಟ್ಟಿ ಸಲ್ಲಿಸಿದ್ದಾರೆ.ಇದರ ಆಧಾರದಲ್ಲಿ ದೇವ­ಯಾನಿ ವಿರುದ್ಧ ವೀಸಾ ವಂಚನೆ ಮತ್ತು ತಪ್ಪು ಮಾಹಿತಿ ಕುರಿತಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ­ಕೊಳ್ಳ­ಲಾಗಿದೆ.ಈ ಕುರಿತು ಜಿಲ್ಲಾ ನ್ಯಾಯಾಧೀಶ ವಿಲಿಯಂ ಪಾಲ್ ಅವರಿಗೆ ಬರೆದ ಪತ್ರ­ದಲ್ಲಿ, ‘ದೇವಯಾನಿ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿ­ದ್ದು ಬಂಧಿ­­­­ಸಿದ ತಕ್ಷಣ ನ್ಯಾಯಾಲ­ಯಕ್ಕೆ ತಿಳಿಸ­­ಲಾಗು­ವುದು’ ಎಂದು ತಿಳಿಸಿದ್ದಾರೆ.ಆದರೆ, ದೇವಯಾನಿ ಸದ್ಯಕ್ಕೆ ವಿಚಾ­ರಣೆಗೆ ಲಭ್ಯವಿಲ್ಲ. ಆಕೆ ಎಲ್ಲಿರುವರೆಂದು ಗೊತ್ತಿದ್ದರೂ  ನ್ಯಾಯಾಲಯದ ಎದುರು ಹಾಜರುಪಡಿಸಲು ಸಾಧ್ಯ­ವಿಲ್ಲ. ಆಕೆ ವಿಚಾರಣೆಗೆ ಹಾಜರಾಗಲು ಇಲ್ಲಿಗೆ ಮರಳಿ ಬರಲು ನಿರಾಕರಿಸ­ಬ­ಹುದು ಎಂದು ಅವರು ಅಸಹಾಯ­ಕತೆ ವ್ಯಕ್ತಪಡಿಸಿದ್ದಾರೆ.ಮಗಳನ್ನು ಶಾಲೆಗೆ ಕಳಿಸಿ ಮರಳಿ ಬರು­­ವಾಗ ಅಮೆರಿಕ ಪೊಲೀಸರು ನಡು­ರಸ್ತೆ­ಯಲ್ಲಿಯೇ  ರಾಜತಾಂತ್ರಿಕ ಅಧಿ­ಕಾರಿ­ ­­ದೇವ­ಯಾನಿ ಅವರಿಗೆ ಕೈಕೋಳ ತೊಡಿಸಿ ಬಂಧಿಸಿ ಕರೆದೊಯ್ದಿದ್ದರು. ಈ ಘಟನೆ ಅಮೆರಿಕ ಮತ್ತು ಭಾರತ ಮಧ್ಯೆ ರಾಜ­ತಾಂತ್ರಿಕ ಬಿಕ್ಕಟ್ಟಿಗೆ ಕಾರಣ­ವಾಗಿದೆ.ದೋಷಾರೋಪದಲ್ಲಿ ಹೊಸದೇನಿದೆ?

ಮನೆಕೆಲಸದ ಸಹಾ­ಯಕಿ ಸಂಗೀತಾ ರಿಚರ್ಡ್ಸ್‌ ಅವರ ವೀಸಾ ಪಡೆಯಲು ದೇವ­ಯಾನಿ ಉದ್ದೇಶ­­ಪೂರ್ವಕವಾಗಿ ಅಮೆ­ರಿಕ ಅಧಿಕಾರಿ­ಗಳಿಗೆ ಅನೇಕ ತಪ್ಪು ಮಾಹಿತಿ ನೀಡಿ, ದಾರಿ ತಪ್ಪಿಸಿದ್ದಾರೆ ಎಂದು ಹೊಸ ಆರೋಪ­ಪಟ್ಟಿಯಲ್ಲಿ ತಿಳಿಸ­ಲಾಗಿದೆ.ಅಮೆರಿಕದ ಕಾನೂನಿನ ಅನ್ವಯ ಮನೆ­ಗೆಲಸದ ಸಹಾಯಕಿಗೆ ನೀಡಬೇಕಿದ್ದ ಸಂಬಳ ನೀಡದೆ ಶೋಷಿಸಿದ್ದಾರೆ. ಆಕೆಗೆ ನೀಡುವ ಕಡಿಮೆ ಸಂಬಳದ ಬಗ್ಗೆ ತಿಳಿಸಿ­ದರೆ ವೀಸಾ ಸಿಗುವುದಿಲ್ಲ ಎಂಬ ಕಾರಣ­ಕ್ಕಾಗಿ ದೇವಯಾನಿ ಉದ್ದೇಶ­ಪೂರ್ವಕ­ವಾಗಿ ಸತ್ಯ ಮರೆಮಾಚಿದ್ದರು ಎಂದು ಆರೋಪಿಸಲಾಗಿದೆ.‘ಸಂಗೀತಾ ಪಾಸ್‌ಪೋರ್ಟ್‌ನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದ ದೇವ­ಯಾನಿ, ಮೂರು ವರ್ಷದ ಗುತ್ತಿಗೆ ಅವಧಿ ಮುಗಿದ ನಂತರ ಹಿಂತಿರುಗಿಸು­ವು­ದಾಗಿ ಹೇಳಿದ್ದರು. ಭಾರತದ ಅಧಿ­ಕಾರಿ­ಗಳು ಮತ್ತು ನ್ಯಾಯಾಲಯದ ನೆರವಿನಿಂದ ಸಂಗೀತಾ  ಅವರ ಬಾಯಿ ಮುಚ್ಚಿಸಲು ಅವರು ಯತ್ನಿಸಿದ್ದರು’ ಎಂದು ದೂರಲಾಗಿದೆ..ದೇವಯಾನಿ ಮತ್ತು ಸಂಗೀತಾ ನಡು­ವಿನ ಕರಾರುಪತ್ರ ಹಾಗೂ ಭಾರತದಲ್ಲಿ ಸಂಗೀತಾ ವಿರುದ್ಧ ದಾಖಲಾದ ಎಫ್‌ಐ­ಆರ್‌ ಪ್ರತಿಯನ್ನೂ ಭರಾರ ಆರೋಪ­ಪಟ್ಟಿಯ ಜತೆ ಲಗತ್ತಿಸಿದ್ದಾರೆ. ಅದರಲ್ಲಿ ಮನೆಕೆಲಸದ ಸಹಾಯಕಿಗೆ ಪ್ರತಿ ತಿಂಗಳು 30 ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಹೇಳಿಕೊಂಡಿ­ದ್ದಾರೆ.ಕರಾರಿನ ಅನ್ವಯ ಪ್ರತಿ ತಿಂಗಳು ಅವರು 2,70 ಲಕ್ಷ ರೂಪಾಯಿ ಸಂಬಳ ನೀಡಬೇಕಿತ್ತು. ಅಸಲಿ ಕರಾರುಪತ್ರ ಅಮೆರಿಕದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತೆ ಎಂಬ ಅರಿವಿದ್ದ ದೇವಯಾನಿ ನಕಲಿ ಕರಾರುಪತ್ರ ಸೃಷ್ಟಿಸಿದ್ದರು ಎಂದು ಭರಾರ ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.