ಶನಿವಾರ, ಜನವರಿ 25, 2020
27 °C

7ನಿಮಿಷದ ‘ಕುಕ್ಕಿ’ ಮುಕ್ಕುವ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಫೋರಂ ಮಾಲ್‌ನಲ್ಲಿ ಈಚೆಗೆ ಸಾಲು ಸಾಲು ಯುವಜನರು. ಪಂಕ್ತಿ ಊಟಕ್ಕೆ ಕುಳಿತಂತೆ ತಿನ್ನಲು ಸಿದ್ಧರಾಗಿದ್ದರು. ಪ್ರತಿಯೊಬ್ಬರ ಹಿಂದೆಯೂ ಎಣಿಸಲೊಬ್ಬ ನಿಂತಿದ್ದ.ಸಮಯ ಆರಂಭವಾಗುತ್ತಿದ್ದಂತೆಯೇ ಕೈ ತೋಳೇರಿಸಿದ ಹುಡುಗರು ತಮ್ಮ ಮುಂದಿದ್ದ ತಟ್ಟೆಯಿಂದ ಒಂದೊಂದೇ ಕುಕ್ಕಿಯನ್ನು ಮುಕ್ಕಲಾರಂಭಿಸಿದರು. ಗರಿಗರಿಯಾದ ಕುಕ್ಕಿಯನ್ನು ಕುರುಂ ಕುರುಂ ಎಂದು ತಿನ್ನುತ್ತಲೇ ನೀರನ್ನು ಗುಟುಕರಿಸುತ್ತಿದ್ದರು.ದಿ.ಕುಕ್ಕಿಮ್ಯಾನ್‌ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ಏಳು ನಿಮಿಷಗಳ ಅವಧಿ ನೀಡಲಾಗಿತ್ತು. ಏಳು ನಿಮಿಷಗಳಲ್ಲಿ 50 ಕುಕ್ಕಿ ತಿಂದ ಕಿರಣ್‌ ಮೊದಲ ಬಹುಮಾನದ ರೂಪದಲ್ಲಿ 10 ಸಾವಿರ ರೂಪಾಯಿ ಗಿಫ್ಟ್‌ ವೋಚರ್‌ ಪಡೆದರು. ಕೇವಲ ಒಂದೇ ಒಂದು ಕುಕ್ಕಿಯ ಅಂತರದಿಂದ ಸೋತ ಬಂಡಲ್‌ ಎಂಬುವವರು 2 ಸಾವಿರ ರೂಪಾಯಿ ಗಿಫ್ಟ್‌ ವೋಚರನ್ನು ಬಹುಮಾನವಾಗಿ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇನ್ನಿತರರಿಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

 

ಪ್ರತಿಕ್ರಿಯಿಸಿ (+)