ಶುಕ್ರವಾರ, ಮಾರ್ಚ್ 5, 2021
26 °C

5 ಬ್ಯಾಂಕ್‌ಗಳ ನಷ್ಟ ₹2,564 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

5 ಬ್ಯಾಂಕ್‌ಗಳ ನಷ್ಟ ₹2,564 ಕೋಟಿ

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಐದು ಬ್ಯಾಂಕ್‌ಗಳ ನಷ್ಟದ ಪ್ರಮಾಣ ₹2,564 ಕೋಟಿಗಳಷ್ಟಾಗಿದೆ.ಬ್ಯಾಂಕ್‌ ಆಫ್‌ ಇಂಡಿಯಾ, ದೇನಾ ಬ್ಯಾಂಕ್, ಸೆಂಟ್ರಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ  ಮತ್ತು  ಅಲಹಾಬಾದ್‌ ಬ್ಯಾಂಕ್‌ ನಷ್ಟದಲ್ಲಿರುವ ಐದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಾಗಿವೆ.ವಸೂಲಿಯಾಗದ ಸಾಲದ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇರುವುದರಿಂದಲೇ ಈ ಬ್ಯಾಂಕ್‌ಗಳು ನಷ್ಟ ಅನುಭವಿಸುವಂತಾಗಿದೆ.ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐನ ನಿವ್ವಳ ಲಾಭವು ಶೇ 78ರಷ್ಟು ಇಳಿಕೆಯಾಗಿದೆ.   ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ನ ನಿವ್ವಳ ಲಾಭ ಶೇ 61ರಷ್ಟು ತಗ್ಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.