ಶನಿವಾರ, ಜನವರಿ 25, 2020
16 °C

26ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

26ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ

ಬೆಂಗಳೂರು: ದೇಶ, ವಿದೇಶಗಳ ವಿವಿಧ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ‘6ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ ಇದೇ 26ರಿಂದ ಜನವರಿ 2ರವರೆಗೆ ನಗರದಲ್ಲಿ ನಡೆಯಲಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಘಟಿಸಿರುವ ಚಲನಚಿತ್ರೋತ್ಸವಕ್ಕೆ ವಾರ್ತಾ ಇಲಾಖೆ ಮತ್ತು  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗ ನೀಡಿವೆ.ಒಟ್ಟು 45 ದೇಶಗಳ 150 ಚಲನ ಚಿತ್ರಗಳು ಪ್ರದರ್ಶನವಾಗಲಿದೆ. ಕನ್ನಡದ 10, ಕರ್ನಾಟಕದ ಉಪಭಾಷೆಗಳ 2, ಡಾ.ರಾಜಕುಮಾರ್‌ ವಿಶೇಷ 5, ಭಾರತೀಯ ಚಿತ್ರರಂಗದ 10,  ತೈವಾನ್‌ ಮತ್ತು ಜರ್ಮನಿಯ 10, ದಕ್ಷಿಣ ಅಮೆ ರಿಕದ 7, ರೈಲು ಚಿತ್ರಗಳ ವಿಶೇಷ ವಿಭಾ ಗದ 5  ಸೇರಿದಂತೆ ವಿವಿಧ ಭಾಷೆಯ ಚಲನಚಿತ್ರಗಳು ಪ್ರದರ್ಶನವಾಗಲಿವೆ.ಬರ್ಲಿನ್‌, ಕಾನ್‌, ಕಾರ್ಲೋವಿವಾರಿ, ಮಾಸ್ಕೋ, ವೆನಿಸ್‌, ಟೊರೆಂಟೊ ಮುಂತಾದ ಮಹತ್ವದ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪಡೆದ ಪ್ರಮುಖ ಚಲನ ಚಿತ್ರಗಳು ಇಲ್ಲಿ ಪ್ರದರ್ಶನವಾಗಲಿವೆ. ಈ ವರ್ಷದ ಆಸ್ಕರ್‌ ಪ್ರಶಸ್ತಿಗೆ ಪೈಪೋಟಿ ನಡೆಸುತ್ತಿರುವ ವಿವಿಧ ದೇಶಗಳ 14 ಚಲನಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶಿಸುತ್ತಿರುವುದು ವಿಶೇಷವಾಗಿದೆ.ಈ ವರ್ಷದ ಕನ್ನಡ ಚಿತ್ರಗಳ ವಿಶೇಷ ವಿಭಾಗದಲ್ಲಿ ಡಾ.ರಾಜಕುಮಾರ್‌ ಅವರ ನೆನಪಿನಲ್ಲಿ ವೈವಿಧ್ಯಪೂರ್ಣ ಪಾತ್ರ ನಿರ್ವಹಣೆಯ 5 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಈ ಬಾರಿ ಚಲ ನಚಿತ್ರೋತ್ಸವದಲ್ಲಿ ಸಂಖ್ಯೆಗಿಂತ ಗುಣ ಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ವಾರ್ತಾ ಇಲಾಖೆಯ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಭಾನು ವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಏಷ್ಯಾ, ಭಾರತೀಯ ಮತ್ತು ಕನ್ನಡ ಸಿನಿಮಾಗಳಿಗೆ ಪ್ರತ್ಯೇಕ ಸ್ಪರ್ಧೆಯ ವಿಭಾಗಗಳನ್ನು ಮಾಡಲಾಗಿದೆ. ಈ ವರ್ಷದ ಕನ್ನಡ ಸಿನಿಮಾ ಸ್ಪರ್ಧೆಯಲ್ಲಿ ಮೂರು ಪ್ರಶಸ್ತಿಗಳನ್ನು ನೀಡಲಾಗು ವುದು. ಎರಡು ಕನ್ನಡ ಚಲನಚಿತ್ರಗಳಿಗೆ ಭಾರತೀಯ ಮತ್ತು ಏಷ್ಯನ್‌ ಚಲನಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದ ಉಪಭಾಷೆ ಗಳಲ್ಲಿ ತಯಾರಾದ ಚಿತ್ರಗಳಿಗೆ ವಿಶೇಷ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ತುಳು ಮತ್ತು ಬಂಜಾರ ಭಾಷೆಗಳ ಚಿತ್ರ ಗಳು ಈ ವರ್ಷದ ಚಿತ್ರೋತ್ಸವದಲ್ಲಿವೆ. ಈ ಬಾರಿ ಶೇ. 