ಶನಿವಾರ, ಜುಲೈ 24, 2021
27 °C

4ನೇ ಹಂತದ ಚುನಾವಣೆ ಶೇ 84.8ರಷ್ಟು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ  ಮಂಗಳವಾರ ನಡೆದ ನಾಲ್ಕನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಶೇ 84.8ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

‘ಈ ಹಿಂದೆ ನಡೆದ 3 ಹಂತದ ಚುನಾವಣೆಯಂತೆ ನಾಲ್ಕನೇ ಹಂತವೂ ಶಾಂತಿಯುತವಾಗಿ ನಡೆಯಿತು’ ಎಂದು  ಉಪ ಚುನಾವಣಾ ಆಯುಕ್ತ ವಿನೋದ್ ಜುಟ್ಶಿ ತಿಳಿಸಿದ್ದಾರೆ.ಹೌರಾ, ಹೂಗ್ಲಿ, ಪಶ್ಚಿಮ ಮಿಡ್ನಾಪುರ ಮತ್ತು ಭುರ್ದ್ವಾನ್ ಜಿಲ್ಲೆಯ ಕೆಲವು ಭಾಗಗಳ ಒಟ್ಟು 63 ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಚುನಾವಣೆ ನಡೆದಿದೆ.2006ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಶೇ 83.19ರಷ್ಟು ಮತದಾನವಾಗಿತ್ತು. ಚುನಾವಣೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಚುನಾವಣಾ ಆಯೋಗವು ಬಿಹಾರ ಮತ್ತು ಒಡಿಶಾದ ಮುಖ್ಯ ಚುನಾವಣಾ ಆಯುಕ್ತರನ್ನು ವೀಕ್ಷಕರನ್ನಾಗಿ ನೇಮಿಸಿತ್ತು.ಅಭಿವೃದ್ಧಿ ವಿಚಾರ ಮುಂದಿಟ್ಟು ನಾಲ್ಕು ಮತಗಟ್ಟೆಗಳಲ್ಲಿ ಜನರು ಚುನಾ ವಣೆ ಬಹಿಷ್ಕರಿಸಿದ್ದಾರೆ. ಚುನಾವಣಾ ವೀಕ್ಷಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಇಬ್ಬರು ಮತಗಟ್ಟೆ ಅಧಿಕಾರಿಗಳನ್ನು ಚುನಾವಣಾ ಆಯೋಗ ಈ ಕರ್ತವ್ಯದಿಂದ ತೆಗೆದುಹಾಕಿದೆ.ಎಡರಂಗ ನಿರ್ನಾಮ: ಮಮತಾ ಭವಿಷ್ಯ- (ನಾರಾಯಣಗಡ ವರದಿ): ಚುನಾವಣೆ ಬಳಿಕ ರಾಜ್ಯದಲ್ಲಿ ಎಡರಂಗ ಸಂಪೂರ್ಣವಾಗಿ ನಿರ್ನಾಮವಾಗಲಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ.ಪಶ್ಚಿಮ ಮಿಡ್ನಾಪುರ ಜಿಲ್ಲೆಯ ನಾರಾಯಣಗಡದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಮಂಗಳವಾರ ಚುನಾವಣೆ ನಡೆದ ಒಟ್ಟು  63 ಕ್ಷೇತ್ರಗಳಲ್ಲಿ ತಮ್ಮ ಪಕ್ಷ ಎಷ್ಟು ಸ್ಥಾನ ಗೆಲ್ಲಬಹುದು ಎಂದು ಹೇಳಲಿಲ್ಲ.ಈ ಮೊದಲು ಒಟ್ಟು 179 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ನಡೆದಿದ್ದ ಚುನಾವಣೆಯಲ್ಲಿ ತೃಣಮೂಲ ಮೈತ್ರಿ ಕೂಟ ಒಟ್ಟು 170 ಸ್ಥಾನಗಳನ್ನು ಗೆಲ್ಲಲಿದೆ ಎಂದು ಮಮತಾ ಭವಿಷ್ಯ ನುಡಿದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.