ಬುಧವಾರ, ಜೂಲೈ 8, 2020
29 °C

23 ವರ್ಷಗಳ ನಂತರ ಬಂದ ಪಕ್ಷಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

23 ವರ್ಷಗಳ ನಂತರ ಬಂದ ಪಕ್ಷಿ!

ಕಾರವಾರ: ಜೋಯಿಡಾ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ 23 ವರ್ಷಗಳ ನಂತರ ವಯನಾಡ್ ಲಾಫಿಂಗ್ ಥ್ರಶ್ ಎಂಬ ಹೆಸರಿನ ಪಕ್ಷಿ ಕಂಡುಬಂದಿದೆ ಎಂದು ಎಂದು ಜಿಲ್ಲಾ ಪಂಚಾಯಿತಿ ಸಿಇಓ ವಿಜಯ ಮೋಹನ ರಾಜ್ ತಿಳಿಸಿದ್ದಾರೆ.ಖ್ಯಾತ ಪಕ್ಷಿತಜ್ಞ ಡಾ.ರಂಜೀತ್ ಡ್ಯಾನಿಯಲ್ ಅವರು 1988ರಲ್ಲಿ ಕ್ಯಾಸಲ್‌ರಾಕ್ ಅರಣ್ಯದಲ್ಲಿ ಈ ಪಕ್ಷಿಯನ್ನು ಗುರುತಿಸಿದ್ದರು. ನಂತರ ಕಾಣೆಯಾಗಿದ್ದ ಈ ಪಕ್ಷಿ ಪ್ರಭೇದವನ್ನು ಗೋವಾದ ಪ್ರಸನ್ನ ಪರಬ ಎಂಬುವರು  ಜೋಯಿಡಾದ ಡಿಗ್ಗಿ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಗುರುತಿಸಿದಾರೆ.ಎರಡು ದಶಕಗಳ ನಂತರ ಕಂಡುಬಂದ ಈ ಪಕ್ಷಿಯ ಇರುವಿಕೆ ಈ ಅರಣ್ಯ ಪ್ರದೇಶದ ಪಕ್ಷಿ ವೈವಿಧ್ಯತೆಯ ಮಹತ್ವವನ್ನು ಎತ್ತಿ ಹಿಡಿದಿದೆ. ಲಾಫಿಂಗ್ ಥ್ರಶ್ ಕುಟುಂಬಕ್ಕೆ ಸೇರಿದ ಈ ಪಕ್ಷಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.`ಮಲಯನ್ ನೈಟ್ ಹೆರೊನ್~, `ನೀಲಗಿರಿ ವುಡ್ ಪಿಜನ್~ ನಂತಹ ವಿರಳ ಪಕ್ಷಿಗಳನ್ನು ಪ್ರಸನ್ನ ಪರಬ ಜೋಯಿಡಾ ಅರಣ್ಯದಲ್ಲಿ ಗುರುತಿಸಿದ್ದಾರೆ. ಈ ಪ್ರದೇಶವು ದಾಂಡೇಲಿ- ಅಣಶಿ ಹುಲಿ ಸಂರಕ್ಷಿತ ಯೋಜನೆ ವ್ಯಾಪ್ತಿಗೆ ಹಾಗೂ ಗೋವಾದ ಮೋಲೆಮ್ ಅಭ ಯಾರಣ್ಯಕ್ಕೆ ಹೊಂದಿಕೊಂಡಿದ್ದು `ಮಲಬಾರ್ ಟ್ರೆಗೋನ್~, `ಗ್ರೇಹೆಡೆಡ್ ಬುಲ್ ಬುಲ್~, `ರೂಬಿಥ್ರೋಟೆಡ್  ಬುಲ್ ಬುಲ್~ ಪಕ್ಷಿಗಳು ಈ ಪ್ರದೇಶ ದಲ್ಲಿ ಮಾತ್ರ ಕಂಡು ಬರುತ್ತವೆ ಎನ್ನುತ್ತಾರೆ ವಿಜಯ ಮೋಹನರಾಜ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.