ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಇ-ಸ್ಕೂಟರ್ ‘ಕ್ರೂಸರ್’

Last Updated 7 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಒಂದು ಸಲ ಚಾರ್ಜ್ ಮಾಡಿದರೆ 120 ಕಿ.ಮೀ ದೂರ ಕ್ರಮಿಸುವ ಪರಿಸರ ಸ್ನೇಹಿ ಇ-ಸ್ಕೂಟರ್ ‘ಕ್ರೂಸರ್’ ಅನ್ನು ಒಕಿನವಾ ಸಂಸ್ಥೆಯು ಅನಾವರಣಗೊಳಿಸಿದೆ.

ನೀತಿ ಆಯೋಗದ ನಿರ್ದೇಶಕ ಅನಿಲ್ ಶ್ರೀವಾಸ್ತವ ಅವರು ‘ಕ್ರೂಸರ್‌’ ಅನಾವರಣ ಮಾಡಿದರು. ‘ಭಾರತದಲ್ಲಿಯೇ ತಯಾರಿಸಿ’ ಅಭಿಯಾನಕ್ಕೆ ಸಂಸ್ಥೆಯು ಬದ್ಧವಾಗಿ ‘ಇ-ಸ್ಕೂಟರ್’ಗಳನ್ನು ಸ್ಥಳೀಯವಾಗಿಯೇ ತಯಾರಿಸಲಾಗಿದೆ.

ಇದರಲ್ಲಿ ಗರಿಷ್ಠ ವೇಗದ ಚಾರ್ಜರ್ ಅಳವಡಿಸಲಾಗಿದೆ. 2 ರಿಂದ 3 ಗಂಟೆಯಲ್ಲಿ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ. ಇದರ ಗರಿಷ್ಠ ವೇಗ 100 ಕಿ.ಮೀ ಆಗಿದೆ. ಕಳಚಬಹುದಾದ 4 ಕೆಡಬ್ಲ್ಯುಎಚ್‌ ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ.

‘ವಿದ್ಯುತ್‌ ಚಾಲಿತ ವಾಹನ ತಯಾರಿಕೆಯಲ್ಲಿ ಕ್ರಾಂತಿ ತರುವ ನಿಟ್ಟಿನಲ್ಲಿ ಒಕಿನವಾ ಸಂಸ್ಥೆಯು ಶ್ರಮಿಸುತ್ತಿದೆ. ನಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ವಾಹನ ಮೇಳ ಉತ್ತಮ ವೇದಿಕೆ ಒದಗಿಸುತ್ತದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜೀತೆಂದರ್ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT