ಗುರುವಾರ , ಏಪ್ರಿಲ್ 15, 2021
31 °C

5.41 ಲಕ್ಷ ನೀರಿನ ಕಂದಾಯ ಬಾಕಿ

ಪ್ರಜಾವಾಣಿ ವಾರ್ತೆ/ ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ಜನರಿಂದ ಕಂದಾಯ ವಸೂಲಿ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಗಂಭೀರ ಅರೋಪಕ್ಕೆ ಒಳಗಾಗಿರುವ ನಗರಸಭೆಗೆ ನೀರಿನ ಕಂದಾಯ ಪಾವತಿ ಮಾಡದ 29 ಸರ್ಕಾರಿ ಕಟ್ಟಡಗಳು ನಗರದಲ್ಲಿ ಯಾವ ತೊಂದರೆಯೂ ಇಲ್ಲದೆ ಕೆಲಸ ಮಾಡುತ್ತಿವೆ!ಆವುಗಳಲ್ಲಿ ಬಹುತೇಕ ಕಟ್ಟಡಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಇವೆ ಎಂಬುದು ವಿಶೇಷ.

2011-12 ಮತ್ತು 2012-13ನೇ ಸಾಲಿನಲ್ಲಿ ಇಲ್ಲಿವರೆಗೆ ಬಡ್ಡಿ ಸೇರಿದಂತೆ ನಗರಸಭೆಗೆ ಈ ಕಟ್ಟಡಗಳಿಂದ ಬರಬೇಕಾದ ನೀರಿನ ಕಂದಾಯ ರೂ 5.41 ಲಕ್ಷ. ಈ ಕಟ್ಟಡಗಳ ಸಾಲಿನಲ್ಲಿ ಜ್ಲ್ಲಿಲಾಧಿಕಾರಿ ಕಚೇರಿ, ಮನೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೆ ಮತ್ತು ಕಚೇರಿಯೂ ಇವೆ ಎಂಬುದು ಗಮನಾರ್ಹ.ಜಿಲ್ಲಾ ಪಂಚಾಯತಿ ಕಾರ್ಯಪಾಲಕ ಎಂಜಿನಿಯರ್ ವಸತಿ ಗೃಹಗಳು, ಉಪವಿಭಾಗಾಧಿಕಾರಿ ಮನೆ ಮತ್ತು ಕಚೇರಿ, ಆರಣ್ಯ ಇಲಾಖೆ, ತಾಲ್ಲೂಕು ಪಂಚಾಯತಿ ಕಚೇರಿ, ತೋಟಗಾರಿಕೆ ಇಲಾಖೆ, ಕೈಗಾರಿಕೆ ಇಲಾಖೆ, ನ್ಯಾಯಾಧೀಶರ ಕಚೇರಿ, ಆಬಕಾರಿ ಆಧೀಕ್ಷಕರ ಕಚೇರಿ, ಜ್ಲ್ಲಿಲಾ ಖಜಾನಾಧಿಕಾರಿ ಕಚೇರಿ, ಪಶುಪಾಲನೆ ಇಲಾಖೆ ಉಪನಿರ್ದೇಶಕರ ಕಚೇರಿ, ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ವ್ಯವಸ್ಥಾಪಕರ ಕಚೇರಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಕಚೇರಿ, ಇಟಿಸಿಎಂ ವೃತ್ತದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ, ಮೀನುಗಾರಿಕೆ ಇಲಾಖೆ ಕಚೇರಿಗಳಿಂದ ನೀರಿನ ಕಂದಾಯ ಪಾವತಿಯಾಗಿಲ್ಲ ಎಂದು ನಗರಸಭೆ ಆಯುಕ್ತ ಮಹೇಂದ್ರಕುಮಾರ್ ಶುಕ್ರವಾರ `ಪ್ರಜಾವಾಣಿ~ಗೆ ತಿಳಿಸಿದರು.

