ಬುಧವಾರ, ಮೇ 19, 2021
22 °C

3ವರ್ಷಕ್ಕೆ 200ಘಟಕ: `ಮೈ ಟಿವಿಎಸ್' ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮೈ ಟಿವಿಎಸ್' ಬ್ರಾಂಡ್‌ನಡಿ ಬಹು ಮಾದರಿ ಕಾರು ಸೇವಾ ಕೇಂದ್ರಗಳ ಸಂಖ್ಯೆಯನ್ನು 3 ವರ್ಷದಲ್ಲಿ 200ಕ್ಕೆ ಮುಟ್ಟಿಸುವ ಗುರಿ ಇದೆ ಎಂದು `ಟಿವಿಎಸ್ ಆಟೊಮೊಬೈಲ್ ಸಲ್ಯೂಷನ್ಸ್ ಲಿ.' ಅಧ್ಯಕ್ಷ ಸಂಜಯ್ ನಿಗಮ್ ಹೇಳಿದರು.ನಗರದಲ್ಲಿ ಗುರುವಾರ 4ನೇ(ರಾಜ್ಯದ 7ನೇ) `ಮೈ ಟಿವಿಎಸ್' ಘಟಕ ಉದ್ಘಾಟಿಸಿದ ಅವರು, 160 ಕೋಟಿ ಡಾಲರ್(ಈಗಿನ ಲೆಕ್ಕದಲ್ಲಿ ರೂ.9200 ಕೋಟಿ) ವಹಿವಾಟಿನ `ಟಿವಿಎಸ್' ಸಮೂಹದ 8 ಸಂಸ್ಥೆಗಳಲ್ಲಿ `ಮೈ ಟಿವಿಎಸ್' ಸಹ ಒಂದು. ಇದ ವಿವಿಧ ಕಂಪೆನಿಗಳ ಎಲ್ಲ ಮಾದರಿ ಕಾರಗಳಿಗೂ ಸಮಗ್ರ ಸ್ವರೂಪದ ಸೇವೆ ಒದಗಿಸುತ್ತಿದೆ ಎಂದು ಹೇಳಿದರು.ದೇಶದ ವಿವಿಧೆಡೆ ಮೈ ಟಿವಿಎಸ್ 79 ಘಟಕಗಳಿವೆ. 36 ಸ್ವಂತದ್ದು, 31 ಫ್ರಾಂಚೈಸಿ ಮತ್ತು 12 ಪಾಲುದಾರಿಕೆಯವು. ಇವುಗಳಲ್ಲಿ 2800 ಮಂದಿಗೆ ಉದ್ಯೋಗ ದೊರಕಿದೆ. ಒಟ್ಟು 3.38 ಲಕ್ಷ ಕಾಯಂ ಗ್ರಾಹಕ ಸಮೂಹವಿದೆ. ಸ್ಕ್ಯಾನರ್ ಸೇರಿದಂತೆ ಅತ್ಯಾಧುನಿಕ  ಯಾಂತ್ರಿಕ ಸಲಕರಣೆ ಒಳಗೊಂಡಿದ್ದು, ಕಂಪೆನಿಗಳ ಅಧಿಕೃತ ಸೇವಾ ಕೇಂದ್ರಗಳಿಗಿಂತ ಶೇ 20ರಿಂದ 25ರಷ್ಟು ಕಡಿಮೆ ದರದಲ್ಲಿ ಸೇವೆ ನೀಡುತ್ತಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.