80ಕ್ಕೂ ಹೆಚ್ಚಿನ ಚಲನ ಚಿತ್ರಗಳು ಡಿಜಿಟಲ್ ರೂಪದಲ್ಲಿವೆ ಎಂದು ವಿವರಿಸಿದರು.ವಿಶ್ವವಿಖ್ಯಾತ ನಿರ್ದೇಶಕರಾದ ಆಂದ್ರೆ ವಜಡ, ಅಸ್ಗರ್‌ ಫರಾದಿ, ಇಸ್ತ್ವಾನ್‌ ಜಾಬೋ, ಫ್ರಾನ್ಸ್ವಾ ಓಜೋನ್‌, ಸುಸಾನ್‌ ಬ್ಲೈರ್‌, ಗೊರಾನ್‌ ಪಾಸ್ಕಯ ವಿಚ್‌ ಮೈಕ್‌ ಲೈ, ಡೆನ್ನಿಸ್‌ ಕ್ಲೇಯರ್‌ ಮುಂತಾದವರ ಚಿತ್ರಗಳು ಪ್ರದರ್ಶನ ವಾಗಲಿವೆ ಎಂದು ವಿಶುಕುಮಾರ್‌ ತಿಳಿಸಿದರು. ಈ ಬಾರಿ ಕನ್ನಿಂಗ್‌ಹ್ಯಾಮ್ ರಸ್ತೆಯ ಫನ್‌ಸಿನಿಮಾಸ್‌ನ ಮೂರು ಪರದೆಗಳು, ಹಲಸೂರಿನ ಲಿಡೋ ಐನಾಕ್ಸ್‌ನ   ಎರಡು ಪರದೆಗಳು, ವಾರ್ತಾ ಇಲಾಖೆ ಯ ಸುಲೋಚನ ಚಿತ್ರಮಂದಿರ ಹಾಗೂ ಬಾದಾಮಿ ಹೌಸ್‌ನ ಪ್ರಿಯದ ರ್ಶಿನಿ ಚಿತ್ರಮಂದಿರದಲ್ಲಿ ಪ್ರದರ್ಶನಗಳು ನಡೆಯಲಿವೆ ಎಂದು ತಿಳಿಸಿದರು.ಪ್ರತಿನಿಧಿಗಳ ನೋಂದಾವಣಿ: ಪ್ರತಿನಿಧಿ ಗಳ ನೋಂದಣಿ ಡಿ.2ರಿಂದ ಆರಂಭ ವಾಗಲಿದ್ದು, ಸಾಮಾನ್ಯ ಪ್ರತಿನಿಧಿಗಳಿಗೆ ₨ 500, ವಿದ್ಯಾರ್ಥಿಗಳಿಗೆ ಮತ್ತು ಫಿಲಂ ಸೊಸೈಟಿ ಸದಸ್ಯರಿಗೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರಿಗೆ ₨250 ನಿಗದಿಪಡಿಸಲಾಗಿದೆ. ಇನ್‌ಫೆಂಟ್ರಿ ರಸ್ತೆ ಯಲ್ಲಿನ ವಾರ್ತಾ ಇಲಾಖೆ, ರೇಸ್‌ ಕೋರ್ಸ್‌ ರಸ್ತೆಯಲ್ಲಿನ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಹೆಸರು ನೋಂದಣಿ ಮಾಡಬಹುದು.  www.Biffes.in ವೆಬ್‌ಸೈಟ್‌ನಲ್ಲೂ ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಬಹುದು.

ಚಲನಚಿತ್ರೋತ್ಸವಕ್ಕೆ ₨ 2 ಕೋಟಿ

‘6ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋ ತ್ಸವ’ದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನು ವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಚಲ ನಚಿತ್ರೋತ್ಸವಕ್ಕೆ ಸರ್ಕಾರ ₨ 2 ಕೋಟಿ ಅನುದಾನ ನೀಡಿದೆ.

ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನಟ ಕಮಲಹಾಸ್‌ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಉತ್ಸವದ ಕಲಾತ್ಮಕ ನಿರ್ದೇಶಕ ಎನ್‌.ಎನ್‌. ನರಹರಿ ರಾವ್‌, ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು, ನಟಿ ಜಯ ಮಾಲಾ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)