ಒಟ್ಟು 29 ಕಟ್ಟಡಗಳ ಪೈಕಿ ಜಿಲ್ಲಾ ಕಚೇರಿ ಉಪಹಾರಗೃಹ (ರೂ 65,024), ಶೀತಲಗೃಹ (ರೂ 57,360), ಇಟಿಸಿಎಂ ವೃತ್ತದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ (ರೂ 42,026), ತೋಟಗಾರಿಕೆ ಇಲಾಖೆ (ರೂ 31,688) ಹೆಚ್ಚು ಕಂದಾಯ ಬಾಕಿ ಉಳಿಸಿಕೊಂಡಿವೆ.ಜಿಲ್ಲಾಧಿಕಾರಿಗಳ ಬಂಗಲೆ ಮತ್ತು ಕಚೇರಿಯಿಂದ ತಲಾ ರೂ 6,048 ರೂಪಾಯಿ ಕಂದಾಯ ಪಾವತಿಯಾಗಬೇಕಿದೆ. ಬಹುತೇಕ ಕಚೇರಿಗಳು ರೂ 10 ಸಾವಿರಕ್ಕಿಂತ ಹೆಚ್ಚು ಕಂದಾಯವನ್ನು ಬಾಕಿ ಉಳಿಸಿಕೊಂಡಿವೆ. ಕಂದಾಯ ವಸೂಲಿಗೆ ಕ್ರಮ ವಹಿಸಲಾಗುವುದು ಎಂದು ಆವರು ತಿಳಿಸಿದರು.2011-12ನೇ ಸಾಲಿನಲ್ಲಿ ಹೊಟೆಲ್ ಬೃಂದಾವನ ಸೇರಿದಂತೆ 30 ಸರ್ಕಾರಿ ಕಟ್ಟಡಗಳಿಂದ ರೂ 3,58,995, 2012-13ನೇ ಸಾಲಿನಲ್ಲಿ ರೂ 27 ಸಾವಿರ, ಈ ಎರಡೂ ಮೊತ್ತಕ್ಕೆ ಬಡ್ಡಿ ರೂ 1,82 ಲಕ್ಷ ಸೇರಿದಂತೆ ನೀರಿನ ಕಂದಾಯ ರೂ 5,68 ಲಕ್ಷ ಪಾವತಿಯಾಗಬೇಕಾಗಿದೆ ಎಂಬುದು ಆವರ ವಿವರಣೆ.ನ್ಯಾಯಾಲಯಕ್ಕೆ ಮೊರೆ: ನಗರದ ಬಹುತೇಕ ಸ್ಥಳಗಳಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳು, ಜಾಹೀರಾತು ಫಲಕಗಳನ್ನು ಅಳವಡಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ದೂರು ಕೊಟ್ಟು ಹಲವು ದಿನಗಳಾದರೂ ಪೊಲೀಸರು ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಕ್ರಮ ಕೈಗೊಳ್ಳುವಂತೆ ಅವರಿಗೆ ಸೂಚಿಸಬೇಕು ಎಂದು ಕೋರಿ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಲಾಗಿದೆ ಎಂದೂ ಮಹೇಂದ್ರಕುಮಾರ್ ತಿಳಿಸಿದರು.ಲಕ್ಷಾಂತರ ರೂಪಾಯಿ ಮುಂಗಡ ಹಣವನ್ನು ನಗರಸಭೆಗೆ ಪಾವತಿಸಿ ಜಾಹೀರಾತು ಫಲಕಗಳನ್ನು ಆಳವಡಿಸಬೇಕು. ಪ್ರತಿ ತಿಂಗಳೂ ನಗರಸಭೆಗೆ ಶುಲ್ಕವನ್ನೂ ಪಾವತಿಸಬೇಕು. ಆದರೆ ನಗರದಲ್ಲಿ ಜಾಹೀರಾತು ಫಲಕ ಆಳವಡಿಸಿರುವ ಯಾರೊಬ್ಬರೂ ಮುಂಗಡವನ್ನೂ ಪಾವತಿಸಿಲ್ಲ. ಶುಲ್ಕವನ್ನೂ ಪಾವತಿಸುತ್ತಿಲ್ಲ ಎಂದು ಆವರು ವಿಷಾದಿಸಿದರು.ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಮೇಲು ಸೇತುವೆ ಗೋಡೆಗಳ ಮೇಲೆ ಜಾಹೀರಾತು ಬರೆದವರ ವಿರುದ್ಧವೂ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಇಲ್ಲಿಯವರೆಗೆ ಯಾರೊಬ್ಬರ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಇದು ನಗರಸಭೆಗೆ ದೊಡ್ಡ ತೊಡಕಾಗಿದೆ ಎಂದು ಆವರು ಆಭಿಪ್ರಾಯಪಟ್ಟರು.ಅಕ್ರಮ ನಲ್ಲಿ ಸಂಪರ್ಕ ಪಡೆದವರು ರೂ 5 ಸಾವಿರ ದಂಡ ಶುಲ್ಕವನ್ನು ಪಾವತಿಸಿ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಬೇಕು ಎಂದು ಪ್ರಕಟಣೆ ಹೊರಡಿಸಿ ಹಲವು ದಿನಗಳಾಗಿವೆ. ಆದರೆ ಇದುವರೆಗೆ ಯಾರೊಬ್ಬರೂ ಮುಂದೆ ಬಂದು ದಂಡಶುಲ್ಕ ಪಾವತಿಸದಿರುವುದು ಆಚ್ಚರಿ ಮೂಡಿಸಿದೆ ಎಂದು ಆವರು ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.