ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಡ್‌ ಇನ್‌ ಇಂಡಿಯಾ ವೇಗದ ಎಲೆಕ್ಟ್ರಿಕ್‌ ಬೈಕ್‌ 'ಕ್ರಿಡನ್‌': ಬೆಲೆ ₹1.29 ಲಕ್ಷ

Last Updated 10 ಸೆಪ್ಟೆಂಬರ್ 2020, 14:01 IST
ಅಕ್ಷರ ಗಾತ್ರ

ಒನ್‌ ಎಲೆಕ್ಟ್ರಿಕ್‌ ಮೋಟಾರ್‌ಸೈಕಲ್ಸ್‌ ಕಂಪನಿಯು ಮೇಡ್‌ ಇನ್ ಇಂಡಿಯಾ ಎಲೆಕ್ಟ್ರಿಕ್‌ ಬೈಕ್‌ 'ಕ್ರಿಡನ್' (KRIDN) ಬಿಡುಗಡೆ ಮಾಡಿದೆ. ಇದೇ ಅಕ್ಟೋಬರ್‌ನಿಂದ ಬೆಂಗಳೂರು ಸೇರಿದಂತೆ ನಾಲ್ಕು ನಗರಗಳಲ್ಲಿ ಬೈಕ್ ಖರೀದಿಗೆ ಸಿಗಲಿದೆ.

ಬೈಕ್ ಗಂಟೆಗೆ 95 ಕಿ.ಮೀ. ವೇಗ ಮತ್ತು ಟಾರ್ಕ್‌ 165 ಎಎಂ ಹೊಂದಿದ್ದು, ಶೂನ್ಯದಿಂದ ಗಂಟೆಗೆ 60 ಕಿ.ಮೀ. ವೇಗವನ್ನು 8 ಸೆಕೆಂಟ್‌ಗಳಲ್ಲಿ ತಲುಪುವುದಾಗಿ ಕಂಪನಿ ಹೇಳಿದೆ. ಪ್ರಸ್ತುತ ದೇಶದಲ್ಲಿ ಮಾರಾಟಕ್ಕಿರುವ ಎಲೆಕ್ಟ್ರಿಕ್‌ ಬೈಕ್‌ಗಳ ಪೈಕಿ ಕ್ರಿಡನ್ ಅತ್ಯಂತ ವೇಗದ ಮತ್ತು ಶಕ್ತಿಶಾಲಿ ವಾಹನವಾಗಿದೆ. ಸಿಯೆಟ್‌ನ ಅಗಲವಾದ ಟೈರ್‌ಗಳು, ಬಲಿಷ್ಠ ಸಸ್ಪೆನ್ಷನ್‌ಗಳಿದ್ದು ದೀರ್ಘಕಾಲ ಬಾಳಿಕೆ ಬರುವಂತೆ ತಯಾರಿಸಿರುವುದಾಗಿ ಒನ್‌ ಎಲೆಕ್ಟ್ರಿಕ್‌ ಮೋಟಾರ್‌ಸೈಕಲ್‌ ಸಿಇಒ ಗೌರವ್ ಉಪ್ಪಾಲ್‌ ತಿಳಿಸಿದ್ದಾರೆ.

ದೆಹಲಿ, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ನಂತಹ ನಗರಗಳಲ್ಲಿನ ಸಂಚಾರಕ್ಕೆ ಸುಲಭವಾಗುವಂತೆ ಬೈಕ್‌ ವಿನ್ಯಾಸಗೊಳಿಸಲಾಗಿದೆ. ಟ್ಯಾಕ್ಸಿ ಸರ್ವಿಸ್‌ ಹಾಗೂ ಡೆಲಿವರಿಗಳಿಗಾಗಿ ಇ–ಬೈಕ್‌ಗಳನ್ನು ಪೂರೈಸಲು ಕಂಪನಿ ಉತ್ಸುಕತೆ ತೋರಿದೆ. ಪ್ರಸ್ತುತ ಬೈಕ್‌ ಬೆಲೆ ₹1.29 ಲಕ್ಷ ನಿಗದಿಯಾಗಿದೆ.

ಎರಡೂ ಚಕ್ರಗಳಿಗೆ ಡಿಸ್ಕ್‌ ಬ್ರೇಕ್‌ ಅಳವಡಿಸಲಾಗಿದೆ. ಬ್ಯಾಟರಿ (5 ಕಿಲೊ ವ್ಯಾಟ್) ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 'ಎಕೊ ಮೋಡ್‌'ನಲ್ಲಿ 120 ಕಿ.ಮೀ. ಮತ್ತು ಸಾಮಾನ್ಯ ಮೋಡ್‌ನಲ್ಲಿ 80 ಕಿ.ಮೀ. ದೂರದವರೆಗೂ ಸಾಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT