ನವೀನ ಗಂಗೋತ್ರಿ
ನವೀನ ಗಂಗೋತ್ರಿ ಅವರ ಊರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ. ಪಾಣಿನಿಯ ವ್ಯಾಕರಣದಲ್ಲಿ ಪಿಎಚ್.ಡಿ. ಪದವಿ. ಪ್ರಾಧ್ಯಾಪನವು ವೃತ್ತಿಕ್ಷೇತ್ರ. ಪ್ರಸ್ತುತ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಭಾರತೀಯ ಜ್ಞಾನಪರಂಪರಾ ಕೇಂದ್ರದಲ್ಲಿ ಸಹಾಚಾರ್ಯರಾಗಿ ಕಾರ್ಯನಿರತರು. ಇವರ ಕಥೆ, ವೈಚಾರಿಕ ಮತ್ತು ಸಾಂದರ್ಭಿಕ ಲೇಖನಗಳು ಹಾಗೂ ಅನುವಾದಗಳನ್ನು ನಾಡಿನ ಪ್ರಮುಖ ಪತ್ರಿಕೆಗಳು ಮತ್ತು ಪ್ರಕಾಶನ ಸಂಸ್ಥೆಗಳು ಪ್ರಕಟಿಸಿವೆ. ‘ಸಂಕ’ ಮತ್ತು ‘ಕಥಾಗತ’ – ಇವೆರಡು ಕಥಾಸಂಕಲನಗಳ ಜೊತೆಗೆ ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಅನುವಾದಗಳು ಸೇರಿದಂತೆ ಐದು ಪುಸ್ತಕಗಳನ್ನು ಹೊರತಂದಿದ್ದಾರೆ.