ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತಿ ನೃತ್ಯ, ಪೂಜೆ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಒಂಬತ್ತು ದಿನವೂ ದೇವಿಯ ಆರಾಧನೆ, ಭಜನೆ, ಸತ್ಸಂಗ, ಉಪವಾಸ ಇವು ನವರಾತ್ರಿಯ ವಿಶೇಷ.

ಗುಜರಾತಿ ಸಮುದಾಯದಲ್ಲಿ ಗರ್ಬಾ ಮತ್ತು ದಾಂಡಿಯಾ ನೃತ್ಯಗಳಿಲ್ಲದೆ ನವರಾತ್ರಿ ಪೂರ್ಣಗೊಳ್ಳುವುದಿಲ್ಲ. ಇದರಲ್ಲಿ ವಯಸ್ಸು, ಲಿಂಗಭೇದವಿಲ್ಲದೆ ಎಲ್ಲರೂ ಸಾಂಪ್ರದಾಯಿಕ ಉಡುಪು ಧರಿಸಿ ಪಾಲ್ಗೊಳ್ಳುತ್ತಾರೆ.

ಸಿಲಿಕಾನ್ ನಗರಿಯ ಗುಜರಾತಿಗಳಿಗಾಗಿ ಶ್ರೀ ಮಾ ಮಂಗಲ ಅ. 6ರ ವರೆಗೂ  ಗರ್ಬಾ, ದಾಂಡಿಯಾ ರಾಸ್ ಆಯೋಜಿಸಿದೆ. ಗುಜರಾತ್‌ನಿಂದ ಬಂದ ಪಾರಂಪರಿಕ ವಾದ್ಯಗಾರರ ವಾದನ, ಧೋಳ್ ಕಳೆಕಟ್ಟಲಿದೆ. ರಾತ್ರಿ 11.30ರ ನಂತರ ಆರತಿ.
ಸ್ಥಳ: ಪ್ರಿನ್ಸ್ ಗಾಲ್ಫ್, ಅರಮನೆ ಮೈದಾನ (ಬಳ್ಳಾರಿ ರಸ್ತೆ).

 * ನಿರ್ಮಾಣ್ ದೇವಾಲಯಗಳ ವಿಶ್ವಸ್ಥ ಮಂಡಳಿ: ಮಂಗಳವಾರ ದುರ್ಗಾ ನಮಸ್ಕಾರ ಪೂಜೆ. ಬುಧವಾರ ಮಹಾಸುದರ್ಶನ ಪೂಜೆ, ಗುರುವಾರ ವಿದ್ಯಾಗೋಪಾಲ ಪೂಜೆ.
ಸ್ಥಳ: ನಿಸರ್ಗ ಬಡಾವಣೆ, ಬನ್ನೇರುಘಟ್ಟ ರಸ್ತೆ. ನಿತ್ಯ ಬೆಳಿಗ್ಗೆ 9.30.

* ದಿ ಆರ್ಟ್ ಆಫ್ ಲಿವಿಂಗ್: ಮಂಗಳವಾರ ಬೆಳಿಗ್ಗೆ 7ಕ್ಕೆ ಶತಚಂಡಿ ಹೋಮ, ಬುಧವಾರ ಬೆಳಿಗ್ಗೆ 9ಕ್ಕೆ ಗುರುದೇವತಾ ಪೂಜೆ. ಗುರುವಾರ ಬೆಳಿಗ್ಗೆ 9ಕ್ಕೆ  ವಿಜಯ ದಶಮಿ ಪೂಜೆ. ನಿತ್ಯ ಸಂಜೆ 6ಕ್ಕೆ ಲಲಿತಾ ಸಹಸ್ರನಾಮ ಪಾರಾಯಣ.
ಸ್ಥಳ: ಕನಕಪುರ ಮುಖ್ಯ ರಸ್ತೆ, ಉದಯಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT