ಸೋಮವಾರ, ಮಾರ್ಚ್ 8, 2021
29 °C

3 ಸ್ಪಾರ್ಕ್‌ಪ್ಲಗ್‌ನ ಪಲ್ಸರ್ 200ಎನ್‌ಎಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

3 ಸ್ಪಾರ್ಕ್‌ಪ್ಲಗ್‌ನ ಪಲ್ಸರ್ 200ಎನ್‌ಎಸ್

ಬೆಂಗಳೂರು: ಮೂರು ಸ್ಪಾರ್ಕ್ ಪ್ಲಗ್ ಇರುವ, ಸಿಂಗಲ್ ಓವರ್‌ಹೆಡ್ ಕಾಮ್‌ಷಾಫ್ಟ್-4 ವಾಲ್ವ್‌ಗಳ, 200 ಸಿಸಿ ಸಾಮರ್ಥ್ಯದ ಮೋಟಾರ್ ಬೈಕನ್ನು ಬಜಾಜ್ ಆಟೊ ಲಿ. ಕರ್ನಾಟಕದ ಮಾರುಕಟ್ಟೆಗೆ ಸೋಮವಾರ ಪರಿಚಯಿಸಿತು.

`ಯುವಸಮೂಹವನ್ನೇ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿರುವ ಪಲ್ಸರ್ 200 ಎನ್‌ಎಸ್ ವಿಶೇಷ ವಿನ್ಯಾಸದ್ದಾಗಿದೆ. ಸ್ಪೋರ್ಟ್ ಬೈಕ್‌ಗಳಲ್ಲಿಯೇ ಉತ್ಕೃಷ್ಟವಾಗಿರುವಂತೆ ಇದನ್ನು ತಯಾರಿಸಲಾಗಿದೆ~ ಎಂದು ಬಜಾಜ್ ಆಟೊ ಲಿ.ನ ಮಾರಾಟ ಮತ್ತು ಸರ್ವಿಸ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಆರ್.ಚಂದ್ರಶೇಖರ್ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಜಾಜ್ ಪಲ್ಸರ್ 200ಎನ್‌ಎಸ್ ಮತ್ತು ಬಜಾಜ್ ಡಿಸ್ಕವರ್ 125 ಎಸ್‌ಟಿ ಮೋಟಾರ್‌ಗಳನ್ನು ಬಿಡುಗಡೆ ಮಾಡಿದ ಅವರು, ಬೆಂಗಳೂರಿನಲ್ಲಿ ಈ ಎರಡೂ ಬೈಕ್‌ಗಳ ಎಕ್ಸ್‌ಷೋರೂಂ ಬೆಲೆ ಕ್ರಮವಾಗಿ ರೂ. 85,863 ಮತ್ತು ರೂ. 54983ರಷ್ಟಿದೆ ಎಂದರು.

`ಟ್ರಿಪಲ್ ಸ್ಪಾರ್ಕ್ ಎಂಜಿನ್~ ನಮ್ಮದೇ ಸಂಶೋಧನೆ-ಅಭಿವೃದ್ಧಿಯಾಗಿದ್ದು, ಮೊದಲಿಗೆ ಪಲ್ಸರ್ ಬೈಕ್‌ನಲ್ಲಿ ಮಾತ್ರ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕಂಪೆನಿಯ ಇತರೆ ಮಾದರಿ ಬೈಕ್‌ಗಳಿಗೂ ಅಳವಡಿಸಲಾಗುವುದು ಎಂದರು.ಈ ಎರಡೂ ಬೈಕ್ ಈಗಾಗಲೇ ಮಹಾರಾಷ್ಟ್ರದಲ್ಲಿ ಬಿಡುಗಡೆಯಾಗಿದ್ದು, ಎರಡನೇ ಹಂತದಲ್ಲಿ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.