ಷಿಕಾಗೊ (ಪಿಟಿಐ): ಟ್ಯಾಕ್ಸಿಗೆ ಹಣ ಕೊಡದ ಮಹಿಳೆಯೊಬ್ಬರಿಗೆ ವಾಹನದಲ್ಲಿ ಕ್ರಮಿಸಿದ 48 ಕಿ.ಮೀ. ದೂರವನ್ನು 48 ಗಂಟೆಯಲ್ಲಿ ನಡೆದುಕೊಂಡು ಹೋಗುವಂತೆ ಇಲ್ಲಿನ ನ್ಯಾಯಾಲಯವೊಂದು ಆದೇಶಿಸಿದೆ.

ತಪ್ಪಿತಸ್ಥರಲ್ಲಿ, ತಮ್ಮ ತಪ್ಪಿನ ಅರಿವು ಮೂಡಿಸುವಂತಹ ತೀರ್ಪುಗಳನ್ನು ನೀಡುವುದಲ್ಲಿ ಖ್ಯಾತರಾಗಿರುವ ನ್ಯಾಯಾಧೀಶ ಮೈಕೆಲ್ ಸಿಕೊನೆಟಿ ಈ ಆದೇಶ ನೀಡುವ ಮೂಲಕ ಮಹಿಳೆಗೆ ತಕ್ಕ ಪಾಠ ಕಲಿಸಿದ್ದಾರೆ.

ವಿಕ್ಟೋರಿಯಾ ಬಾಸ್ಕಾಂ ಎಂಬುವವರು ಕ್ಲೇವೆಲೆಂಡ್ನಿಂದ ಪೈನೆಸ್ವಿಲ್ಲೆಗೆ ಕ್ಯಾಬ್ನಲ್ಲಿ ತೆರಳಿದ್ದರು. ನಿಗದಿತ ಸ್ಥಳ ತಲುಪಿದ ನಂತರ ಆಕೆ ಹಣ ಕೊಡದೆ ಹೊರಟು ಹೋದರು ಎಂದು ಅವರ ವಿರುದ್ಧ ದೂರು ನೀಡಲಾಗಿತ್ತು.

ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರು, 30 ದಿನ ಜೈಲುವಾಸ ಅನುಭವಿಸುವ ಅಥವಾ 48 ಕಿ.ಮೀ ನಡೆದು ಹೋಗುವ ಶಿಕ್ಷೆಯ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಮಹಿಳೆಗೆ ಹೇಳಿದ್ದರು.

48 ಕಿ.ಮೀ ನಡೆಯುವುದನ್ನು ಅವರು ಆಯ್ಕೆ ಮಾಡಿಕೊಂಡಿದ್ದು, ನಾಲ್ಕು ತಿಂಗಳ ಕಾಲ ಆಕೆಯ ನಡವಳಿಕೆ ಮೇಲೆ ನಿಗಾವಹಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲೂ ಇದೇ ರೀತಿ ತಪ್ಪಿನ ಅರಿವಾಗುವಂತಹ ಶಿಕ್ಷೆಯನ್ನು ಈ ನ್ಯಾಯಾಧೀಶರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.