ಶನಿವಾರ, ಜೂನ್ 19, 2021
27 °C

3 ದಿನಗಳ ಫೌಂಡ್ರಿ ಕಾಂಗ್ರೆಸ್‌ಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರು ಇರುವ ಕರ್ನಾಟಕದಲ್ಲಿ ಎರಕದ ಉದ್ಯಮ  ಉತ್ತೇಜಿಸಲು  ದಾಬಸ್‌ಪೇಟೆಯಲ್ಲಿ `ಫೌಂಡ್ರಿ ಕ್ಲಸ್ಟರ್~ ಅನ್ನು ಮುಂದಿನ ಆರು ತಿಂಗಳಲ್ಲಿ ಸ್ಥಾಪಿಸಲಾಗುತ್ತಿದೆ.ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಶುಕ್ರವಾರ  ಆರಂಭವಾದ ಮೂರು ದಿನಗಳ 60ನೇ ಇಂಡಿಯನ್ ಫೌಂಡ್ರಿ ಕಾಂಗ್ರೆಸ್ ಉದ್ಘಾಟಿಸಿದ ರಾಜ್ಯ ಕೈಗಾರಿಕಾ ಸಚಿವ  ಮುರುಗೇಶ್ ಆರ್. ನಿರಾಣಿ ಅವರು ಈ ವಿಷಯ ತಿಳಿಸಿದರು.ಉದ್ದೆೀಶಿತ `ಫೌಂಡ್ರಿ ಪಾರ್ಕ್~ನಲ್ಲಿ  ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ತರಬೇತಿ ಕೇಂದ್ರಗಳನ್ನು  ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ಈಗಾಗಲೇ ಚಾಲನೆಯಲ್ಲಿ ಇರುವ ಬೆಳಗಾವಿಯ ನಂತರದ  ಎರಡನೇಯ ಕೈಗಾರಿಕಾ ವಸಾಹತು ಎನಿಸಿಕೊಳ್ಳಲಿದೆ.ಉದ್ಯಮದ ಉತ್ತೇಜನಕ್ಕೆ ನೀಡಲಾಗಿರುವ ಹಲವಾರು ಯೋಜನೆಗಳ ಪ್ರಯೋಜನವನ್ನು ಫೌಂಡ್ರಿ ಉದ್ಯಮ ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಕಿರು, ಸಣ್ಣ ಹಾಗೂ ಮಧ್ಯಮ  ಉದ್ದಿಮೆ ಕಾರ್ಯದರ್ಶಿ ಆರ್.ಕೆ.ಮಾಥುರ್ ಸಲಹೆ ನೀಡಿದರು. ಐಐಎಫ್ ಅಧ್ಯಕ್ಷ ಡಾ.ಎಚ್.ಸುಂದರ ಮೂರ್ತಿ ಮತ್ತಿತರರು ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.