ಬುಧವಾರ, ಆಗಸ್ಟ್ 4, 2021
27 °C

7ರಿಂದ ರಾಜ್ಯಮಟ್ಟದ ಕಬಡ್ಡಿ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ಡಿಸಿಎಂ ಟೌನ್‌ಶಿಪ್‌ನಲ್ಲಿ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ಮೇ 7 ಹಾಗೂ 8ರಂದು ನಡೆಯಲಿದೆ. ಪ್ರಥಮ ಬಹುಮಾನ ` 15 ಸಾವಿರ ಹಾಗೂ ಪಾರಿತೋಷಕ, ದ್ವಿತೀಯ ಬಹುಮಾನ ` 10 ಸಾವಿರ ಹಾಗೂ ಪಾರಿತೋಷಕ, ತೃತೀಯ ಬಹುಮಾನ ` 7 ಸಾವಿರ ಹಾಗೂ ಪಾರಿತೋಷಕ ಹಾಗೂ ನಾಲ್ಕನೇ ಬಹುಮಾನ ` 5 ಸಾವಿರ ಹಾಗೂ ಪಾರಿತೋಷಕ ನೀಡಲಾಗುವುದು.ಸರ್ವೋತ್ತಮ ಆಟಗಾರ, ಉತ್ತಮ ಧಾಳಿಗಾರ, ಉತ್ತಮ ಹಿಡಿತಗಾರನಿಗೆ ` 501, ಪಾರಿತೋಷಕ ನೀಡಲಾಗುವುದು ಎಂದು ಶ್ರೀಚಾಮುಂಡೇಶ್ವರಿ ಕ್ರೀಡಾ ಸಮಿತಿ ತಿಳಿಸಿದೆ.ಮಾಹಿತಿಗೆ ಶಂಕರ್ ಗಣೇಶ್ ಮೊ: 94487 28797, ನಾರಾಯಣಸ್ವಾಮಿ ಮೊ: 99720 49306, ಆರ್. ನಾಗರಾಜ ಮೊ: 94830 21112 ಸಂಪರ್ಕಿಸಬಹುದು.ರಕ್ತದಾನ ಮಾಡಿ, ಜೀವ ಉಳಿಸಿ: ರಕ್ತದಾನ ಮಾಡಿ ಮತ್ತೊಂದು ಜೀವವನ್ನು ಉಳಿಸಿ ಎಂದು ಹೃದಯರೋಗ ತಜ್ಞ ಡಾ.ಜಿ. ಶಿವಲಿಂಗಪ್ಪ ಸಲಹೆ ನೀಡಿದರು.ನಗರದ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ವಿಶೇಷ ಉಪನ್ಯಾಸದಲ್ಲಿ  ಅವರು ಮಾತನಾಡಿದರು.ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎನ್. ಪರಶುರಾಮನಗೌಡ, ಪ್ರಾಂಶುಪಾಲ ಡಾ.ಎಚ್.ವಿ. ಶಿವಶಂಕರ್ ಇದ್ದರು. ಪ್ರಶಿಕ್ಷಣಾರ್ಥಿ ಜ್ಯೋತಿ ಭಟ್ ಪ್ರಾರ್ಥಿಸಿದರು. ಎಂ.ವಿ. ಹರ್ಷಲತಾ ಸ್ವಾಗತಿಸಿದರು. ಕೆ.ಎಸ್. ದಿವಾಕರ ನಾಯಕ್ ವಂದಿಸಿದರು. ಸಿ.ಜಿ. ಅನಿತಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.