ಗುರುವಾರ , ಆಗಸ್ಟ್ 13, 2020
23 °C

ಜುಲೈಗೆ ಹೊಸ ಹೋಂಡಾ ಸಿಟಿ: ಗರಿಷ್ಠ ಸುರಕ್ಷತೆ ಭರವಸೆ

ಪಿಟಿಐ Updated:

ಅಕ್ಷರ ಗಾತ್ರ : | |

ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿ

ನವದೆಹಲಿ: ಐದನೇ ಪೀಳಿಗೆಯ ಹೊಸ ಹೋಂಡಾ ಸಿಟಿ ಕಾರ್‌ ಜುಲೈನಲ್ಲಿ ಬಿಡುಗಡೆ ಆಗಲಿದ್ದು, ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎಂದು ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿ ತಿಳಿಸಿದೆ.

ಅಲೆಕ್ಸಾದೊಂದಿಗೆ ಸಂಪರ್ಕಿತ ದೇಶದ ಮೊದಲ ಕಾರ್‌ ಇದಾಗಿದ್ದು, ಬಿಎಸ್‌ 6ನ ಪೆಟ್ರೋಲ್‌ ಮತ್ತು ಡೀಸೆಲ್‌ ಮಾದರಿಗಳಲ್ಲಿ ಲಭ್ಯವಿರಲಿದೆ.

1.5 ಲೀಟರ್‌ ಪೆಟ್ರೋಲ್‌ ಎಂಜಿನ್‌, 6 ಸ್ಪೀಡ್ ಮ್ಯಾನುಯಲ್‌ ಮತ್ತು 7 ಸ್ಪೀಡ್‌ ಸಿವಿಟಿ ಆಯ್ಕೆಗಳಲ್ಲಿ ಇರಲಿದೆ. 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ 6 ಸ್ಪೀಡ್ ಮ್ಯನುಯಲ್‌ ಟ್ರಾನ್ಸ್‌ಮಿಷನ್‌ ಹೊಂದಿದೆ. 2.3 ಸಿ.ಎಂ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ಇರುವ ಆಡಿಯೊ ಸಿಸ್ಟಂ, ಸ್ಮಾರ್ಟ್‌ಫೋನ್‌ನೊಂದಿಗೆ ಸಂಪರ್ಕ ಹೊಂದಿರಲಿದೆ. 6 ಏರ್‌ಬ್ಯಾಗ್‌, ಮಲ್ಟಿ ಆ್ಯಂಗಲ್‌ ರೇರ್‌ ಕ್ಯಾಮೆರಾ, ಟೈರ್‌ ಪ್ರೆಷರ್‌ ಮಾನಿಟರಿಂಗ್‌ ಸಿಸ್ಟಂ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು